ಪ ರಂಜಿತ್ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಟಾಲಿವುಡ್ ನಟಿ ಶೋಭಿತಾ ಧೂಳಿಪಾಲ ನಟಿಸಿದ್ದಾರೆ. ಅವರೊಬ್ಬ ಸ್ಟೈಲ್ ಐಕಾನ್ ಹೇಗೆ ಎಂಬುದನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡ ಪೋಸ್ಟ್ನಿಂದ ಬಹಿರಂಗಪಡಿಸದ್ದಾರೆ.
ಮರೂನ್ ಸೀರೆಯಲ್ಲಿ ಮಿಂಚಿಂಗ್
ಮರೂನ್ ಹಾಗೂ ಕಪ್ಪು ಬಣ್ಣವುಳ್ಳ ಸೀರೆಯನ್ನು ಶೋಭಿತಾ ಉಟ್ಟಿದ್ದು. ಇದಜ್ಜೆ ಗಾಢ ಕಪ್ಪು ಸ್ಲೀವ್ ಲೆಸ್ ಬ್ಲೌಸ್ ಧರಿಸಿದ್ದಾರೆ. ದೊಡ್ಡದಾದ ಕುಂಕುಮ ಬಿಂದಿ, ಚದರಿದ ಕೂದಲನ್ನೇ ಒಟ್ಟಾಗಿಸಿ ಹಾಕಿಕೊಂಡಿರುವ ಹೇರ್ ಬನ್. ಸಿಂಪಲ್ ಮೇಕಪ್ ಸಾಂಪ್ರದಾಯಿಕ ಹೆಣ್ಣು ಎನ್ನುವಂತೆ ತೋರ್ಪಡಿಸುತ್ತದೆ.
ವೇಟ್ಟುವಂ ಬಗ್ಗೆ
ಪಾ ರಂಜಿತ್ ನಿರ್ದೇಶನದ ವೇಟ್ಟುವಂ ಸಿನಿಮಾವನ್ನು ಲರ್ನ್ ಆಂಡ್ ಟೀಚ್ ಸಹಯೋಗದಲ್ಲಿ ನೀಲಂ ಪ್ರೊಡಕ್ಷನ್ ನಿರ್ದೇಶೀಸಿದೆ. ವರ್ಲ್ಡ್ ಆಫ್ ವೇಟ್ಟುವಂ ಎಂದು ಟೀಸರ್ ಬಿಡುಗಡೆ ಮಾಡಲಾಗಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ.
ಯಾವುದಕ್ಕೆ ಯಾರ ಧ್ವನಿ
ಕನ್ನಡದ ವೇಟ್ಟುವಂಗೆ ಕಿಚ್ಚ ಸುದೀಪ್ ದನಿ ಕೊಟ್ಟಿದ್ದರೆ, ಇನ್ನು ಹಿಂದಿಗೆ ಪಂಕಜ್ ತ್ರಿಪಾಠಿ, ತೆಲುಗಿಗೆ ರಾಣಾ ದಗ್ಗುಬಾಟಿ, ಮಲಯಾಳಂ ಆವೃತ್ತಿಗೆ ಸೌಬಿನ್ ಶಾಹಿರ್ ಧ್ವನಿ ನೀಡಿದ್ದಾರೆ. ನೀರ್ದೇಶಕ ಪಾ ರಂಜಿತ್ ಅವರು ತಮಿಳು ಅವತರಣಿಗೆ ದನಿ ನೀಡಿದ್ದಾರೆ.
ಚೀಕಟ್ಲೋ ಸಿನಿಮಾ ಕೊನೆಯದು
ಶೋಭಿತಾ ಧೂಳಿಪಾಲ ಅವರು ಅಷ್ಟಾಗಿ ತೆರೆ ಮೇಲೆ ಕಾಣಿಸಿಕೊಂಡಿಲ್ಲ. ನಾಗಚೈತನ್ಯರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ಅವರು..ಕೊನೆಯದಾಗಿ ಕಾಣಿಸಿಕೊಂಡಿದ್ದು ಒಟಿಟಿಯಲ್ಲಿ ರಿಲೀಸ್ ಆಗಿದ್ದ ಚೀಕಟ್ಲೋ ಸಿನಿಮಾ ಮೂಲಕ. ಇದು ಅಷ್ಟಾಗಿ ಪ್ರತಿಕ್ರಿಯೆ ಪಡೆದುಕೊಂಡಿಲ್ಲ.
ವೇಟ್ಟುವಂಗಾಗಿ ತರಬೇತಿ
ಸದ್ಯ ಕಾಲಿವುಡ್ ಅಂಗಳದಲ್ಲಿ ವೇಟ್ಟುವಂ ಸಿನಿಮಾ ಅಬ್ಬರಿಸುತ್ತಿದೆ. ಶೋಭಿತಾ ಅವರು ಈ ಸಿನಿಮಾಕ್ಕಾಗಿ ಮಲ್ಲಕಂಬ ಮತ್ತು ಅಡಿಮುರೈ ಕಲಿತುಕೊಂಡಿದ್ದಾರೆ ಎನ್ನಲಾಗಿದೆ.
ಶೋಭಿತಾ ಧೂಳಿಪಾಲ ಸಿನಿಮಾ
ಪೊನ್ನಿಯನ್ ಸೆಲ್ವನ್ ಭಾಗ ಒಂದು ಮತ್ತು ಎರಡು, ಮೇಜರ್, ಗೂಢಾಚಾರಿ, ಕುರೂಪ್, ರಾನನ್ ರಾಘವ್ ಮಂಕಿ ಮ್ಯಾನ್, ಗೂಢಚಾರಿ, ಲವ್ ಸಿತಾರ ಸೇರಿದಂತೆ ಹಲವು ಸಿನಿಮಾದಲ್ಲಿ ನಟಿಸಿದ್ದಾರೆ.
ಒಟಿಟಿಯಲ್ಲು ನಟನೆ
ಶೋಭಿತಾ ಅವರು ಮೇಡ್ ಇನ್ ಹೆವನ್, ದಿ ನೈಟ್ ಮ್ಯಾನೇಜರ್, ಚೀಕಟ್ಲೋ ಮತ್ತು ಬಾರ್ಡ್ ಆಫ್ ಬ್ಲಡ್ ಚಿತ್ರದಲ್ಲಿ ನಟಿಸಿದ್ದಾರೆ.
ನಟಿ ಮಾತ್ರವಲ್ಲ ಮಾಡಲ್ ಸಹ ಹೌದು
ಶೋಭಿತಾ ಧೂಳಿಪಾಲ ಅವರು ನಟಿ ಮಾತ್ರವಲ್ಲ ಮಾಡೆಲ್ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಫೆಮಿನಾ ಮಿಸ್ ಇಂಡಿಯಾ ಅರ್ಥ್ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದರು.