ಫುಟ್​​ಬಾಲ್​​ ಆಟಗಾರನೊಂದಿಗೆ ನೋರಾ ಫತೇಹಿ ವಿವಾಹ...!

ಭೂಮಿಕಾ ವಿ. ನಾಥ್​​​

ಫುಟ್​​ಬಾಲ್​​ ಆಟಗಾರನೊಂದಿಗೆ ನೋರಾ ಫತೇಹಿ ವಿವಾಹ...!

ನೃತ್ಯಗಾತಿ ಮತ್ತು ನಟಿ ನೋರಾ ಫತೇಹಿ ಈಗ ತಮ್ಮ ಖಾಸಗಿ ಜೀವನದ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಖ್ಯಾತ ಯುವ ಫುಟ್​ಬಾಲ್​ ಆಟಗಾರನನ್ನ ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ವಿವಾಹವಾಗಲಿದ್ದಾರೆ

ಮದುವೆ ಬಗ್ಗೆ ವದಂತಿಗಳು ಜೋರಾಗಿ ಹರಿದಾಡುತ್ತಿದ್ದು, ಸದ್ಯ ಪ್ರೀತಿಸುತ್ತಿರುವ ಯುವ ಫುಟ್​ಬಾಲ್​​ ಆಟಗಾರನನ್ನೇ ಮದುವೆಯಾಗುತ್ತಾರಂತೆ.

ಡ್ಯಾನ್ಸ್​​ನಿಂದ ಖ್ಯಾತಿ

ದಿಲ್​ಬರ್​, ಸಾಕಿ-ಸಾಕಿ, ಕುಸು-ಕುಸು ಹಾಡಿನಲ್ಲಿ ಮಿಂಚಿದ್ದ ನೋರಾ ನಟನೆ ಮತ್ತು ಡ್ಯಾನ್ಸ್​ ಎರಡಕ್ಕೂ ಸೈ.

ಫುಟ್​ಬಾಲ್​ ಆಟಗಾರನ ಪರಿಚಯ

2022ರ ಫೀಪಾ ವರ್ಲ್ಡ್​​ ಕಪ್​ನಲ್ಲಿ ನೋರಾ ಪ್ರದರ್ಶನ್ ನೀಡಿದ್ದರು. ಈ ಸಂದರ್ಭದಲ್ಲಿ ಇಬ್ಬರ ನಡುವೆ ಪ್ರೀತಿಯಾಗಿದೆ ಎಂದು ಹೇಳಲಾಗುತ್ತಿದೆ.

ಖಾಸಗಿ ಜೀವನವನ್ನ ಸುದ್ದಿ ಮಾಡಲ್ಲ

ನೋರಾ ಆದಷ್ಟು ತಮ್ಮ ಖಸಗಿ ಜೀವನವನ್ನ ಗುಟ್ಟಾಗಿಯೇ ಇಟ್ಟುಕೊಳ್ಳೋಕೆ ಇಚ್ಛಿಸುತ್ತಾರೆ. ಹಾಗಾಗಿ ಇಬ್ಬರೂ ಗುಟ್ಟಾಗಿಯೇ ಮದುವೆಯಾಗಲಿದ್ದಾರೆ ಎನ್ನಲಾಗುತ್ತಿದೆ.

ಬಾಯ್​​ಫ್ರೆಂಡ್​​ ನೋಡಲು ಹೋಗಿದ್ರು

ಇತ್ತೀಚೆಗೆ ನೋರಾ ಮೊರಾಕ್ಕೊನಲ್ಲಿ ಫುಟ್​ಬಾಲ್​ ಪಂದ್ಯಾವಳಿ ವೀಕ್ಷಿಸಲು ಹೋಗಿದ್ದು, ಇದಕ್ಕೆ ಅವರ ಬಾಯ್​ಫ್ರೆಂಡರ್​​ ಕಾರಣ ಎಂದು ಹೇಳಲಾಗುತ್ತಿದೆ.