ಸಹಜ ಸುಂದರಿ ಶ್ರದ್ಧಾ ದಾಸ್​!

ವಿನಾಯಕ ನಾಯಕ

ಸಹಜ ಸುಂದರಿ ಶ್ರದ್ಧಾ ದಾಸ್​!

ಶ್ರದ್ಧಾ ದಾಸ್ ಅವರು ಮುಂಬೈನಲ್ಲಿ ಬಂಗಾಳಿ ಪೋಷಕರಿಗೆ ಜನಿಸಿದ ಭಾರತೀಯ ಚಲನಚಿತ್ರ ನಟಿ ಹಾಗೂ ಮಾಡೆಲ್ ಆಗಿದ್ದು, ತೆಲುಗು, ಹಿಂದಿ, ಕನ್ನಡ, ಮಲಯಾಳಂ ಮತ್ತು ಬಂಗಾಳಿ ಸೇರಿದಂತೆ ಅನೇಕ ಭಾಷೆಯ ಚಿತ್ರಗಳಲ್ಲಿ ನಟಿಸಿದ್ದಾರೆ.

ಜರ್ನಲಿಸಂ ಪದವಿಧರೆ

ಮುಂಬೈ ವಿಶ್ವವಿದ್ಯಾಲಯದ ಎಸ್‌ಐಇಎಸ್ ಕಾಲೇಜಿನಿಂದ ಜರ್ನಲಿಸಂ ವಿಷಯದಲ್ಲಿ ಮಾಸ್ ಮೀಡಿಯಾ ಪದವಿಯನ್ನು ಪಡೆದಿರುವ ಇವರು, ಕಾಲೇಜು ದಿನಗಳಲ್ಲಿ ನಾಟಕಗಳಲ್ಲಿ ಹಾಗೂ ಮಾಡೆಲಿಂಗ್ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

ಮೊದಲ ಸಿನಿಮಾ

ಶ್ರದ್ಧಾ 2008ರಲ್ಲಿ ತೆರೆಕಂಡ 'ಸಿದ್ಡು ಫ್ರಮ್ ಸಿಕಾಕುಲಮ್' ಎಂಬ ತೆಲುಗು ಚಲನಚಿತ್ರದ ಮೂಲಕ ನಟನಾ ಲೋಕಕ್ಕೆ ಅಧಿಕೃತವಾಗಿ ಪಾದಾರ್ಪಣೆ ಮಾಡಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು.

ಪ್ರಸಿದ್ಧಿ

ಸುಕುಮಾರ್ ನಿರ್ದೇಶನದ ಜನಪ್ರಿಯ ತೆಲುಗು ಚಲನಚಿತ್ರವಾದ 'ಆರ್ಯ 2' ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುವ ಮೂಲಕ ಇವರು ಚಲನಚಿತ್ರ ರಂಗದಲ್ಲಿ ಹೆಚ್ಚಿನ ಜನಪ್ರಿಯತೆಯನ್ನು ಪಡೆದರು.

ಬಾಲಿವುಡ್​ ಪ್ರವೇಶ

ಶ್ರದ್ಧಾ 2010ರಲ್ಲಿ ಬಿಡುಗಡೆಯಾದ 'ಲಾಹೋರ್' ಚಿತ್ರದ ಮೂಲಕ ಬಾಲಿವುಡ್‌ಗೆ ಕಾಲಿಟ್ಟರು ಮತ್ತು ಪಾಕಿಸ್ತಾನಿ ಮನೋವೈದ್ಯೆಯ ಪಾತ್ರದಲ್ಲಿ ನಟಿಸಿ ವಿಮರ್ಶಕರ ಮೆಚ್ಚುಗೆಯನ್ನು ಗಳಿಸಿದರು.

ಕನ್ನಡದಲ್ಲೂ ನಟನೆ

ಶ್ರದ್ಧಾ ದಾಸ್​ ಕನ್ನಡದಲ್ಲಿ 'ಹೊಸ ಪ್ರೇಮ ಪುರಾಣ' ಹಾಗೂ 'ಕೋಟಿಗೊಬ್ಬ 3' ಸಿನಿಮಾಗಳಲ್ಲಿ ನಟಿಸುವ ಮೂಲಕ ಕನ್ನಡ ಚಲನಚಿತ್ರ ರಂಗದಲ್ಲೂ ಸಹ ತಮ್ಮದೇ ಆದ ಗುರುತನ್ನು ಮೂಡಿಸಿದ್ದಾರೆ.