'ದಿ ಆರ್ಟ್ ಆಫ್ ಲಿವಿಂಗ್'​ನಲ್ಲಿ ಗ್ರೀನ್​ ಎನರ್ಜಿ ಪವಾಡ

ಮಮತಾ

'ದಿ ಆರ್ಟ್ ಆಫ್ ಲಿವಿಂಗ್'​ನಲ್ಲಿ ಗ್ರೀನ್​ ಎನರ್ಜಿ ಪವಾಡ

ಈಗ ಜಗತ್ತೇ ಎಲ್ಪಿಜಿಯ ಕೊರತೆಯನ್ನು ಎದುರಿಸುತ್ತಿರುವ ಮಧ್ಯೆಯೂ ಸಹ ದಿ ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದ ಬೃಹತ್ ಅಡುಗೆ ಮನೆಯಲ್ಲಿ ಪ್ರತಿನಿತ್ಯವೂ 25,000 ಊಟ ತಯಾರಿಸಲಾಗುತ್ತದೆ. ಹಬ್ಬದ ದಿನಗಳಂದು ಮತ್ತು ಬೃಹತ್ ಸಮಾವೇಶಗಳು ನಡೆದಾಗ ಈ ಸಂಖ್ಯೆ ಸುಮಾರು ಒಂದು ಲಕ್ಷಕ್ಕೆ ಏರುತ್ತದೆ.

LPG ಇಲ್ಲದಿದ್ದರೂ ಅಡುಗೆ ತಯಾರಾಗೋದು ಹೇಗೆ?

ಜಾಗತಿಕ ಆಧ್ಯಾತ್ಮಿಕ ನಾಯಕರೂ, ದಿ ಆರ್ಟ್ ಆಫ್ ಲಿವಿಂಗ್ ನ ಸಂಸ್ಥಾಪಕರೂ ಆಗಿರುವ ಗುರುದೇವ ಶ್ರೀ ಶ್ರೀ ರವಿ ಶಂಕರರ ದೃಷ್ಟಿಕೋನದಿಂದ ಪ್ರೇರಿತರಾಗಿ, ಪರಿಸರ ಸ್ನೇಹಿ ಅಡುಗೆಯ ವ್ಯವಸ್ಥೆಯನ್ನು ಉಪಯೋಗಿಸಲಾಗುತ್ತಿದೆ. ಉಗಿ, ಜೈವಿಕ ಇಂಧನ ಮತ್ತು ಸಾವಯವ ತ್ಯಾಜ್ಯದಿಂದ ಮಾಡಲಾದ ಇಟ್ಟಿಗೆಗಳಿಂದ ಅಡುಗೆ ಮಾಡಲಾಗುತ್ತದೆ. ಹೀಗಾಗಿ ಎಲ್​ಪಿಜಿ ಇಲ್ಲ ಎನ್ನುವ ಚಿಂತೆ ಆರ್ಟ್​ ಆಫ್​ ಲಿವಿಂಗ್​ ಗೆ ಇಲ್ಲ

ಅನಂತ್​ ಮೊರಾನ್​​ ಹೀಗಂದ್ರು..

ಪ್ರತಿಯೊಂದು ಪಾತ್ರೆಯ ಕೆಳಗೂ ನಾವು ಬೆಂಕಿಯನ್ನು ಹಚ್ಚಿ ಅಡುಗೆ ಮಾಡಬೇಕಿಲ್ಲ. ಈ ವ್ಯವಸ್ಥೆಯು ಸಾಂಪ್ರದಾಯಿಕ ಇಂಧನಗಳ ಮೇಲಿನ ನಮ್ಮ ಅವಲಂಬನೆಯನ್ನು ಕಡಿಮೆ ಮಾಡಿ, ದೊಡ್ಡ ಪ್ರಮಾಣದಲ್ಲಿ ಅಡುಗೆ ಮಾಡಲು ನಮಗೆ ಅನುವು ಮಾಡಿಕೊಡುತ್ತದೆ" ಹೀಗೆಂದು ಮಾತನಾಡಿದ್ದು ಆಶ್ರಮದ ಅಡುಗೆಮನೆಯ ಮುಖ್ಯಸ್ಥರಾದ ಅನಂತ ಮೊರಾನ್.

ಸ್ಟೀಮ್​ ಬಾಯ್ಲರ್​ ಎನ್ನುವ ಚಮತ್ಕಾರ!

ಈ ವ್ಯವಸ್ಥೆಯಲ್ಲಿರುವ ಮುಖ್ಯ ಭಾಗವೆಂದರೆ ಸ್ಟೀಮ್ ಬಾಯ್ಲರ್. ನೀರನ್ನು ಸುಮಾರು 180 ಡಿಗ್ರಿ ಸೆಲ್ಶಿಯಸ್ ವರೆಗೆ ಕಾಯಿಸಲಾಗುತ್ತದೆ. ಇದರಿಂದ ಉಂಟಾಗುವ ಹೆಚ್ಚಿನ ಒತ್ತಡದ ಆವಿಯನ್ನು ಪೈಪುಗಳ ಅಚ್ಚುಕಟ್ಟಾದ ಜಾಲದ ಮೂಲಕ ಅಡುಗೆ ಮನೆಗೆ ರವಾನಿಸಲಾಗುತ್ತದೆ. ಅಡುಗೆ ಮನೆಯು ಒಂದು ಇಂಜಿನಿಯರಿಂಗ್ ಅದ್ಭುತವೆಂದೇ ಹೇಳಬಹುದು. ನೇರವಾದ ಬೆಂಕಿಯ ಜ್ವಾಲೆಯ ಬದಲಿಗೆ ಆವಿಯೇ ತಾಪದ ಮುಖ್ಯ ಮೂಲವಾಗುತ್ತದೆ.

ಜೈವಿಕ ಇಂಧನ ತಯಾರಿಯಾಗೋದು ಹೀಗೆ.!

ಜೈವಿಕ ಇಂಧನ ಮತ್ತು ಇಟ್ಟಿಗೆಗಳನ್ನು (ಬ್ರಿಕೆಟ್) ಜೊತೆಯಾಗಿ ಬಳಸಲಾಗುತ್ತದೆ. ಇಟ್ಟಿಗೆಗಳನ್ನು ಆಶ್ರಮದಲ್ಲಿಯೇ, ಎಲೆಗಳು, ಹುಲ್ಲು, ಮರದ ತುಂಡುಗಳಂತಹ ಒಣಗಿದ ಸಾವಯವ ಪದಾರ್ಥಗಳನ್ನು ಬಳಸಿ ಮಾಡಲಾಗುತ್ತದೆ. ಇವುಗಳನ್ನು ಬಾಯ್ಲರ್ ನಲ್ಲಿ ಸುಟ್ಟಾಗ ಉಗಿಯನ್ನು ಉತ್ಪಾದಿಸುವಷ್ಟು ಶಾಖವನ್ನು ಅವು ಉತ್ಪಾದಿಸುತ್ತವೆ. ಜೊತೆಗೆ ತರಕಾರಿಯ ಸಿಪ್ಪೆ, ಅಡುಗೆಯ ತ್ಯಾಜ್ಯಗಳಿಂದ ಅಡುಗೆಯ ಅನಿಲವನ್ನು ಉತ್ಪಾದಿಸಿ, ಅಡುಗೆಯ ವ್ಯವಸ್ಥೆಯಲ್ಲಿ ಬಳಸಲಾಗುತ್ತದೆ.

ಏನೆಲ್ಲ ವಿಶೇಷತೆ ಇದೆ?

18,000 ಚದುರಡಿಗಳಷ್ಟು ಇರುವ ಆಶ್ರಮದ ಅನ್ನಪೂರ್ಣ ಅಡುಗೆ ಮನೆಯು, FSSAI ಎಫ್ ISO 22000-2018 ಪ್ರಮಾಣೀಕೃತವಾಗಿದೆ. ಇದು ಅತ್ಯಾಧುನಿಕ ಯಂತ್ರೋಪಕರಣಗಳನ್ನು ಹೊಂದಿದ್ದು, ಇದರಲ್ಲಿ ಅಕ್ಕಿ ಮತ್ತು ತರಕಾರಿಗಳನ್ನು ಬೇಯಿಸಲು ಸ್ವಯಂಚಾಲಿತ ವ್ಯವಸ್ಥೆಗಳು ಮತ್ತು ಗಂಟೆಗೆ 8000 ರೊಟ್ಟಿಗಳನ್ನು ತಯಾರಿಸುವ ಯಂತ್ರವೂ ಸೇರಿದೆ.

ಕೋವಿಡ್​ ಕಾಲದಲ್ಲಿ ನಡೆದಿತ್ತು ಅನ್ನದಾಸೋಹ

ಕೋವಿಡ್-19 ರ ಸಮಯದಲ್ಲಿ, ಅಡುಗೆಮನೆಯು ಒಂದು ತಿಂಗಳು ಪೂರ್ತಿ ಪ್ರತಿದಿನ 34,000 ಊಟಗಳನ್ನು ತಯಾರಿಸಿತು. ಆಹಾರದ ಲಭ್ಯತೆ ತೀವ್ರವಾಗಿ ಅಸ್ತವ್ಯಸ್ತವಾದಾಗ ಇದನ್ನು ಸುತ್ತಮುತ್ತಲಿನ ಹಳ್ಳಿಗಳಿಗೆ, ಹೊರರಾಜ್ಯದಿಂದ ಬಂದಿದ್ದ ನೌಕರರಿಗೆ ವಿತರಿಸಲಾಗಿತ್ತು.

70 ಪ್ರತಿಶತವನ್ನು ಬಯೋಗ್ಯಾಸ್ ಬಳಕೆ

ಮತ್ತೆ ಮತ್ತೆ ಮರುಬಳಕೆಯಾಗುವ, ಸ್ವಾವಲಂಬಿ ಮಾದರಿಯು ಇದಾಗಿದೆ. "ಅಡುಗೆಮನೆಯ ಇಂಧನ ಅಗತ್ಯಗಳಲ್ಲಿ ಸುಮಾರು 70 ಪ್ರತಿಶತವನ್ನು ಬಯೋಗ್ಯಾಸ್ ಮೂಲಕ ಪೂರೈಸಲಾಗುತ್ತಿದ್ದು, ಎಲ್ಪಿಜಿಯ ಅವಶ್ಯಕತೆಯು 30% ಮಾತ್ರ. ಹಲವು ಸಂದರ್ಭಗಳಲ್ಲಿ, ದೈನಂದಿನ ಕಾರ್ಯಗಳಿಗೆ ಗ್ಯಾಸ್ ಸಿಲಿಂಡರ್‌ಗಳು ಬೇಕಾಗುವುದೇ ಇಲ್ಲ" ಎಂದು ಅನಂತ ಮೊರಾನ್ ಹಂಚಿಕೊಳ್ಳುತ್ತಾರೆ.

ಜೈವಿಕ ಇಂಧನ ಬಳಕೆ ಪರಿಸರ ಸ್ನೇಹಿ ಹಾದಿ!

ದೇಶದಾದ್ಯಂತದ ಊಟಗಾರಿಕೆ ಕೇಂದ್ರಗಳು ದೊಡ್ಡ ಮಟ್ಟದ ಅಡುಗೆಗಾಗಿ ಸಾಂಪ್ರದಾಯಿಕ ಇಂಧನಗಳ ಮೇಲೆ ಇರುವ ಅವಲಂಬನೆಯನ್ನು ಮರುಪರಿಶೀಲಿಸಲು ಒತ್ತಾಯಿಸಿರುವ ಈ ಸಮಯದಲ್ಲಿ, ದಿ ಆರ್ಟ್ ಆಫ್ ಲಿವಿಂಗ್ ನ ಶೂನ್ಯ ತ್ಯಾಜ್ಯ, ಪರಿಸರ ಸ್ನೇಹಿ ಹಾದಿ ಇತರರಿಗೆ ಮಾರ್ಗದರ್ಶನವಾಗಿದೆ.