17 ವರ್ಷಗಳ ಬಳಿಕ ದರ್ಶನ್ ಜೊತೆ ನಟನೆ

ಭೂಮಿಕಾ ವಿ. ನಾಥ್​​​

17 ವರ್ಷಗಳ ಬಳಿಕ ದರ್ಶನ್ ಜೊತೆ ನಟನೆ

ನವಗ್ರಹ ಚಿತ್ರದಲ್ಲಿ ನಟ ದರ್ಶನ್ ಜೊತೆಗೆ ನಟಿಸಿದ್ದ ನಟಿ ಶರ್ಮಿಳಾ ಮಾಂಡ್ರೆ ಇದೀಗ 17 ವರ್ಷಗಳ ನಂತರ ಮತ್ತೆ 'ಡೆವಿಲ್' ಚಿತ್ರದಲ್ಲಿ ನಟಿಸುತ್ತಿದ್ದಾರೆ.

ರಾಜಕಾರಣಿಯಾಗಿ ಮಹತ್ವದ ಪಾತ್ರ

ಚಿತ್ರದಲ್ಲಿ ನಾನು ಒಬ್ಬ ರಾಜಕಾರಣಿಯಾಗಿ ಮಹತ್ವದ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ. ಈ ಪಾತ್ರವನ್ನು ಮಾಡಬೇಂದು ಬಹಳ ದಿನಗಳಿಂದ ಆಸೆಯಿತ್ತು ಎಂದಿದ್ದಾರೆ ಶರ್ಮಿಳಾ

ನವಗ್ರಹ ಚಿತ್ರದಲ್ಲಿ ನಟ ದರ್ಶನ್ ಜೊತೆ ನಟನೆ

ನವಗ್ರಹ ಚಿತ್ರದಲ್ಲಿ ನಟ ದರ್ಶನ್ ಜೊತೆಗೆ ನಟಿಸಿದ್ದ ನಟಿ ಶರ್ಮಿಳಾ ಮಾಂಡ್ರೆ ಇದೀಗ 17 ವರ್ಷಗಳ ನಂತರ ಮತ್ತೆ 'ಡೆವಿಲ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಪ್ರಕಾಶ್ ವೀರ್ ನಿರ್ದೇಶನದ ಈ ಚಿತ್ರದಲ್ಲಿ ಅವರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಪ್ರಕಾಶ್ ವೀರ್ ಜತೆ ಮೊದಲ ಸಹಯೋಗ

ಪ್ರಕಾಶ್ ವೀರ್ ಜೊತೆಗೆ ಶರ್ಮಿಳಾ ಮಾಂಡ್ರೆ ಅವರ ಮೊದಲ ಸಹಯೋಗ ಇದಾಗಿದೆ.

ನವಗ್ರಹ ಚಿತ್ರ ಮರುಬಿಡುಗಡೆ

ದರ್ಶನ್​ ಜತೆ ಶರ್ಮಿಳಾ ನಟಿಸಿದ್ದ ನವಗ್ರಹ ಚಿತ್ರವೂ ನವೆಂಬರ್ 8 ರಂದು ಚಿತ್ರಮಂದಿರಗಳಲ್ಲಿ ಮರು ಬಿಡುಗಡೆಯಾಗಿತ್ತು. 'ಇದೊಂದು ಅವಾಸ್ತವಿಕ ಅನುಭವವಾಗಿತ್ತು ಮತ್ತು ಚಿತ್ರದ ಸುತ್ತಲಿನ ಕ್ರೇಜ್ ಅದ್ಭುತವಾಗಿತ್ತು. ನಾನು ಕೂಡ ಚಿತ್ರಮಂದಿರಗಳಿಗೆ ಭೇಟಿ ನೀಡಿದ್ದೆ. ಇದು ನಿಜವಾಗಿಯೂ ಉತ್ತಮವಾಗಿತ್ತು' ಎಂದು ಅವರು ನೆನಪಿಸಿಕೊಳ್ಳುತ್ತಾರೆ.