ಶ್ರಿಯಾ ಶರಣ್​​​​​ಗೆ ವಯಸ್ಸು ಸಂಖ್ಯೆ ಅಷ್ಟೆ..!

ಭೂಮಿಕಾ ವಿ. ನಾಥ್​​​

ಶ್ರಿಯಾ ಶರಣ್​​​​​ಗೆ ವಯಸ್ಸು ಸಂಖ್ಯೆ ಅಷ್ಟೆ..!

ಕಬ್ಜ’ ಸಿನಿಮಾದ (Kabza Film) ಬ್ಯೂಟಿ ಶ್ರಿಯಾ ಶರಣ್ ಚಳಿಯಲ್ಲೂ ಬಿಸಿ ಹೆಚ್ಚಿಸಿದ್ದಾರೆ. ಸದ್ಯ ಇನ್ಸ್​​ಟಾಗ್ರಾಂನಲ್ಲಿ ಹಂಚಿಕೊಂಡ ಫೋಟೋಸ್​​ ಸೋಷಿಯಲ್​ ಮೀಡಿಯಾದಲ್ಲೇ ಹಲ್​ಷಲ್​ ಎಬ್ಬಿಸಿದ್ದು, ಶ್ರಿಯಾ ಸಣ್ಣ ಹುಡುಗಿಯಂತೆ ಕಾಣುತ್ತಿಸದ್ದಾರೆ.

43 ರ ಹರೆಯದಲ್ಲೂ 18ರ ಯುವತಿಯರಂತೆ ಕಾಣಿಸ್ತಾರೆ

43ರ ಹರೆಯದಲ್ಲೂ 18ರ ಯುವತಿಯರನ್ನ ನಾಚಿಸುವಂತ ಫಿಟ್‌ನೆಸ್ ಹೊಂದಿದ್ದಾರೆ ಶ್ರೀಯಾ. ಒನ್ಕೊ​ ಪೀಸ್ಟ್ಟ​ ಹಾಕಿ ಶ್ರಿಯಾ ಕೊಟ್ಟ ಪೋಸ್‌ಗೆ ಪಡ್ಡೆಹುಡುಗರು ಫಿದಾ ಆಗಿದ್ದಾರೆ.

ಸೌತ್ ಸಿನಿಮಾಗಳಲ್ಲಿ ಬ್ಯುಸಿ

‘ಕಬ್ಜ’ ನಟಿ ಶ್ರೀಯಾ ಸದ್ಯ ಸೌತ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾದಿಂದ ಸಿನಿಮಾಗೆ ಬಗೆ ಬಗೆಯ ಪಾತ್ರಗಳನ್ನು ಮಾಡುವ ಮೂಲಕ ಸಿನಿಪ್ರೇಕ್ಷಕರ ಮನಗೆಲ್ಲುತ್ತಿದ್ದಾರೆ.

‘ಸಂತೋಷಂ’ ಸಿನಿಮಾ ಮೂಲಕ ಪಾದಾರ್ಪಣೆ

ತೆಲುಗಿನ ‘ಸಂತೋಷಂ’ ಸಿನಿಮಾ ಮೂಲಕ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ ಶ್ರೀಯಾ ಶರಣ್ ಇದೀಗ ಬಹುಭಾಷಾ ನಟಿಯಾಗಿ ಬೇಡಿಕೆ ಹೆಚ್ಚಿಕೊಂಡಿದ್ದಾರೆ.

ಲವ್ಲಿ ಸ್ಟಾರ್ ಪ್ರೇಮ್‌ಗೆ ನಾಯಕಿ

ಈ ಹಿಂದೆ ‘ಚಂದ್ರ’ ಎಂಬ ಕನ್ನಡ ಸಿನಿಮಾದಲ್ಲಿ ಲವ್ಲಿ ಸ್ಟಾರ್ ಪ್ರೇಮ್‌ಗೆ ನಾಯಕಿಯಾಗಿ ನಟಿಸಿದ್ದರು. ಈ ಸಿನಿಮಾಗೆ ರೂಪಾ ಅಯ್ಯರ್ ನಿರ್ದೇಶನ ಮಾಡಿದ್ದರು.

ಉಪೇಂದ್ರ ನಟನೆಯ ಕಬ್ಜ ಸಿನಿಮಾದಲ್ಲೂ ಕಾಣಿಸಿಕೊಂಡಿದ್ದಾರೆ

ಉಪೇಂದ್ರ ನಟನೆಯ ಕಬ್ಜ ಸಿನಿಮಾದಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದರು. ಈ ಚಿತ್ರವನ್ನು ಆರ್. ಚಂದ್ರು ನಿರ್ದೇಶನ ಮಾಡಿದ್ರು. ‘ಕಬ್ಜ ಪಾರ್ಟ್ 2’ ಕೂಡ ಬರಲಿದೆ. ಈ ಸಿನಿಮಾಗಾಗಿ ಫ್ಯಾನ್ಸ್ ಕೂಡ ಎದುರು ನೋಡ್ತಿದ್ದಾರೆ.