ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟರ್ ಸ್ಮೃತಿ ಮಂಧಾನ (Smriti Mandhana) ಮದುವೆ ಸಂಭ್ರಮ ಶುರುವಾಗಿದೆ. ಆರ್ಸಿಬಿ ಆಟಗಾರ್ತಿ ಶ್ರೇಯಾಂಕ ಇದೀಗ ಸ್ಮೃತಿ ಮದುವೆಗೆ ಜೆಮಿಮಾ ಜತೆ ತಯಾರಾದ ಫೋಟೋವನ್ನ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ
ಲೆಹೆಂಗಾ ತೊಟ್ಟ ಶ್ರೇಯಾಂಕ, ಜೆಮಿಮಾ
ಮಂಧನಾ ನವೆಂಬರ್ 23 ರಂದು ಸಂಗೀತ ಸಂಯೋಜಕ ಪಲಾಶ್ ಮುಚ್ಚಲ್ ಅವರನ್ನು ಇಂದೋರ್ನಲ್ಲಿ ವಿವಾಹವಾಗಲಿದ್ದಾರೆ ಎಂದು ವರದಿಯಾಗಿದೆ. ಶ್ರೇಯಾಂಕ ತಮ್ಮ ಇನ್ಸ್ಟಾ ಖಾತೆಯಲ್ಲಿ ಜೆಮಿಮಾ ಜತೆಗೆ ಸ್ಮೃತಿ ಮದುವೆಗೆ ತಯಾರಾದ ಫೋಟೋವನ್ನ ಹಂಚಿಕೊಂಡಿದ್ದಾರೆ
ನಿಶ್ಚಿತಾರ್ಥದ ಕುರಿತಂತೆ ರೀಲ್ಸ್
ಸ್ಮೃತಿ ಮಂಧಾನ ಆಟಗಾರ್ತಿಯರೊಂದಿಗೆ ನಿಶ್ಚಿತಾರ್ಥ ಆಗಿರೋ ಕುರಿತಂತೆ ಒಂದು ರೀಲ್ಸ್ ಮಾಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರೋ ಈ ವಿಡಿಯೋಗೆ ಫ್ಯಾನ್ಸ್ಗಳ ಮೆಚ್ಚುಗೆ ವ್ಯಕ್ತವಾಗಿದೆ.
ಹಲ್ದಿ ಸಮಾರಂಭದ ವಿಡಿಯೋ
ಭಾರತದ ಗೆಲುವಿನ ಬಗ್ಗೆ ಆಗಾಗ್ಗೆ ಪೋಸ್ಟ್ ಮಾಡುವ ಪಲಾಶ್, ಸ್ಮೃತಿ ಮತ್ತು ವಿಶ್ವಕಪ್ ಟ್ರೋಫಿಯೊಂದಿಗಿನ ಫೋಟೋಗಳನ್ನು ಸಹ ಹಂಚಿಕೊಂಡಿದ್ದರು. ಅಲ್ಲದೇ ಇದೀಗ ಹಲದಿ ಸಮಾರಂಭದಲ್ಲಿ ಆಟಗಾರ್ತಿಯರು ಕುಣಿದು ಕುಪ್ಪಳಿಸಿದ್ದಾರೆ.