ಭೂಲೋಕ ಸುಂದರಿ ಶೋಭಿತಾ!

ವಿನಾಯಕ ನಾಯಕ

ಭೂಲೋಕ ಸುಂದರಿ ಶೋಭಿತಾ!

ಶೋಭಿತಾ ಧುಲಿಪಾಲ ಅವರು 1992ರ ಮೇ 31ರಂದು ಆಂಧ್ರಪ್ರದೇಶದ ತೆನಾಲಿಯಲ್ಲಿ ಜನಿಸಿದರು. ನಂತರ ಮುಂಬೈ ವಿಶ್ವವಿದ್ಯಾಲಯದ ಎಚ್.ಆರ್. ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ.

ಸೌಂದರ್ಯ ಸ್ಪರ್ಧೆ ವಿಜೇತೆ

ಶೋಭಿತಾ ಫೆಮಿನಾ ಮಿಸ್​ ಇಂಡಿಯಾ ಅರ್ಥ್ 2013 ಪ್ರಶಸ್ತಿಯನ್ನು ಗೆದ್ದು, ಅದೇ ವರ್ಷ ಭಾರತವನ್ನು ಮಿಸ್​ ಅರ್ಥ್ 2013 ಸ್ಪರ್ಧೆಯಲ್ಲಿ ಪ್ರತಿನಿಧಿಸಿದ್ದರು.

ಚಿತ್ರರಂಗ ಪ್ರವೇಶ

2016ರಲ್ಲಿ ನಿರ್ದೇಶಕ ಅನುರಾಗ್ ಕಶ್ಯಪ್ ಅವರ ಹಿಂದಿ ಸಿನಿಮಾ ರಮಣ್​ ರಾಘವ್​ 2.0 ಮೂಲಕ ಶೋಭಿತಾ ಧುಲಿಪಾಲ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು.

ಬಹುಭಾಷಾ ನಟಿ

ಶೋಭಿತಾ ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಚಿತ್ರರಂಗಗಳಲ್ಲಿ ಯಶಸ್ವಿಯಾಗಿ ನಟಿಸಿದ್ದಾರೆ. ಗೂಢಾಚಾರಿ, ಮೇಜರ್​, ಕುರುಪ್​, ಪೊನ್ನಿಯನ್​ ಸೆಲ್ವನ್​ ಹಾಗೂ ಮೆಡ್​ ಇನ್​ ಹೆವನ್ ಮೂಲಕ ಅಪಾರ ಜನಪ್ರಿಯತೆ ಗಳಿಸಿದ್ದಾರೆ.

ಶಾಸ್ತ್ರೀಯ ನೃತ್ಯಗಾರ್ತಿ; ಚೈತನ್ಯ ಪತ್ನಿ

ಶೋಭಿತಾ ಭರತನಾಟ್ಯ ಮತ್ತು ಕುಚಿಪುಡಿ ಶಾಸ್ತ್ರೀಯ ನೃತ್ಯಗಳಲ್ಲಿ ತರಬೇತಿ ಪಡೆದಿದ್ದಾರೆ. ಹಾಗೆಯೇ ಶೋಭಿತಾ ನಟ ನಾಗ ಚೈತನ್ಯ ಅವರನ್ನು 2024ರಲ್ಲಿ ವಿವಾಹವಾಗಿದ್ದಾರೆ.