ಸ್ಮೃತಿ ಭಾವಿ ಪತಿಗೂ ಅನಾರೋಗ್ಯ

ಭೂಮಿಕಾ ವಿ. ನಾಥ್​​​

ಸ್ಮೃತಿ ಭಾವಿ ಪತಿಗೂ ಅನಾರೋಗ್ಯ

ಸ್ಮೃತಿ ಮಂಧಾನ ಅವರ ತಂದೆ ಶ್ರೀನಿವಾಸ್ ಮಂಧಾನ ಅವರಿಗೆ ಹೃದಯಾಘಾತವಾಗಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ಸ್ಮೃತಿ ಭಾವಿ ಪತಿಗೂ ಪಲಾಶ್​​ ಮುಚ್ಚಲ್​​​ಗೆ ಎಸಿಡಿಟಿಯಾಗಿದ್ದು ಅವರನ್ನೂ ನಿನ್ನೆ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು

ಪಲಾಶ್​ ಮುಚ್ಚಲ್​ಗೆ ವೈರಲ್​​ ಇನ್ಫೆಕ್ಷನ್​

ಸ್ಮೃತಿ ಭಾವಿ ಪತಿ ಪಲಾಶ್​ ಮುಚ್ಚಲ್​ಗೆ ವೈರಲ್​​ ಇನ್ಫೆಕ್ಷನ್​ ಮತ್ತು ಎಸಿಡಿಟಿ ಕಾಣಿಸಿಕೊಂಡಿದ್ಕದು, ಆಸ್ಸ್ಮಿಪತ್ಕರೆಗೆ ದಾಖಲಾಗಿದ್ದಾರೆ. ತಂದೆಗೆ ಹೃದಯಾಘಾತ ಮತ್ತು ಭಾವಿ ಪತಿಗೆ ಎಸಿಡಿಟಿ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮದುವೆಯನ್ನ ಮುಂದೂಡಲಾಗಿದೆ.

ಮದುವೆ ಶಾಸ್ತ್ರಗಳು ಅದ್ಧೂರಿಯಾಗಿತ್ತು

ಮದುವೆಗೆ ಮುನ್ನ ಹಳದಿ, ಸಂಗೀತ್, ಪ್ರೀ-ವೆಡ್ಡಿಂಗ್ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆದಿದ್ದವು. ಸಾಮಾಜಿಕ ಜಾಲತಾಣಗಳಲ್ಲಿ ಈ ಕಾರ್ಯಕ್ರಮಗಳ ಫೋಟೋಗಳು ಮತ್ತು ವಿಡಿಯೋಗಳು ವೈರಲ್ ಆಗಿದ್ದವು.

ಸ್ಮೃತಿ ತಂದೆ ಆರೋಗ್ಯ ಸ್ಥಿರವಾಗಿದೆ

ವರದಿಗಳ ಪ್ರಕಾರ, ಶ್ರೀನಿವಾಸ್ ಮಂಧಾನ ಅವರ ಆರೋಗ್ಯ ಸ್ಥಿತಿ ಈಗ ಸ್ಥಿರವಾಗಿದೆ, ಆದರೆ ಅವರು ಇನ್ನೂ ವೈದ್ಯಕೀಯ ಮೇಲ್ವಿಚಾರಣೆಯಲ್ಲಿದ್ದಾರೆ. ಪಲಾಶ್​ ಮುಚ್ಚಲ್​ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ.

ಅನಿರೀಕ್ಷಿತ ಘಟನೆಯಿಂದ ಶಾಕ್

ಸ್ಮೃತಿ ಮಂಧಾನ ಅವರ ಮದುವೆಗೆ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಹಲವು ಸದಸ್ಯರು ಹಾಜರಾಗಲು ಸಿದ್ಧರಾಗಿದ್ದರು. ಆದರೆ ಈ ಘಟನೆ ಕಾರಣದಿಂದ ಎಲ್ಲರೂ ಆಸ್ಪತ್ರೆಗೆ ಧಾವಿಸಿದರು.