'ಸೀತಾ ರಾಮಂ' ಸುಂದರಿ ಮೃಣಾಲ್​!

ವಿನಾಯಕ ನಾಯಕ

ಮೃಣಾಲ್​ ಠಾಕೂರ್ ಮೂಲ

ಮೃಣಾಲ್ ಠಾಕೂರ್ ಅವರು ಆಗಸ್ಟ್ 1, 1992 ರಂದು ಮಹಾರಾಷ್ಟ್ರದ ಧುಲೆ ನಗರದಲ್ಲಿ ಜನಿಸಿದರು. ಇವರು ಹಿಂದಿ ಮತ್ತು ತೆಲುಗು ಚಾನೆಲ್‌ಗಳು ಹಾಗೂ ಚಿತ್ರರಂಗದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪನ್ನು ಮೂಡಿಸಿರುವ ಪ್ರತಿಭಾವಂತ ಜನಪ್ರಿಯ ಭಾರತೀಯ ನಟಿಯಾಗಿದ್ದಾರೆ.

ಮೊದಲು ಕಿರುತೆರೆ

ಮೃಣಾಲ್ ತಮ್ಮ ನಟನಾ ವೃತ್ತಿಯನ್ನು ಕಿರುತೆರೆಯ ಮೂಲಕ ಪ್ರಾರಂಭಿಸಿದರು. ಜನಪ್ರಿಯ ಧಾರಾವಾಹಿಯಾದ 'ಕುಂಕುಮ್ ಭಾಗ್ಯ'ದಲ್ಲಿ ಬುಲ್ಬುಲ್ ಪಾತ್ರವನ್ನು ನಿರ್ವಹಿಸುವ ಮೂಲಕ ಕಿರುತೆರೆ ವೀಕ್ಷಕರ ಮನಸ್ಸಿನಲ್ಲಿ ದೊಡ್ಡ ಮಟ್ಟದ ಜನಪ್ರಿಯತೆ ಮತ್ತು ಗುರುತನ್ನು ಪಡೆದರು.

ಸಿನಿಮಾ ಪ್ರವೇಶ

ಮೃಣಾಲ್ ಠಾಕೂರ್ 2018ರಲ್ಲಿ ಬಿಡುಗಡೆಯಾದ 'ಲವ್ ಸೋನಿಯಾ' ಚಿತ್ರದ ಮೂಲಕ ಸಿನಿಮಾರಂಗಕ್ಕೆ ಪದಾರ್ಪಣೆ ಮಾಡಿದರು. ಈ ಚಿತ್ರದಲ್ಲಿನ ಗಂಭೀರ ಹಾಗೂ ಸವಾಲಿನ ಪಾತ್ರಕ್ಕಾಗಿ ಅವರಿಗೆ ವಿಮರ್ಶಕರಿಂದ ಭಾರಿ ಪ್ರಶಂಸೆ ಹಾಗೂ ಮೆಚ್ಚುಗೆ ವ್ಯಕ್ತವಾಯಿತು.

ಯಶಸ್ವಿ ಸಿನಿಮಾಗಳು

ಬಾಲಿವುಡ್‌ನಲ್ಲಿ ಹತಿಕ್ ರೋಷನ್ ಜೊತೆ 'ಸೂಪರ್ 30' ಮತ್ತು ಜಾನ್ ಅಬ್ರಾಹಂ ಜೊತೆ 'ಬಟ್ಲಾ ಹೌಸ್' ಮುಂತಾದ ಯಶಸ್ವಿ ವಾಣಿಜ್ಯ ಸಿನಿಮಾಗಳಲ್ಲಿ ನಾಯಕಿಯಾಗಿ ಅಭಿನಯಿಸುವ ಮೂಲಕ ಹಿಂದಿ ಪ್ರೇಕ್ಷಕರ ಮೆಚ್ಚಿನ ಪ್ರಮುಖ ನಟಿಯರಲ್ಲಿ ಒಬ್ಬರಾಗಿ ಹೊರಹೊಮ್ಮಿದರು.

ಸೀತಾ ರಾಮಂ ತಂದುಕೊಟ್ಟ ಖ್ಯಾತಿ

2022 ರಲ್ಲಿ ತೆಲುಗಿನಲ್ಲಿ ದುಲ್ಕರ್ ಸಲ್ಮಾನ್ ಜೊತೆ ನಟಿಸಿದ 'ಸೀತಾ ರಾಮಮ್' ಸಿನಿಮಾದಲ್ಲಿ ಮೃಣಾಲ್​ ಸೀತಾ ಮಹಾಲಕ್ಷ್ಮೀ (ಮಹಾರಾಣಿ ನೂರ್ ಜಹಾನ್​) ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಈ ಸಿನಿಮಾ ಮೃಣಾಲ್​ ಠಾಕೂರ್​ಗೆ ಭಾರತದಾದ್ಯಂತ ಭರ್ಜರಿ ಖ್ಯಾತಿಯನ್ನು ತಂದುಕೊಟ್ಟಿತು.