ಆಂಟಿಬಯೋಟಿಕ್ ಮಾತ್ರೆಗಳನ್ನು (Antibiotic Pills) ಬ್ಯಾಕ್ಟೀರಿಯಾದ ಸೋಂಕುಗಳನ್ನು ಗುಣಪಡಿಸಲು ಬಳಸಲಾಗುತ್ತದೆ. ಆದರೆ, ಇವುಗಳನ್ನು ವೈದ್ಯರ ಸಲಹೆ ಇಲ್ಲದೆ ಅಥವಾ ಅತಿಯಾಗಿ ಬಳಸುವುದರಿಂದ ದೇಹದ ಮೇಲೆ ಕೆಲವು ಅಡ್ಡಪರಿಣಾಮಗಳು ಉಂಟಾಗಬಹುದು.
ಜೀರ್ಣಕ್ರಿಯೆಗೆ ಸಂಬಂಧಿಸಿದ ತೊಂದರೆಗಳು
ಇದು ಅತ್ಯಂತ ಸಾಮಾನ್ಯವಾದ ಅಡ್ಡಪರಿಣಾಮವಾಗಿದೆ. ಆಂಟಿಬಯೋಟಿಕ್‌ಗಳು ದೇಹದಲ್ಲಿನ ಕೆಟ್ಟ ಬ್ಯಾಕ್ಟೀರಿಯಾಗಳ ಜೊತೆಗೆ ಜೀರ್ಣಕ್ರಿಯೆಗೆ ಸಹಾಯ ಮಾಡುವ ಒಳ್ಳೆಯ ಬ್ಯಾಕ್ಟೀರಿಯಾಗಳನ್ನು ನಾಶಪಡಿಸುತ್ತವೆ. ಇದರಿಂದಾಗಿ ಅತಿಸಾರ, ಹೊಟ್ಟೆ ನೋವು ಮತ್ತು ವಾಂತಿ ಸಮಸ್ಯೆಗಳು ಉಂಟಾಗಬಹುದು.
ಅಲರ್ಜಿ (Allergic Reactions)
ಕೆಲವರಿಗೆ ಕೆಲವು ನಿರ್ದಿಷ್ಟ ಆಂಟಿಬಯೋಟಿಕ್‌ಗಳು ಅಲರ್ಜಿ ಉಂಟುಮಾಡಬಹುದು. ಚರ್ಮದ ಮೇಲೆ ಕೆಂಪು ದದ್ದುಗಳು ಅಥವಾ ತುರಿಕೆ. ಮುಖ, ನಾಲಿಗೆ ಅಥವಾ ಗಂಟಲು ಉಬ್ಬಿಕೊಳ್ಳುವುದು ಮತ್ತು ಉಸಿರಾಟದ ತೊಂದರೆಗಳು ಉಂಟಾಗುತ್ತವೆ.
ಶಿಲೀಂಧ್ರ ಸೋಂಕು (Fungal Infections)
ದೇಹದಲ್ಲಿನ ಒಳ್ಳೆಯ ಬ್ಯಾಕ್ಟೀರಿಯಾಗಳು ಕಡಿಮೆಯಾದಾಗ, ಶಿಲೀಂಧ್ರಗಳು ಅತಿಯಾಗಿ ಬೆಳೆಯಲು ಆರಂಭಿಸುತ್ತವೆ. ಇರದಿಂದ ಬಾಯಲ್ಲಿ ಬಿಳಿ ಕಲೆಗಳು, ಮಹಿಳೆಯರಲ್ಲಿ ಯೋನಿ ಸೋಂಕು ಸಂಭವಿಸಬಹುದು.
ಆಂಟಿಬಯೋಟಿಕ್ ರೆಸಿಸ್ಟೆನ್ಸ್ (Antibiotic Resistance)
ಅಗತ್ಯವಿಲ್ಲದಿದ್ದರೂ ಪದೇ ಪದೇ ಆಂಟಿಬಯೋಟಿಕ್ ಬಳಸುವುದರಿಂದ, ಬ್ಯಾಕ್ಟೀರಿಯಾಗಳು ಆ ಮಾತ್ರೆಗಳಿಗೆ ಹೊಂದಿಕೊಂಡುಬಿಡುತ್ತವೆ. ಮುಂದಿನ ದಿನಗಳಲ್ಲಿ ನಿಜವಾಗಿಯೂ ಕಾಯಿಲೆ ಬಂದಾಗ ಆ ಮಾತ್ರೆಗಳು ದೇಹದ ಮೇಲೆ ಯಾವುದೇ ಕೆಲಸ ಮಾಡುವುದಿಲ್ಲ.
ಇತರ ಅಡ್ಡಪರಿಣಾಮಗಳು
ತಲೆನೋವು ಮತ್ತು ತಲೆತಿರುಗುವಿಕೆ, ಬಾಯಲ್ಲಿ ಕಹಿ ಅಥವಾ ಲೋಹದ ರುಚಿ (Metallic Taste) ಬಿಸಿಲಿಗೆ ಚರ್ಮ ಸೂಕ್ಷ್ಮವಾಗುವುದು ಕೆಲವು ಮಾತ್ರೆಗಳನ್ನು ತಿಂದಾಗ ಬಿಸಿಲಿಗೆ ಹೋದರೆ ಚರ್ಮ ಬೇಗನೆ ಕಪ್ಪಾಗಬಹುದು ಅಥವಾ ಉರಿಯಬಹುದು.