ಸೋಷಿಯಲ್ ಮೀಡಿಯಾ ಸೇಫ್ಟಿ: ಹ್ಯಾಕರ್ಸ್ ಹಾವಳಿಯಿಂದ ಪಾರಾಗಲು ಈ ಟಿಪ್ಸ್ ಸಾಕು!

ಭಾನುಪ್ರಿಯ ಡಿ.ಕೆ

ಸೋಷಿಯಲ್ ಮೀಡಿಯಾ ಸೇಫ್ಟಿ: ಹ್ಯಾಕರ್ಸ್ ಹಾವಳಿಯಿಂದ ಪಾರಾಗಲು ಈ ಟಿಪ್ಸ್ ಸಾಕು!

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳ ಗೌಪ್ಯತೆಗಳು ಬಹಳ ಬೇಗನೆ ಹ್ಯಾಕ್​ ಆಗುತ್ತವೆ. ಇದರಿಂದ ಅನೇಕ ರೀತಿಯ ತೊಂದರೆಗಳಿಗೆ ಸಿಲುಕಬಹುದು. ಹಾಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಸುರಕ್ಷಿತವಾಗಿರಲು 5 ಮುಖ್ಯ ಸಲಹೆಗಳು ಇಲ್ಲಿವೆ

ಪ್ರೈವಸಿ ಸೆಟ್ಟಿಂಗ್‌ಗಳನ್ನು ಸರಿಯಾಗಿ ಹೊಂದಿಸಿಕೊಳ್ಳಿ

ನಿಮ್ಮ ಪೋಸ್ಟ್‌ಗಳು, ಫೋಟೋಗಳು ಮತ್ತು ಪ್ರೊಫೈಲ್ ಮಾಹಿತಿಯನ್ನು"Friends Only" ಅಥವಾ "Private" ಮಾಡಿ. ಪಬ್ಲಿಕ್ ಆಗಿರುವುದನ್ನು ತಪ್ಪಿಸಿ. ಪ್ರತಿ ತಿಂಗಳು ಒಮ್ಮೆ ಸೆಟ್ಟಿಂಗ್‌ಗಳನ್ನು ಚೆಕ್ ಮಾಡಿ.

ಬಲವಾದ ಪಾಸ್‌ವರ್ಡ್ ಬಳಸಿ

ಒಂದೇ ಪಾಸ್‌ವರ್ಡ್ ಎಲ್ಲಾ ಖಾತೆಗಳಿಗೆ ಬಳಸಬೇಡಿ. ದೊಡ್ಡದು, ವಿಶೇಷ ಅಕ್ಷರಗಳೊಂದಿಗೆ, ಸಂಖ್ಯೆಗಳೊಂದಿಗೆ ಪಾಸ್‌ವರ್ಡ್ ಇರಿಸಿ. ಎರಡು ಹಂತದ ದೃಢೀಕರಣ ಆನ್ ಮಾಡಿ. ಇದು ಹ್ಯಾಕರ್‌ಗಳಿಗೆ ಖಾತೆ ಪ್ರವೇಶಿಸುವುದನ್ನು ತುಂಬಾ ಕಷ್ಟ ಮಾಡುತ್ತದೆ.

ವೈಯಕ್ತಿಕ ಮಾಹಿತಿಯನ್ನು ಹೆಚ್ಚು ಹಂಚಿಕೊಳ್ಳಬೇಡಿ

ವಿಳಾಸ, ಫೋನ್ ಸಂಖ್ಯೆ, ಹುಟ್ಟಿದ ದಿನಾಂಕ, ಲೊಕೇಶನ್, ರಜೆಯ ವಿವರಗಳು ಅಥವಾ ಮನೆಯ ಫೋಟೋಗಳನ್ನು ಪೋಸ್ಟ್ ಮಾಡಬೇಡಿ. ಇದು ಗುರುತಿನ ಕಳ್ಳತನ, ಫಿಶಿಂಗ್ ಅಥವಾ ಸ್ಟಾಕಿಂಗ್‌ಗೆ ಕಾರಣವಾಗಬಹುದು.

ಲಿಂಕ್‌ಗಳು ಫ್ರೆಂಡ್ ರಿಕ್ವೆಸ್ಟ್‌ಗಳನ್ನು ಎಚ್ಚರಿಕೆಯಿಂದ ನೋಡಿ

ಅಪರಿಚಿತರು ಕಳುಹಿಸಿದ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ. ಇದು ಮಾಲ್‌ವೇರ್ ಅಥವಾ ಫಿಶಿಂಗ್ ಆಗಿರಬಹುದು. ಫ್ರೆಂಡ್ ರಿಕ್ವೆಸ್ಟ್ ಬಂದರೆ ನಿಜವಾದ ವ್ಯಕ್ತಿಯೇ ಎಂದು ಖಚಿತಪಡಿಸಿಕೊಳ್ಳಿ. ಸಂದೇಹ ಬಂದರೆ ರಿಪೋರ್ಟ್ ಮಾಡಿ ಅಥವಾ ಬ್ಲಾಕ್ ಮಾಡಿ.

ಅನುಚಿತ ಕಂಟೆಂಟ್ ಕಂಡರೆ ತಕ್ಷಣ ರಿಪೋರ್ಟ್ ಮಾಡಿ

ಯಾವುದೇ ಥ್ರೆಟ್, ಕಿರುಕುಳ, ಅಶ್ಲೀಲ ಸಂದೇಶ ಅಥವಾ ಫೇಕ್ ಪ್ರೊಫೈಲ್ ಕಂಡರೆ ಪ್ಲಾಟ್‌ಫಾರ್ಮ್‌ನ ರಿಪೋರ್ಟ್ ಆಪ್ಷನ್ ಬಳಸಿ. ಸ್ಕ್ರೀನ್‌ಶಾಟ್ ತೆಗೆದುಕೊಳ್ಳಿ ಮತ್ತು ಅಗತ್ಯವಿದ್ದರೆ ಸೈಬರ್ ಕ್ರೈಂ ಸೆಲ್‌ಗೆ ದೂರು ನೀಡಿ.