ಮಗ್ಗದ ಸೀರೆಯಲ್ಲಿ ಶೋಭಿತಾ ಮಿಂಚಿಂಗ್
ಕೈಮಗ್ಗದ ಸೀರೆಗಳಿಗೆ ಬೆಂಬಲ ಸೂಚಿಸುವ ಸಲುವಾಗಿ ಶೋಭಿತಾ ಧೂಳಿಪಾಲ ಅವರು ಗದ್ವಾಲ್ ಮೂಲದ ಸೀರೆಯನ್ನು ಉಟ್ಟು ಇನ್ಸ್ಟಾಗ್ರಾಮ್ನಲ್ಲಿ ಫೋಟೋ ಹಂಚಿಕೊಂಡಿರುವುದು ಭಾರಿ ವೈರಲ್ ಆಗಿದೆ. ಸಾಮಾನ್ಯವಾಗಿ ಗೋವಾ ಪ್ರವಾಸ ಎಂದರೆ ಪಾಶ್ಚಿಮಾತ್ಯ ಬಟ್ಟೆ ಧರಿಸಿ ಮಿಂಚುತ್ತಾರೆ. ಆದರೆ, ಶೋಭಿತಾ ಅವರ ಈ ಹೊಸ ಲುಕ್ ಕಂಡು ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.