ತಾಯಿಯಾಗುತ್ತಿದ್ದಾರೆ ''ಸು ಫ್ರಮ್​ ಸೋ'' ಭಾನು

ಭೂಮಿಕಾ ವಿ. ನಾಥ್​​​

ತಾಯಿಯಾಗುತ್ತಿದ್ದಾರೆ ''ಸು ಫ್ರಮ್​ ಸೋ'' ಭಾನು

‘ಸು ಫ್ರಮ್ ಸೋ’ ಸಿನಿಮಾದಲ್ಲಿ ಭಾನು ಪಾತ್ರ ಮಾಡಿದ ಸಂಧ್ಯಾ ಅರಕೆರೆ ಬಾಳಲ್ಲಿ ಈಗ ಖುಷಿಯ ಕ್ಷಣ ಬಂದಿದೆ. ಅವರು ಶೀಘ್ರವೇ ತಾಯಿ ಆಗುತ್ತಿದ್ದಾರೆ. ಬೇಬಿ ಬಂಪ್ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

‘ಸು ಫ್ರಮ್ ಸೋ’ ಚಿತ್ರದ ಭಾನು ಪಾತ್ರದ ಮೂಲಕ ಹೆಸರುವಾಸಿ

ಸಂಧ್ಯಾ ಅವರು ರಂಗಭೂಮಿ ಕಲಾವಿದೆ. ಹಲವು ನಾಟಕಗಳಲ್ಲಿ ನಟಿಸಿರೋ ಇವರು ಭಾನು ಪಾತ್ರದ ಮೂಲಕ ಹೆಸರುವಾಸಿಯಾಗಿದ್ದಾರೆ.

ಸು ಫ್ರಮ್ ಸೋ’ ಬಳಿಕ ಸಾಕಷ್ಟು ಆಫರ್​​

‘ಸು ಫ್ರಮ್ ಸೋ’ ಬಳಿಕ ಅವರಿಗೆ ಹಲವು ಆಫರ್​​ಗಳು ಬರುತ್ತಿವೆ. ಎಲ್ಲಾ ಚಿತ್ರಗಳನ್ನು ಅವರು ಒಪ್ಪಿ ನಟಿಸುತ್ತಿಲ್ಲ.

ಮಂಡ್ಯ ಜಿಲ್ಲೆಯ ಅರಕೆರೆಯವರು

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಅರಕೆರೆ ಅವರ ಊರು. ನೀನಾಸಂ ಅಲ್ಲಿ ವರು ನಟನೆ ಕಲಿತಿದ್ದಾರೆ.

ಸೀಮಂತ ಶಾಸ್ತ್ರ ಕಳೆದ ತಿಂಗಳು ನೆರವೇರಿತ್ತು

ಕಳೆದ ತಿಂಗಳು ಸಂಧ್ಯಾ ಅರಕೆರೆ ಅವರ ಸೀಮಂತ ಶಾಸ್ತ್ರ ನೆರವೇರಿದೆ. ಅವರ ಕುಟುಂಬದವರು ಇದರಲ್ಲಿ ಭಾಗಿ ಆಗಿದ್ದರು.