ಎಂಥಾ ಚೆಂದಾನೋ ಶೃತಿ ಹಾಸನ್​

ಮಮತಾ

ಎಂಥಾ ಚೆಂದಾನೋ ಶೃತಿ ಹಾಸನ್​

ಶ್ರುತಿ ಹಾಸನ್​ ಅವರು ಸದ್ಯ ಯಾವುದೇ ಸಿನಿಮಾದಲ್ಲಿ ನಟಿಸುತ್ತಿಲ್ಲ. ಆದರೆ, ಪೆದ್ದಿಯಲ್ಲಿನ ಐಟಂ ಸಾಂಗಿಗೆ ಕುಣಿದಿದ್ದಾರೆ ಎನ್ನಲಾಗಿದೆ. ಬ್ಯುಸಿ ಶೆಡ್ಯೂಲ್​ ಮಧ್ಯೆ ಗಾಢ ಕೆಂಪು ಬಣ್ಣದ ಗೌನ್ ತೊಟ್ಟು, ಹಣೆಗೆ ಕೆಂಪನೆಯ ಬಿಂದಿ ಇಟ್ಟು ಫೋಟೋ ಶೂಟ್​ ಮಾಡಿಸಿದ್ದಾರೆ. ಅವರ ಈ ಫೋಟೋಗೆ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ.

ಜಗತ್ತಿನ ಸುಂದರಿ ಈ ಶ್ರುತಿ

ಶ್ರುತಿ ಹಾಸನ್​ ಅಂದಕ್ಕೆ ಮನಸೋತ ಫ್ಯಾನ್ಸ್​ ದಯವಿಟ್ಟು ನನ್ನನ್ನು ಮದುವೆಯಾಗಿ ಎಂದು ಕೇಳಿಕೊಂಡಿದ್ದಾರೆ. ಇನ್ನು ಕೆಲವರು ಈ ಜಗತ್ತಿನ ಬ್ಯೂಟಿ ಎಂದರೆ ನೀವೇನೆ ಎಂದು ಹೇಳಿಕೊಂಡಿದ್ದಾರೆ.

ಬಾಲ ನಟಿಯಾಗಿ ವೃತ್ತಿ ಆರಂಭ

ಬಾಲನಟಿಯಾಗಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ಶ್ರುತಿ ಹಾಸನ್​ ಇಂದಿಗೂ ತಮ್ಮದೇ ಶೈಲಿಯ ನಟನೆಗೆ ಚಿತ್ರರಂಗದಲ್ಲಿ ಬೇಡಿಕೆಯನ್ನು ಹೊಂದಿದ್ದಾರೆ. ಇತ್ತೀಚೆಗೆ ಅವರ ಕೂಲಿ ಸಿನಿಮಾ ರಿಲೀಸ್​ ಆಗಿತ್ತು. ಅಮಾಯಕ ಮತ್ತು ಮುಗ್ಧ ಹುಡುಗಿಯಾಗಿ ಅವರು ನಟಿಸಿದ್ದರು.

ಹಿಟ್​ ಸಿನಿಮಾಗಳಿವು..

ಗಬ್ಬರ್​ ಸಿಂಗ್​, ರೇಸ್​ ಗುರ್ರಂ, ಶ್ರೀಮಂತುಡು, ಸಲಾರ್​​, ಓ ಮೈ ಫ್ರೆಂಡ್​​, ಸಿಂಗಂ 3 ರಾಮಯ್ಯ ವಸ್ತಾವಯ್ಯ, ಧನುಷ್​ ಜೊತೆಗೆ ನಟಿಸಿದ 3 ಸಿನಿಮಾದಲ್ಲಿ ಇವರ ನಟನೆಗೆ ಮನಸೋತವರಿಲ್ಲ. ತೆಲುಗು ಸಿನಿಮಾದ ಪ್ರೇಮಂ ಸಹ ಇವರಿಗೆ ಒಳ್ಳೆಯ ತಿರುವನ್ನು ತಂದುಕೊಟ್ಟಿತ್ತ.

ಕೂಲಿ ಸಿನಿಮಾ ನಂತ್ರ ನಾಪತ್ತೆ?

ರಜನೀಕಾಂತ್​​, ಸತ್ಯರಾಜ್​, ಅಮೀರ್​ ಖಾನ್​​ ನಂತಹ ಘಟಾನುಘಟಿ ನಾಯಕರಿರುವ ಕೂಲಿ ಸಿನಿಮಾದಲ್ಲಿ ಶ್ರುತಿ ಹಾಸನ್​ ನಟಿಸಿದ್ದರು. ಈ ಸಿನಿಮಾ ಬಳಿಕ ಯಾವುದರ ಬಗ್ಗೆಯೂ ಅಪಡೇಟ್​ ನೀಡಿಲ್ಲ. ಶ್ರುತಿಹಾಸನ್​ ಗಾಯಕಿಯೂ ಆಗಿದ್ದಾರೆ.

ಗಾಯಕಿ ಶ್ರುತಿ

ಶ್ರುತಿ ಹಾಸನ್​ ಬಾಲ್ಯದಲ್ಲೇ ಗಾಯನ ಆರಂಭಿಸಿದರು. 'ತೇವರ್ ಮಗನ್' ಸಿನಿಮಾ ಮೂಲಕ ಹಿನ್ನಲೆ ಗಾಯಕಿಯಾಗಿ ಕಾರ್ಯ ಆರಂಭಿಸಿದ ಅವರು ತಮಿಳು, ತೆಲುಗು, ಹಿಂದಿ ಸಿನಿಮಾಗಳಿಗೆ ಕಂಠದಾನ ಮಾಡಿದ್ದಾರೆ. ಹಾಯ್​ ನಾನ್ನ ಸಿನಿಮಾದ ಒಡಿಯಮ್ಮ ಹಾಡು ಸಾಕಷ್ಟು ಹಿಟ್ ಕಂಡಿತ್ತು

ಒಳ್ಳೆ ಪಾರ್ಟನರ್ ಬೇಕೆಂದ ಶ್ರುತಿ

ಶ್ರುತಿ ಹಾಸನ್​​ ಅವರು ಶಾಂತನು ಹಜಾರಿಕಾ ಎಂಬುವವರ ಜೊತೆ ಡೇಟೀಮಗ್​ನಲ್ಲಿದ್ದರು. ಅವರೊಂದಿಗಿನ ಫೋಟೋಗಳನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದರು. ಅವರಿಬ್ಬರ ವಿಚಾರವನ್ನು ಅವರು ಮುಕ್ತವಾಗಿ ಹಂಚಿಕೊಳ್ಳುತ್ತಿದ್ದರು. ಮದುವೆಯಾದರೆ ನನಗೆ ಮಕ್ಕಳು ಬೇಕು,. ಮಕ್ಕಳಿಗೆ ಒಳ್ಳೆ ತಂದೆ ಮುಖ್ಯ ಹೀಗಾಗಿ ಒಳ್ಳೆ ಪಾರ್ಟನರ್​ ಹುಡುಕುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.