ಅನನ್ಯ ಭಟ್ ಕಾಂತಾರ , ಕೆಜಿಎಫ್ ಸಿನಿಮಾಗಳಲ್ಲಿ ಹಾಡನ್ನು ಮಿಂಚಿದ್ದರು, ಇದೀಗ ಅನನ್ಯ ಭಟ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ..ಹೌದು.. ಅನನ್ಯ ಭಟ್ ಕಂಠ ಸಿರಿಯ ಮೂಲಕ ಪ್ರಸಿದ್ದರಾದವರು, ಇದೀಗ ಇಂಟರ್ ನ್ಯಾಷನಲ್ ಡ್ರಮ್ಮರ್ ಮಂಜು ಜೊತೆ ಹಸೆಮಣೆ ಏರಿದ್ದಾರೆ..ಸೋಜುಗಾದ ಸೂಜಿ ಮಲ್ಲಿಗೆ ಎಂಬ ಜನಪದ ಹಾಡನ್ನು ಹಾಡುವ ಮೂಲಕ ಜನರ ಪ್ರೀತಿಗೆ ಪಾತ್ರರಾದವರು ಅನನ್ಯ ಭಟ್.ಅನನ್ಯ ಭಟ್ ಕನ್ನಡ ಮಾತ್ರವಲ್ಲದೇ ಬೇರೆ ಬೇರೆ ಭಾಷೆಯಲ್ಲೂ ಹಾಡಿದ್ದಾರೆ. ಇದೀಗ ತಿರುಪತಿಯಲ್ಲಿ ಡ್ರಮ್ಮರ್ ಮಂಜು ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.