ನಮ್ಮ ದೇಹದಲ್ಲಿ ಕಾರ್ಟಿಸಾಲ್ ಸಹಜವಾಗಿ ಬೆಳಿಗ್ಗೆ 2-4 ಗಂಟೆ ನಡುವೆ ಹೆಚ್ಚಾಗುತ್ತದೆ. ಒತ್ತಡ, ಆತಂಕ ಅಥವಾ ಕ್ರಾನಿಕ್ ಸ್ಟ್ರೆಸ್ ಕಾಣಿಸಿಕೊಳ್ಳುವುದರಿಂದ ಪ್ರತಿದಿನ ಬೆಳಿಗ್ಗೆ 3-4 ಗಂಟೆ ನಡುವೆ ಎಚ್ಚರವಾಗುತ್ತದೆ.
ಕಾರ್ಟಿಸಾಲ್ ಹಾರ್ಮೋನ್ ಸ್ಪೈಕ್
ಇದು ಮುಂಚಿತವಾಗಿ ಅಥವಾ ತೀವ್ರವಾಗಿ ಏರುವುದರಿಂದ ನಿಮ್ಮನ್ನು ಎಚ್ಚರಗೊಳಿಸುತ್ತದೆ. ಇದು ಅತ್ಯಂತ ಸಾಮಾನ್ಯ ಕಾರಣವಾಗಿದೆ.
ನಿದ್ರೆಯ ಸೈಕಲ್‌ನಲ್ಲಿ ಲೈಟ್ ಸ್ಲೀಪ್ ಹಂತ
ರಾತ್ರಿಯ ನಂತರದ ಭಾಗದಲ್ಲಿ ಕನಸುಗಳ ಹಂತ ಹೆಚ್ಚುತ್ತದೆ ಮತ್ತು ನಿದ್ರೆ ಹಗುರವಾಗುತ್ತದೆ. ನೀವು ಒಂದೇ ಸಮಯದಲ್ಲಿ ಮಲಗುತ್ತಿದ್ದರೆ, ಪ್ರತಿದಿನ ಅದೇ ಸಮಯದಲ್ಲಿ ಈ ಹಗುರ ಹಂತಕ್ಕೆ ಬರುತ್ತೀರಿ ಇದರಿಂದ ಸಣ್ಣ ಶಬ್ದ, ಬೆಳಕು ಅಥವಾ ದೇಹದ ಸಣ್ಣ ಬದಲಾವಣೆಯಿಂದಲೇ ಎಚ್ಚರವಾಗುತ್ತೀರಿ.
ಆತಂಕ, ಒತ್ತಡ ಅಥವಾ ಡಿಪ್ರೆಷನ್
ಮಧ್ಯರಾತ್ರಿಯಲ್ಲಿ ಮನಸ್ಸು ಶಾಂತವಾಗಿರುತ್ತದೆ. ಚಿಂತೆಗಳು, ಕೆಲಸದ ಒತ್ತಡ, ಭವಿಷ್ಯದ ಭಯ ಇತ್ಯಾದಿ ತೀವ್ರವಾಗಿ ತಲೆಯಲ್ಲಿ ಓಡಾಡುತ್ತವೆ. ಇದು ಮೆದುಳನ್ನು ಅಲರ್ಟ್ ಮಾಡಿ ಎಚ್ಚರಗೊಳಿಸುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಇದು ಮುಖ್ಯ ಕಾರಣವಾಗಿದೆ.
ರಕ್ತದಲ್ಲಿ ಸಕ್ಕರೆ ಕಡಿಮೆಯಾಗುವುದು
ಸಂಜೆ ಬೇಗ ಊಟ ಮಾಡಿದರೆ ಅಥವಾ ರಾತ್ರಿ ಆಲ್ಕೊಹಾಲ್ ಸೇವಿಸಿದರೆ, 3-4 ಗಂಟೆಗೆ ರಕ್ತದ ಸಕ್ಕರೆ ಕಡಿಮೆಯಾಗಬಹುದು. ಇದರಿಂದ ದೇಹ ಎಚ್ಚರಗೊಳ್ಳುತ್ತದೆ.
ಇತರ ಆರೋಗ್ಯ ಸಮಸ್ಯೆಗಳು
ಮೂತ್ರಕೋಶ ಸಮಸ್ಯೆ, ಉಸಿರು ನಿಲ್ಲುವುದು, ಹಾರ್ಮೋನ್ ಬದಲಾವಣೆಗಳು, ಬೆಳಕು, ಶಬ್ದ, ಅಥವಾ ತಾಪಮಾನದ ವ್ಯತ್ಯಾಸದಿಂದ ಎಚ್ಚರಗೊಳ್ಳುತ್ತಾರೆ