WPLನಲ್ಲಿ ಕನ್ನಡತಿಯ ಮಿಂಚು

ರಮೇಶ್​ ಕುಮಾರ್​​ ಬಿ ಎಡಮೋಳೆ

WPLನಲ್ಲಿ ಕನ್ನಡತಿಯ ಮಿಂಚು

2026ರ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಕರ್ನಾಟಕದ ಹೆಮ್ಮೆಯ ಆಟಗಾರ್ತಿ ಶ್ರೇಯಾಂಕಾ ಪಾಟಿಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರ ಪರವಾಗಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ.

5 ವಿಕೆಟ್‌ಗಳ ಐತಿಹಾಸಿಕ ಸಾಧನೆ

ಶ್ರೇಯಾಂಕಾ ಪಾಟಿಲ್ ಅವರು ಗುಜರಾತ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 23 ರನ್ ನೀಡಿ 5 ವಿಕೆಟ್​ಗಳನ್ನು ಕಬಳಿಸುವ ಮೂಲಕ ವೃತ್ತಿಜೀವನದ ಶ್ರೇಷ್ಠ ಪ್ರದರ್ಶನ ನೀಡಿದರು.

ಕಿರಿಯ ಆಟಗಾರ್ತಿ ಎಂಬ ದಾಖಲೆ

WPL ಇತಿಹಾಸದಲ್ಲಿ 5 ವಿಕೆಟ್‌ಗಳ ಸಾಧನೆ ಮಾಡಿದ ಅತ್ಯಂತ ಕಿರಿಯ ಬೌಲರ್ ಎಂಬ ಹೆಗ್ಗಳಿಕೆಗೆ ಶ್ರೇಯಾಂಕಾ ಪಾತ್ರರಾಗಿದ್ದಾರೆ. 23 ವರ್ಷದ ಆಫ್-ಸ್ಪಿನ್ನರ್ ದಿಗ್ಗಜ ಆಟಗಾರ್ತಿಯರನ್ನು ಮಣಿಸಿ ಈ ದಾಖಲೆ ಬರೆದಿದ್ದಾರೆ.

ಪರ್ಪಲ್ ಕ್ಯಾಪ್ ರೇಸ್‌ನಲ್ಲಿ ಮುಂಚೂಣಿ

ಟೂರ್ನಿಯ ಆರಂಭಿಕ ಪಂದ್ಯಗಳಲ್ಲೇ ಸತತವಾಗಿ ವಿಕೆಟ್ ಪಡೆಯುತ್ತಿರುವ ಶ್ರೇಯಾಂಕಾ, ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕಾಗಿ ಪೈಪೋಟಿ ನೀಡುತ್ತಿದ್ದಾರೆ.

ಭರ್ಜರಿ ಪುನರಾಗಮನ

ಕಳೆದ ಸುಮಾರು 14 ತಿಂಗಳುಗಳಿಂದ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಶ್ರೇಯಾಂಕಾ, WPL 2026ರಲ್ಲಿ ಅತ್ಯಂತ ಬಲಿಷ್ಠವಾಗಿ ಕಮ್‌ಬ್ಯಾಕ್ ಮಾಡಿದ್ದಾರೆ.

ಯಶಸ್ಸಿನ ಹಿಂದಿನ ಶಕ್ತಿ

ಆರ್‌ಸಿಬಿ ತಂಡವು 2026ರ ಸೀಸನ್‌ನಲ್ಲಿ ಸತತ ಗೆಲುವುಗಳನ್ನು ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲು ಶ್ರೇಯಾಂಕಾರ ಬೌಲಿಂಗ್ ಪ್ರಮುಖ ಕಾರಣವಾಗಿದೆ. ಪವರ್‌ಪ್ಲೇ ಮತ್ತು ಡೆತ್ ಓವರ್‌ಗಳಲ್ಲಿ ವಿಕೆಟ್ ಕಬಳಿಸುತ್ತಿದ್ದಾರೆ.