'ಕೃಷ್ಣ' ಸುಂದರಿ ಶರ್ಮಿಳಾ ಮಾಂಡ್ರೆ ಎಂಗೇಜ್​ಮೆಂಟ್​

ಮಮತಾ

'ಕೃಷ್ಣ' ಸುಂದರಿ ಶರ್ಮಿಳಾ ಮಾಂಡ್ರೆ ಎಂಗೇಜ್​ಮೆಂಟ್​

ನವಗ್ರಹ, ಸಜನಿ, ಕೃಷ್ಣ ಸಿನಿಮಾದಿಂದ ಹೆಚ್ಚು ಚಿರಪರಿಚಿತರಾದ ಶರ್ಮಿಳಾ ಮಾಂಡ್ರೆ ಅವರು 36ನೇ ವರ್ಷಕ್ಕೆ ತಮ್ಮ ಸಂಗಾತಿಯೊಂದಿಗೆ ಬೆಂಗಳೂರಿನ ಸ್ಟಾರ್ ಹೋಟೆಲ್‌ನಲ್ಲಿ ಎಂಗೇಜ್​ಮೆಂಟ್​ ಮಾಡಿಕೊಂಡಿದ್ದಾರೆ.

ಜಸ್ಟ್​ ಲೈಕ್​ ದಟ್

ತಮಿಳು ನಿರ್ಮಾಪಕ ಸುಧನ್​ ಸುಂದರಂ ಜೊತೆಗಿನ ಫೋಟೋಗಳನ್ನು ಇನ್​​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಆಂಡ್ ಜಸ್ಟ್​ ಲೈಕ್​ ದಟ್ ಎನ್ನುವ ಶೀರ್ಷಿಕೆ ಕೊಟ್ಟಿದ್ದಾರೆ.

ಅಪ್ಸರೆ ಶರ್ಮಿಳಾ

ದಂತದ ಬಣ್ಣದ ಬಣ್ಣದ ಸೀರೆ ಉಟ್ಟಿರುವ ಅವರು ಅಪ್ಸರಯಂತೆ ಕಾಣಿಸಿಕೊಂಡಿದ್ದಾರೆ. ಇನ್ನು ಸುಧನ್​ ಸುಂದರಂ ಅದೇ ಬಣ್ಣದ ಜುಬ್ಬ, ಪೈಜಾಮಾ ಧರಿಸಿದ್ದಾರೆ. ಅದಕ್ಕೊಪ್ಪುವ ಶಾಲು ಹಾಗೂ ಆಭರಣ ಧರಿಸಿ ಮಿಂಚಿದ್ದಾರೆ.

ಮದುವೆಗೆ ಡೇಟ್ ಫಿಕ್ಸ್ ಆಗಿಲ್ಲ

ಸದ್ಯ ಆಪ್ತರು ಹಾಗೂ ಸಂಬಂಧಿಕರ ಸಮ್ಮುಖದಲ್ಲಿ ಶರ್ಮಿಳಾ ಮಾಂಡ್ರೆ ಅವರ ನಿಶ್ಚಿತಾರ್ಥ ನಡೆದು ಮದುವೆಗಾಗಿ ಯಾವುದೇ ಡೇಟ್ ಫಿಕ್ಸ್​ ಮಾಡಿಲ್ಲ. ಮುಂದಿನ ದಿನದಲ್ಲಿ ಯೋಜಿಸಲಾಗುವುದು ಎನ್ನಲಾಗಿದೆ.

ಸುಧನ್​ ಸುಂದರಂ ಯಾರು?

ತಮಿಳು ನಿರ್ಮಾಪಕ ಸುಧನ್​ ಸುಂದರಂ ವಿಜಯ್​ ಸೇತುಪತಿ ನಟಿಸಿರುವ ಮಹಾರಾಜ ಸಿನಿಮಾವನ್ನು ನಿರ್ಮಿಸಿದ್ದರು. ರಿವಾಲ್ವರ್ ರೀಟ, ಅನ್ನೆಬೆಲ್ಲೆ ಸೇತುಪತಿ, ಅಂಧಗಾರಂ, ಪೆಟ್ರೋಮ್ಯಾಕ್ಸ್, ಪೆಂಗ್ವಿನ್​ನಂತಹ ಸೂಪರ್​ ಹಿಟ್​​​ ಸಿನಿಮಾವನ್ನು ನಿರ್ಮಿಸಿದ್ದಾರೆ.

ಶರ್ಮಿಳಾ ನಟನೆಯ ಸಿನಿಮಾವಿದು

ಶರ್ಮಿಳಾ ಮಾಡ್ರೆ ನವಗ್ರಹ ಹಾಗೂ ಕೃಷ್ಣ ಹಾಗೂ ಸಜನಿ ಸಿನಿಮಾದಿಂದ ಹೆಚ್ಚು ಪರಿಚಿತರಾದರು. ಇತ್ತೀಚೆಗೆ ಗಾಳಿಪಟ, ಪೌಡರ್​​ ಹಾಗೂ ದರ್ಶನ್​ ನಟನೆಯ ದಿ ಡೆವಿಲ್​ ಸಿನಿಮಾದಲ್ಲಿ ನಟಿಸಿದ್ದರು. ಕೆವ್ವು ಕೇಕಾ ಕರಿಚಿರತೆ ಇವರ ಪ್ರಮುಖ ಸಿನಿಮಾಗಳು

'ಪೌಡರ್' ಮೂಲಕ ಸಿನಿಮಾಕ್ಕೆ ಕಂಬ್ಯಾಕ್

ಶರ್ಮಿಳಾ ಮಾಂಡ್ರೆ ಅವರು ಕನ್ನಡ ಹಾಗೂ ತೆಲುಗು ಸಿನಿಮಾಗಳಿಂದ ಬ್ರೇಕ್​ ತೆಗೆದುಕೊಂಡಿದ್ದರು. ಕಳೆದ ವರ್ಷ ದಿಗಂತ್​ ನಟನೆಯ ಪೌಡರ್ ಸಿನಿಮಾ ರಿಲೀಸ್ ಆಗಿತ್ತು. ಆ ಮೂಲಕ ಅವರು ಮತ್ತೆ ನಟನೆಗೆ ಕಂಬ್ಯಾಕ್ ಆಗಿದ್ದಾರೆ.