ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಕನ್ನಡಿಗರ ಮನದಲ್ಲಿ ಮನೆ ಮಾಡಿರುವ ನಟಿ ಶೋಭಾ ಶೆಟ್ಟಿ ಅವರ ಹೊಸ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಗಾಢ ಹಸಿರು ಬಣ್ಣದ ಪಾರದರ್ಶಕ ಸೀರೆ ಧರಿಸಿ ಶೋಭಾ ಮಿಂಚಿದ್ದಾರೆ.
ಕರಾವಳಿ ಬೆಡಗಿ
ಶೋಭಾ ಶೆಟ್ಟಿ ಅವರು ಕರ್ನಾಟಕದ ಕರಾವಳಿ ಮೂಲದವರು (ಮಂಗಳೂರು). ಇವರ ಮಾತೃಭಾಷೆ ತುಳು. ಇವರು ತಮ್ಮ ಶಿಕ್ಷಣವನ್ನು ಬೆಂಗಳೂರಿನಲ್ಲಿ ಮುಗಿಸಿದರು.
ಕನ್ನಡ ಕಿರುತೆರೆಗೆ ಎಂಟ್ರಿ
ಇವರು ಮೊದಲು ಬಣ್ಣ ಹಚ್ಚಿದ್ದು ಕನ್ನಡ ಧಾರಾವಾಹಿಗಳ ಮೂಲಕ. ಕಲರ್ಸ್ ಕನ್ನಡ ವಾಹಿನಿಯ ಸೂಪರ್ ಹಿಟ್ ಧಾರಾವಾಹಿ 'ಅಗ್ನಿಸಾಕ್ಷಿ'ಯಲ್ಲಿ 'ತನು' ಎಂಬ ನೆಗೆಟಿವ್ ಶೇಡ್ ಪಾತ್ರದ ಮೂಲಕ ಇವರು ಕರ್ನಾಟಕದ ಮನೆಮಾತಾದರು.
ತೆಲುಗು ಕಿರುತೆರೆಯಲ್ಲಿ ಯಶಸ್ಸು
ಕನ್ನಡದ ನಂತರ ತೆಲುಗು ಕಿರುತೆರೆಗೆ ಕಾಲಿಟ್ಟ ಶೋಭಾಗೆ ಅಪಾರ ಜನಪ್ರಿಯತೆ ಸಿಕ್ಕಿತು. ವಿಶೇಷವಾಗಿ ಸ್ಟಾರ್ ಮಾ ವಾಹಿನಿಯ 'ಕಾರ್ತಿಕ ದೀಪಂ' ಧಾರಾವಾಹಿಯ 'ಮೋನಿತಾ' ಎಂಬ ಖಳನಾಯಕಿ ಪಾತ್ರ ವೃತ್ತಿಜೀವನಕ್ಕೆ ದೊಡ್ಡ ತಿರುವು ನೀಡಿತು.
ಬಿಗ್ ಬಾಸ್ ಜರ್ನಿ
ತೆಲುಗಿನ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ ತೆಲುಗು ಸೀಸನ್ 7' ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದ ಇವರು, ತಮ್ಮ ನೇರ ನಡೆ-ನುಡಿ ಮತ್ತು ಗಟ್ಟಿಯಾದ ಧ್ವನಿಯ ಮೂಲಕ ಟಾಪ್ ಸ್ಪರ್ಧಿಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡರು.
ಕನ್ನಡ ಬಿಗ್ಬಾಸ್ನಲ್ಲೂ ಹವಾ
2024ರ ಕೊನೆಯಲ್ಲಿ ಪ್ರದರ್ಶನಗೊಂಡ ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ವೈಲ್ಡ್-ಕಾರ್ಡ್ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಆರೋಗ್ಯದ ಕಾಳಜಿಯನ್ನು ಉಲ್ಲೇಖಿಸಿ ಅವರು ಸೀಸನ್ ಮಧ್ಯದಲ್ಲಿಯೇ ಕಾರ್ಯಕ್ರಮದಿಂದ ಹೊರಬಂದರು.
ಸಿನಿಮಾಗಳಲ್ಲೂ ನಟನೆ
ಕೇವಲ ಧಾರಾವಾಹಿಗಳಷ್ಟೇ ಅಲ್ಲದೆ, ಕನ್ನಡದ 'ಅಂಜನಿ ಪುತ್ರ' ಚಿತ್ರದಲ್ಲಿ ನಟ ಪುನೀತ್ ರಾಜ್‌ಕುಮಾರ್ ಅವರ ತಂಗಿಯ ಪಾತ್ರದಲ್ಲಿ ಹಾಗೂ ತೆಲುಗಿನ ಕೆಲವು ಸಿನಿಮಾಗಳಲ್ಲೂ ಇವರು ನಟಿಸಿದ್ದಾರೆ.
ಸೋಶಿಯಲ್ ಮೀಡಿಯಾ ಸ್ಟಾರ್
ಶೋಭಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ. ಇವರದೇ ಆದ ಯೂಟ್ಯೂಬ್ ಚಾನೆಲ್ ಹೊಂದಿದ್ದು, ವೈಯಕ್ತಿಕ ಜೀವನ, ವ್ಲಾಗ್ಸ್ ಮತ್ತು ಫ್ಯಾಷನ್ ರೀಲ್ಸ್ ಮೂಲಕ ಲಕ್ಷಾಂತರ ಫಾಲೋವರ್ಸ್ ಸಂಪಾದಿಸಿದ್ದಾರೆ.
ಪಾರದರ್ಶಕ ಸೀರೆ
ಗಾಢ ಹಸಿರು ಬಣ್ಣದ ಪಾರದರ್ಶಕ ಸೀರೆ ಧರಿಸಿ, ವಿವಿಧ ಭಂಗಿಗಳಲ್ಲಿ ಕ್ಯಾಮೆರಾಗೆ ಪೋಸ್ ನೀಡಿರುವ ಫೋಟೋಗಳನ್ನು ಶೋಭಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಶೋಭಾರ ಮೈಮಾಟಕ್ಕೆ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ.