ಸ್ಟ್ರೀಟ್ ಫ್ಯಾಷನ್‌ಗೆ ಹೊಸ ಟ್ರೆಂಡ್ ಸೆಟ್ ಮಾಡಿದ ಶಾನ್ವಿ!

ಭಾನುಪ್ರಿಯ ಡಿ.ಕೆ

ಸ್ಟ್ರೀಟ್ ಫ್ಯಾಷನ್‌ಗೆ ಹೊಸ ಟ್ರೆಂಡ್ ಸೆಟ್ ಮಾಡಿದ ಶಾನ್ವಿ!

ಶಾನ್ವಿ ಶ್ರೀವಾಸ್ತವ ಭಾರತೀಯ ನಟಿ ಮತ್ತು ರೂಪದರ್ಶಿಯಾಗಿದ್ದು, ಕನ್ನಡ ಚಲನಚಿತ್ರಗಳು ಮತ್ತು ಕೆಲವು ತೆಲುಗು ಮತ್ತು ಮಲಯಾಳಂ ಚಲನಚಿತ್ರಗಳಲ್ಲಿ ಕೆಲಸ ಮಾಡುತ್ತಾರೆ.

ಚಿತ್ರರಂಗಕ್ಕೆ ಪದಾರ್ಪಣೆ

ನಟಿ ಶಾನ್ವಿ 2012ರಲ್ಲಿ ಬಿಡುಗಡೆಯಾದ 'ಲವ್ಲಿ' ಎಂಬ ತೆಲುಗು ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಆರಂಭದಲ್ಲೇ ತಮ್ಮ ಮುದ್ದಾದ ಅಭಿನಯದ ಮೂಲಕ ದಕ್ಷಿಣ ಭಾರತದ ಪ್ರೇಕ್ಷಕರ ಗಮನ ಸೆಳೆದರು.

ಚಂದನವನದಲ್ಲಿ ಸ್ಟಾರ್ ನಟಿಯಾಗಿ ಉದಯ

2014ರಲ್ಲಿ ಬಿಡುಗಡೆಯಾದ 'ಚಂದ್ರಲೇಖಾ' ಚಿತ್ರದ ಮೂಲಕ ಶಾನ್ವಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಅವರು ತದನಂತರ 'ಮಾಸ್ಟರ್ ಪೀಸ್', 'ಸುಂದರಾಂಗ ಜಾಣ' ಹಾಗೂ 'ಗೀತಾ' ಚಿತ್ರಗಳಲ್ಲಿ ನಟಿಸಿದರು.

ಅವನೇ ಶ್ರೀಮನ್ನಾರಾಯಣ

ರಕ್ಷಿತ್ ಶೆಟ್ಟಿ ನಟನೆಯ ಪ್ಯಾನ್-ಇಂಡಿಯಾ ಚಿತ್ರ 'ಅವನೇ ಶ್ರೀಮನ್ನಾರಾಯಣ' (2019) ಚಿತ್ರದಲ್ಲಿ 'ಲಕ್ಷ್ಮಿ' ಎಂಬ ಪತ್ರಕರ್ತೆಯ ಪಾತ್ರದಲ್ಲಿ ಶಾನ್ವಿ ಅದ್ಭುತವಾಗಿ ನಟಿಸಿದರು. ಈ ಸಿನಿಮಾ ಇವರ ವೃತ್ತಿಜೀವನಕ್ಕೆ ದೊಡ್ಡ ಮೈಲಿಗಲ್ಲಾಗಿ ಮೂಡಿಬಂತು.

ಬಹುಭಾಷಾ ತಾರೆ

ಕನ್ನಡ ಮತ್ತು ತೆಲುಗು ಮಾತ್ರವಲ್ಲದೆ ಮಲಯಾಳಂ ಚಿತ್ರರಂಗಕ್ಕೂ ಹೆಜ್ಜೆ ಇಟ್ಟಿರುವ ಶಾನ್ವಿ, 'ಮಹಾಶಯನ್' ಎಂಬ ಚೀನೀ ಸರಣಿಯೊಂದರಲ್ಲೂ ನಟಿಸುವ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲೂ ಗುರುತಿಸಿಕೊಂಡಿದ್ದಾರೆ.

ಫ್ಯಾಷನ್ ಐಕಾನ್

ಸಾಮಾಜಿಕ ಜಾಲತಾಣಗಳಲ್ಲಿ ಮಿಲಿಯನ್ ಗಟ್ಟಲೆ ಅಭಿಮಾನಿಗಳನ್ನು ಹೊಂದಿರುವ ಇವರು, ಫಿಟ್‌ನೆಸ್, ಪ್ರಕೃತಿ ಪ್ರೇಮ ಮತ್ತು ಪ್ರವಾಸದ ಕುರಿತಾದ ಅಪ್ಡೇಟ್‌ಗಳನ್ನು ಹಂಚಿಕೊಳ್ಳುವ ಮೂಲಕ ಯುವ ಪೀಳಿಗೆಗೆ ಸದಾ ಸ್ಫೂರ್ತಿಯಾಗಿದ್ದಾರೆ.