ಸಿನಿಮಾಗಳಿಂದ ಕೊಂಚ ಬ್ರೇಕ್ ಪಡೆದುಕೊಂಡಿರುವ ಮಾಸ್ಟರ್ ಪೀಸ್, ಅವನೇ ಶ್ರೀಮನ್ ನಾರಾಯಣ ಖ್ಯಾತಿಯ ಹುಡುಗಿ ಶಾನ್ವಿ ಶ್ರೀವಾತ್ಸವ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ. ಆ ಮೂಲಕ ತಮ್ಮ ಅಭಿಮಾನಿಗಳಿಗೆ ಅಪಡೇಟ್ ನೀಡುತ್ತಿದ್ದಾರೆ.
ಇಟಲಿಯಲ್ಲಿ ಶಾನ್ವಿ
ಇಟಲಿಯ ಸುಂದರ ಪ್ರದೇಶವಾದ ಟಸ್ಕನಿಯ ಪ್ರಾಂತ್ಯದ್ಲಿರುವ ಸುಂದರ ಮತ್ತು ಐತಿಹಾಸಿಕ ಸ್ಥಳಕ್ಕೆ ಶಾನ್ವಿ ಶ್ರೀವಾತ್ಸವ್ ಭೇಟಿ ನೀಡಿದ್ದು, ಅಲ್ಲಿ ತಮಗಾದ ಅನುಭವದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಜೊತೆಗೆ ಮಿನಿ ಬಿಳಿ ಮಿಶ್ರಿತ ಕ್ರೀಮಿ ಬಣ್ಣದ ಮಿನಿ ಫ್ರಾಕ್ ಧರಿಸಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ.
ಇಟಲಿ ಪ್ರವಾಸದ ಬಗ್ಗೆ ಹೀಗಂದ್ರು
ಇದು ಟಸ್ಕನಿಯ 'ಸ್ಯಾನ್ ಕ್ವಿರಿಕೊ ಡೋರ್ಸಿಯಾ' ಎಂಬ ಸ್ಥಳ... ಜೀವನ ಎಂದರೆ ಯಾವಾಗಲೂ ಕೇವಲ ಮುಂದಿನ ಗಮ್ಯಸ್ಥಾನದ ಕಡೆಗೆ ಓಡುವುದಷ್ಟೇ ಅಲ್ಲ ಎಂಬುದನ್ನು ನೆನಪಿಸುವ ಮೃದುವಾದ ಜ್ಞಾಪನೆಯಂತೆ ಇದು ಭಾಸವಾಯಿತು ಎಂದಿದ್ದಾರೆ.
ಜೀವನವೆಂದರೆ....
ಕೆಲವೊಮ್ಮೆ ಜೀವನವೆಂದರೆ ಹೀಗೆ.. ಕೊಂಚ ನಿಧಾನವಾಗಿ ಸಾಗುವುದು, ಬೆಚ್ಚಗಿನ ಬಿಸಿಲನ್ನು ಆಸ್ವಾದಿಸುವುದು, ಶಾಂತವಾದ ಬೀದಿಗಳಲ್ಲಿ ಕಳೆದುಹೋಗುವುದು ಮತ್ತು ಒಂದು ಸುಂದರ ತಾಣವು ನಮ್ಮ ಮನಸ್ಸನ್ನು ಆವರಿಸಿಕೊಳ್ಳಲು ಬಿಡುವುದು ಎಂದು ಜೀವನದ ಪಾಠ ಮಾಡಿದ್ದಾರೆ.
ಶ್ವಾನಿ ನಟಿಸಿದ ಸಿನಿಮಾಗಳಿವು
ಶಾನ್ವಿ ಅವರು ಟಾಲಿವುಡ್, ಬಾಲಿವುಡ್ನಲ್ಲಿಯೂ ನಟಿಸಿದ್ದಾರೆ ರೆಡ್ಡಿಗಾರು, ಭಲೆ ಜೋಡಿ, ಕಸ್ತೂರಿ ಮಹಲ್, ರಾಂತಿ, ಅಡ್ಡಾ, ಬ್ಯಾಂಗ್ ಸಿನಿಮಾದಲ್ಲಿ ನಟಿಸಿದ್ದಾರೆ.