ಮಮತಾ
ಸೀರೆಗೆ ನಾಲ್ಕು ದಶಕಗಳ ಇತಿಹಾಸವಿದೆ. 1983ರಲ್ಲಿ ನಡೆದ ಅಪ್ಪನ ಮದುವೆಯ ಸಂದರ್ಭದಲ್ಲಿ ಅಜ್ಜಿಗಾಗಿ ಈ ಸೀರೆಯನ್ನು ಕೊಟ್ಟರು. ಅಮ್ಮ ಇಲ್ಲಿಯವರೆಗೂ ಜೋಪಾನವಾಗಿ ಮತ್ತು ಭದ್ರವಾಗಿ ಸಂರಕ್ಷಿಸಿಟ್ಟಿದ್ದರು. ಸದ್ಯ ಈ ಕಾಲಘಟ್ಟದಲ್ಲಿ ಈ ವಿಶೇಷ ಸೀರೆಯನ್ನು ಧರಿಸುವ ಅವಕಾಶ ಈಗ ಮಗಳಿಗೂ ಸಿಕ್ಕಿದೆ. ನೆನಪು ಮರುಕಳಿಸಿದೆ ಎಂದು ಬರೆದುಕೊಂಡಿದ್ದಾರೆ.
ಮೆಲ್ಲನೇ ಧ್ಯಾನಿಸು ಹಾಡಿನ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ಮೂಲಕ ಸಾಕಷ್ಟು ಚಿರಪರಿಚಿತರಾದ ಸಿರಿ ರವಿಕುಮಾರ್ ಅವರು ತಮ್ಮ ಅಜ್ಜಿಯ ಸೀರೆಯುಟ್ಟು ಫೋಟೋಶೂಟ್ ಮಾಡಿಸಿಕೊಂಡಿರುವ ಪೋಸ್ಟ್ ನೆಟ್ಟಿಗರ ಮನ ಗೆದ್ದಿದೆ.
ಮೈಸೂರಿನ ಮೋಡಿ ಮಾಡುವ ಹಳೆಯ ಬೀದಿಗಳು, ಆಕರ್ಷಕ ಮೂಲೆಗಳು ಮತ್ತು ಛಾಯಾಗ್ರಹಣಕ್ಕೆ ಪೂರಕವಾದ ನೈಸರ್ಗಿಕ ಬೆಳಕು ಈ ಅನುಭವವನ್ನು ಮತ್ತಷ್ಟು ಮಧುರವಾಗಿಸಿದೆ. ಮೈಸೂರು ನಗರದ ಅಂದವನ್ನು ಸವಿಯುತ್ತಾ ನಡೆದ ಈ ಫೋಟೋ ವಾಕ್ ಅತ್ಯಂತ ಸ್ಮರಣೀಯವಾಯಿತು ಎಂದು ತಿಳಿಸಲಾಗಿದೆ.
ಸಿರಿ ರವಿಕುಮಾರ್ ನಟಿ ಮಾತ್ರವಲ್ಲಿ ಅವರು ರೆಡಿಯೋ ಜಾಕಿ, ರಿಯಾಲಿಟಿ ಶೋಗೆ ನಿರೂಪಕಿ. ವಾಯ್ಸ್ ಆರ್ಟಿಸ್ಟ್, ರಂಗಭೂಮಿ ಕಲಾವಿದೆಯಾಗಿ ಮಿಂಚಿ ಹೆಸರು ಮಾಡಿದ್ದಾರೆ.
ಸಿರಿ ರವಿಕುಮಾರ್ ಅವರು ಟಾಕ್ಸಿಕ್ ಸಿನಿಮಾದಲ್ಲಿ ನಟಿ ನಯನಾತಾರ ಅವರು ಅಭಿನಯಿಸಿದ ಗಂಗಾ ಪಾತ್ರಕ್ಕೆ ವಾಯ್ಸ್ ಕೊಟ್ಟಿದ್ದಾರೆ. ಆ ಬಗ್ಗೆ ಸ್ವತಃ ಅವರೇ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಮಾಹಿತಿ ಹಂಚಿಕೊಂಡಿದ್ದರು.
ಸ್ವಾತಿ ಮುನ್ನತಿನ ಮಳೆ ಹನಿಯೇ, ಬಿಸಿ ಬಿಸಿ ಐಸ್ಕ್ರೀ, ಸಕುಟುಂಬ ಸಮೇತ, ಶೋಧ, ಓ2, ಬ್ಯಾಚುಲರ್ ಪಾರ್ಟಿ, ಹೋಪ್, ಕವಲುದಾರಿ,ಹರಿಶಡ್ವರ್ಗ,ಬೈ ಮಿಸ್ಟೇಕ್, ಲವಿಷ್ಕ ಸಿನಿಮಾದಲ್ಲಿ ನಟಿಸಿದ್ದಾರೆ.
ಸಿರಿ ಮತ್ತು ಕಿಶೋರ್ ನಟನೆಯ ನಾಟಕ ಲವ್ ಲೆಟರ್ಸ್ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಎಆರ್ ಗಹರ್ನಿ ಅವರು ಬರೆದ ನಾಟಕವನ್ನು ಇಬ್ಬರು ಕನ್ನಡಕ್ಕೆ ತಂದಿದ್ದಾರೆ. ಈ ನಾಟಕದ ಮೂಲಕ 20 ವರ್ಷದ ನಂತರ ಕಿಶೋರ್ ಅವರು ರಂಗಭೂಮಿಗೆ ಮರಳಿದ್ದರು.