ಶ್ರದ್ಧಾ ಸಖತ್​ ಹಾಟ್​

ರಮೇಶ್​ ಕುಮಾರ್​​ ಬಿ ಎಡಮೋಳೆ

ಶ್ರದ್ಧಾ ಸಖತ್​ ಹಾಟ್​

ಶ್ರದ್ಧಾ ಶ್ರೀನಾಥ್ ದಕ್ಷಿಣ ಭಾರತ ಸಿನಿಮಾ ರಂಗದಲ್ಲಿ ವಿಶೇಷ ಮನ್ನಣೆ ಗಳಿಸಿದ ಜನಪ್ರಿಯ ನಾಯಕಿ. ಕನ್ನಡದಲ್ಲಿ ಕೆಲವು ಸಿನಿಮಾಗಳಲ್ಲಿ ಅಭಿನಯಿಸಿರುವ ಈ ಬೆಡಗಿ ಮಲಯಾಳಂ, ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಅಭಿನಯಿಸಿದ್ದಾರೆ.

ಯೂ ಟರ್ನ್ ಮೊದಲ ಸಿನಿಮಾ

2016ರಲ್ಲಿ ಪವನ್ ಕುಮಾರ್ ನಿರ್ದೇಶನದ 'ಯೂ ಟರ್ನ್' ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಈ ಚಿತ್ರದ ಮೂಲಕ ರಾತ್ರೋರಾತ್ರಿ ಪ್ರಸಿದ್ಧಿ ಪಡೆದರು ಮತ್ತು ಅವರ ನಟನೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಯಿತು.

ಸಹಜ ಅಭಿನಯಕ್ಕೆ ಹೆಸರು

ಅಭಿನಯ ಸಾಮರ್ಥ್ಯ ಇರುವ ಸಿನಿಮಾಗಳಿಗೆ ಮಾತ್ರ ಗಮನ ಹರಿಸುವ ಈ ಸೌತ್​ ಬ್ಯೂಟಿ, ತಮ್ಮ ಸಹಜ ಅಭಿನಯದಿಂದಲೇ ಗುರುತಿಸಿಕೊಂಡಿದ್ದಾರೆ.

ಗ್ಲಾಮರ್​ ಗೊಂಬೆ

ತಮಿಳಿನ 'ವಿಕ್ರಮ್ ವೇದ', ತೆಲುಗಿನ 'ಜೆರ್ಸಿ' ಮತ್ತು ಕನ್ನಡದ 'ಆಪರೇಷನ್ ಅಲುಮೇಲಮ್ಮ' ಇವರ ವೃತ್ತಿಜೀವನದ ಪ್ರಮುಖ ಚಿತ್ರಗಳು. ಗ್ಲಾಮರ್ ಪಾತ್ರಗಳಿಗೆ ಸೀಮಿತವಾಗದೆ, ಮಹಿಳಾ ಪ್ರಧಾನ ಪಾತ್ರಗಳಲ್ಲೂ ನಟಿಸಿದ್ದಾರೆ.

ಹಲವು ಪ್ರಶಸ್ತಿಗಳು

ಶ್ರದ್ಧಾ ಅವರ ನಟನಾ ಕೌಶಲಕ್ಕಾಗಿ ಫಿಲ್ಮ್‌ಫೇರ್ ಮತ್ತು ಸೈಮಾ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳು ಸಂದಿವೆ. ದಕ್ಷಿಣ ಭಾರತದ ಚಿತ್ರರಂಗದ ಭರವಸೆಯ ನಟಿಯರಲ್ಲಿ ಶ್ರದ್ಧಾ ಕೂಡ ಒಬ್ಬರು.

ಅವಕಾಶಗಳ ಕೊರತೆ

ಅವಕಾಶಗಳ ಕೊರೆತೆಯಿಂದ ವಿರಳ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅವರ ಮೊದಲ ವೆಬ್ ಸರಣಿ 'ದಿ ಗೇಮ್: ಯು ನೆವರ್ ಪ್ಲೇ ಅಲೋನ್' ಇತ್ತೀಚೆಗೆ ಬಿಡುಗಡೆಯಾಯಿತು. ಇತ್ತೀಚೆಗೆ ಬಿಡುಗಡೆಗೊಂಡ ತಮಿಳು ಚಿತ್ರ ಆರ್ಯನ್​ ಯಶಸ್ಸು ಕಂಡಿತು.

ಜಾಲತಾಣದಲ್ಲಿ ಫುಲ್​ ಆ್ಯಕ್ಟೀವ್​

ಜಾಲತಾಣದಲ್ಲೂ ಸಕ್ರಿಯರಾಗಿರುವ ಶ್ರದ್ಧಾ, ಆಗಾಗ ತಮ್ಮ ಬೋಲ್ಡ್​ ಫೋಟೊಗಳನ್ನು ಹರಿಬಿಡುತ್ತಿರುತ್ತಾರೆ. ಇನ್​ಸ್ಟಾಗ್ರಾಂನಲ್ಲಿ 1 ಮಿಲಿಯನ್​ಗೂ ಅಧಿಕ ಫಾಲೋವರ್ಸ್​ ಹೊಂದಿದ್ದಾರೆ.

ಹಾಟ್​ ಅವತಾರದಲ್ಲಿ ಪ್ರತ್ಯಕ್ಷ

ಇತ್ತೀಚೆಗೆ ಶ್ರದ್ಧಾ ಪೋಸ್ಟ್​ ಮಾಡಿರುವ ಹಾಟ್​ ಫೋಟೋಗಳು ಪಡ್ಡೆ ಹುಡುಗರ ಹೃದಯಕ್ಕೆ ಕಿಚ್ಚು ಹಚ್ಚಿದೆ. ಮರೂನ್​ ಬಣ್ಣದ ಉಡುಪು ಧರಿಸಿ, ವಿವಿಧ ಭಂಗಿಗಳಲ್ಲಿ ನಿಂತು ಕ್ಯಾಮೆರಾಗೆ ಪೋಸ್​ ನೀಡಿದ್ದಾರೆ.

ಬೋಲ್ಡ್​ನೆಸ್​ಗೆ ಅಭಿಮಾನಿಗಳು ಫಿದಾ

ನಿನ್ನೆ (ಏ.02) ತಮ್ಮ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿರುವ ಫೋಟೋವನ್ನು ಈವರೆಗೆ 45 ಸಾವಿರಕ್ಕೂ ಅಧಿಕ ಮಂದಿ ಲೈಕ್​ ಮಾಡಿದ್ದಾರೆ. ಶ್ರದ್ಧಾರ ಬೋಲ್ಡ್​ ಲುಕ್​ಗೆ ಫಿದಾ ಆಗಿರುವ ಅಭಿಮಾನಿಗಳು ತರಹೇವಾರಿ ಕಾಮೆಂಟ್​ಗಳು ಹರಿಬಿಡುತ್ತಿದ್ದಾರೆ.