ಕಬ್ಜ ಹಾಗೂ ಚಂದ್ರ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಶ್ರಿಯಾ ಶರಣ್ ಎಂಟ್ರಿಕೊಟ್ಟರು. ಸದ್ಯ ಸಿನಿಮಾದಲ್ಲಿ ಅಷ್ಟಾಗಿ ತಮ್ಮನ್ನು ತೊಡಗಿಸಿಕೊಳ್ಳದಿದ್ದರೂ ಸಹ ಸೋಶಿಯಲ್ ಮೀಡಿಯಾದಲ್ಲಿ ಯಾವಾಗಲೂ ಆಕ್ಟೀವ್ ಆಗಿ ಇರುತ್ತಾರೆ. ಇತ್ತೀಚೆಗೆ ಅವರು ಹಂಚಿಕೊಂಡಿರುವ ಫೋಟೋಸ್ ಕಂಡು ಅಭಿಮಾನಿಗಳು ಮನಸೋತಿದ್ದಾರೆ.
43ರಲ್ಲೂ ಎಂಥಾ ಗ್ಲಾಮರ್
ಜಮ್ಮು ಕಾಶ್ಮೀರದಲ್ಲಿ ಅವರು ಮತ್ತು ಅವರು ಪತಿ ಇದ್ದಾರೆ ಎನ್ನುವಂತೆ ಕಾಣುತ್ತದೆ. ಅವರ ಫೋಟೋ ಶೂಟ್ನಲ್ಲಿ ಹಸಿರು ಸಲ್ವಾರ್, ಹಾಗೂ ತಲೆಗೆ ಕಟ್ಟಿರುವ ದುಪ್ಪಟ್ಟಾ ಅದಕ್ಕೆ ತಕ್ಕನಂತೆ ಧರಿಸಿರುವ ಆಭರಣ ಹಾಗೆಯೇ ಕಾಣುತ್ತದೆ. ಸಿಂಪಲ್ ಮೇಕಪ್ ಮಾಡಿರುವ ಅವರು 43ರಲ್ಲೂ ಹದಿಹರೆಯದ ಹುಡುಗಿಯಂತೆ ಕಾಣುವಂತೆ ಮಾಡಿದೆ.
ಭಾಷೆ, ಪಾತ್ರ ಲೆಕ್ಕಕ್ಕಿಲ್ಲ
ಇಷ್ಟಂ ಸಿನಿಮಾ ಮೂಲಕ 2001ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಇವರು, ಮಾಡದ ಪಾತ್ರಗಳಿಲ್ಲ, ಯಾವುದೇ ಭಾಷೆಯ ಹಂಗಿಲ್ಲ. ಕನ್ನಡ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಹಲವು ಭಾಷೆಯಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ರಜನಿ ಜೊತೆ ನಟನೆ
ಸೂಪರ್ ಸ್ಟಾರ್ ರಜನಿಕಾಂತ್ ಅವರೊಂದಿಗೆ ಶಿವಾಜಿ ದಿಬಾಸ್ನಲ್ಲಿ ನಟಿಸಿದ್ದರು. 2007ರಲ್ಲಿ ರಿಲೀಸ್ ಆಗಿದ್ದ ಈ ಸಿನಿಮಾವು ಸಖತ್ ಹಿಟ್ ಕಂಡಿತ್ತು. ಈ ಸಿನಿಮಾವನ್ನು ಎಸ್ ಶಂಕರ್ ಅವರು ನಿರ್ದೇಶಿಸಿದ್ದರು.
ರಷ್ಯಾ ಉದ್ಯಮಿ ಜೊತೆ ಡೇಟಿಂಗ್ ಮದುವೆ
ಶ್ರಿಯಾ ಶರಣ್ ಅವರು ರಷ್ಯಾ ಉದ್ಯಮಿ ಆಂಡ್ರೇ ಕೊಸ್ಚೆವ್ ಅವರೊಂದಿಗೆ ಡೇಟಿಂಗ್ನಲ್ಲಿದ್ದರು. ಆನಂತರ 2018ರಂದು ಅವರೊಂದಿಗೆ ಮುಂಬೈನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಈಗ ರಾಧಾ ಎನ್ನುವ ಮಗಳು ದಂಪತಿಗೆ ಇದ್ದಾರೆ.
ಶ್ರಿಯಾ ನಟನೆಯ ಸಿನಿಮಾವಿದು
ಶ್ರಿಯಾ ಅವರು ದೃಶ್ಯಂ, ಮನಂ, ಛತ್ರಪತಿ, ಶಿವಾಜಿ, ಮಿರಾಯ್, ಸಂತೋಷಂ ನಿರ್ಭಯ್ ನುವ್ವೇ ನುವ್ವೇ ಅರ್ಜುನ್, ನಾ ಅಲ್ಲುಡು, ಭಗೀರತ ಸೇರಿದಂತೆ ಸಾಕಷ್ಟು ಸಿನಿಮಾದಲ್ಲಿ ನಟಿಸಿದ್ದಾರೆ