'ನಿಶಬ್ಧಂ' ಶಾಲಿನಿ ಪಾಂಡೆ

ವಿಜಯವಾಣಿ ಸುದ್ದಿ ಜಾಲ

ಕನ್ನಡಿಗಳುಳ್ಳ ಡ್ರೆಸ್​ನಲ್ಲಿ ಶಾಲಿನಿ ಮಿಂಚು

ಶಾಲಿನಿ ಪಾಂಡೆ ಮಿಜ್ವಾನ್​ ಫ್ಯಾಶನ್​ ಶೋದಲ್ಲಿ ಭಾಗಿಯಾಗಿದ್ದರು. ಇನ್​ಸ್ಟಾದಲ್ಲಿ ತಮ್ಮ ಹೊಸ ಫೋಟೋಗಳು ಹಂಚಿಕೊಂಡಿದ್ದು ಸಾಕಷ್ಟು ಗಮನ ಸೆಳೆದಿದೆ.

ಏನಿದು ಮಿಜ್ವಾನ್​ ಫ್ಯಾಷನ್ ಶೋ?

ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕಾಗಿ ಮಿಜ್ವಾನ್ ವೆಲ್ಫೇರ್ ಸೊಸೈಟಿ ಈ ಫ್ಯಾಷನ್​ ಶೋ ಆಯೋಜಿಸಿತ್ತು. ಮುಂಬೈನ ತಾಜ್ ಲ್ಯಾಂಡ್ಸ್ ಎಂಡ್‌ನಲ್ಲಿ 15ನೇ ವರ್ಷದ ಕಾರ್ಯಕ್ರಮ ಆಚರಿಸಿತು

ಮೋಹಕ ಪೋಸ್​ಗಳು

ಶಾಲಿನಿ ಅವರು ಹಾಲ್ಟರ್​ ಕ್ರಾಪ್​ ಟಾಪ್​​, ವಜ್ರದಾಕಾರದ ಕನ್ನಡಿ ಲೇಪಿತ ಟಾಪ್​ ಧರಿಸಿದ್ದರು. ಕನ್ನಡಿಗಳು ಬೆಳಕನ್ನು ಸುಂದರವಾಗಿ ಬೀರುತ್ತಿದ್ದವು. ಇದರೊಂದಿಗೆ ಅವರು ಕೊಟ್ಟ ಮೋಹಕ ನೋಟಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ.

ಅರ್ಜುನ್​ ರೆಡ್ಡಿ ಮೂಲಕ ಫೇಮಸ್

ಶಾಲಿನಿ ಪಾಂಡೆ ಹಾಗೂ ವಿಜಯ್​ ದೇವರಕೊಂಡ ಅವರ ಮುಖ್ಯ ಭೂಮಿಕೆಯ ಅರ್ಜುನ್​ ರೆಡ್ಡಿ ಸಿನಿಮಾ ಸಾಕಷ್ಟು ಹಿಟ್​ ಕಂಡಿತ್ತು. ಇದು ಹಿಂದಿ, ತಮಿಳಿಗೂ ಡಬ್ ಆಗಿದೆ.

ಶಾಲಿನಿ ನಟನೆಯ ಸಿನಿಮಾವಿದು

ಮಹಾನಟಿ, 118, 100% ಕಾದಲ್​​, ಇಡ್ಲಿಕಡಾಯ್​, ಜಯೇಶ್​​​​​​ಭಾಯ್​ ಬೋರ್ದಾರ್​​, ಬಾಮ್​ ಪಾಡ್ ಸೇರಿದಂತೆ ಹಲವು ಸಿನಿಮಾದಲ್ಲಿ ನಟಿಸಿದ್ದಾರೆ.

ಎಐ ದುರುಪಯೋಗದ ವಿರುದ್ಧ ಕಿಡಿ

ಎಐ ದುರುಪಯೋಗದ ಬಗ್ಗೆ ಬಾಲಿವುಡ್​ನಲ್ಲಿ ಸಲ್ಮಾನ್​ ಖಾನ್​, ಮೃಣಾಲ್​ ಠಾಕೂರ್​ ಕಿಡಿಕಾರಿದ್ದರೆ. ಸದ್ಯ ಅವರ ಲಿಸ್ಟ್​ನಲ್ಲಿ ಶಾಲಿನಿ ಪಾಂಡೆ ಸಹ ಇದ್ದಾರೆ.

ಅರ್ಜುನ್​ ರೆಡ್ಡಿ ಸಿನಿಮಾ ನೆನೆದ ಶಾಲಿನಿ

ಅರ್ಜುನ್​ ರೆಡ್ಡಿ ಸಿನಿಮಾ ರಿಲೀಸ್​ ಆಗಿ ಹಿಟ್​ ಕಂಡ 9 ವರ್ಷದ ಬಳಿಕ ಸಿನಿಮಾ ಬಗ್ಗೆ ಇತ್ತೀಚೆಗೆ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಹಾಕಿದ್ದರು.