ಯಾರು ಈ ಟಾಪ್​ಲೆಸ್​ ಬ್ಯೂಟಿ?

ರಮೇಶ್​ ಕುಮಾರ್​​ ಬಿ ಎಡಮೋಳೆ

ಯಾರು ಈ ಟಾಪ್​ಲೆಸ್​ ಬ್ಯೂಟಿ?

ಬಹುಭಾಷಾ ನಟಿ ಶಾಲಿನಿ ಪಾಂಡೆ ಅವರ ಟಾಪ್​ಲೆಸ್​ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸುತ್ತಿದೆ. ಶಾಲಿನಿಯ ಮೈಮಾಟಕ್ಕೆ ಫಿದಾ ಆಗಿರುವ ಫ್ಯಾನ್ಸ್​ ಕಾಮೆಂಟ್​ಗಳ ಸುರಿಮಳೆಗೈಯುತ್ತಿದ್ದಾರೆ.

ಶಾಲಿನಿ ಹಿನ್ನೆಲೆ

ಶಾಲಿನಿ ಪಾಂಡೆ ಅವರು 1993, ಸೆಪ್ಟೆಂಬರ್ 23ರಂದು ಮಧ್ಯಪ್ರದೇಶದ ಜಬಲ್ಪುರ್‌ನಲ್ಲಿ ಜನಿಸಿದರು. ಇಂಜಿನಿಯರಿಂಗ್ (B.Tech) ಪದವಿ ಪಡೆದಿದ್ದಾರೆ. ಕಾಲೇಜಿನಲ್ಲಿರುವಾಗಲೇ ಥಿಯೇಟರ್‌ ಕಡೆ ಆಸಕ್ತಿ ಬೆಳೆಸಿ ನಟನೆಯತ್ತ ತಿರುಗಿದರು.

ಸಿನಿಮಾ ಡೆಬ್ಯೂ

2017ರಲ್ಲಿ ತೆರೆಕಂಡು ಸೂಪರ್‌ಹಿಟ್ ಆದ ತೆಲುಗು ಚಿತ್ರ ಅರ್ಜುನ್ ರೆಡ್ಡಿಯಲ್ಲಿ ಪ್ರೀತಿ ಶೆಟ್ಟಿ ಪಾತ್ರದ ಮೂಲಕ ಮೊದಲ ಸಿನಿಮಾದಲ್ಲೆ ಯಶಸ್ಸನ್ನು ಗಳಿಸಿದರು. ಈ ಚಿತ್ರವೇ ಶಾಲಿನಿ ಅವರನ್ನು ರಾತ್ರೋ ರಾತ್ರಿ ಸ್ಟಾರ್ ಮಾಡಿತು.

ಬಹುಭಾಷಾ ನಟಿ

ತೆಲುಗು ಜೊತೆಗೆ ತಮಿಳು (100% ಕಾದಲ್), ಹಿಂದಿ ( ಜಯೇಶ್‌ಭಾಯ್ ಜೋರ್ದಾರ್, ಮಹಾರಾಜ್) ಚಿತ್ರಗಳಲ್ಲೂ ನಟಿಸಿದ್ದಾರೆ. ಅಲ್ಲದೆ, Netflix ಸರಣಿಗಳಲ್ಲೂ ಕಾಣಿಸಿಕೊಂಡಿದ್ದಾರೆ.

ಜಾಲತಾಣದಲ್ಲಿ ಫುಲ್​ ಆ್ಯಕ್ಟೀವ್​

ಶಾಲಿನಿ ಅವರು ಇನ್‌ಸ್ಟಾಗ್ರಾಂನಲ್ಲಿ (@shalzp) 2 ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್ಸ್​ ಹೊಂದಿದ್ದಾರೆ. ಆಗಾಗ ತಮ್ಮ ಬೋಲ್ಡ್ ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.

ಟಾಪ್​ಲೆಸ್​ ಆದ ಶಾಲಿನಿ

ಇತ್ತೀಚೆಗೆ ತಮ್ಮ ಇನ್​ಸ್ಟಾಗ್ರಾಂನಲ್ಲಿ ಟಾಪ್​ಲೆಸ್​ ಫೋಟೋವನ್ನು ಶಾಲಿನಿ ಹಂಚಿಕೊಂಡಿದ್ದು, ಸಖತ್​ ವೈರಲ್​ ಆಗುತ್ತಿದೆ. ಈವರೆಗೆ 1 ಲಕ್ಷಕ್ಕೂ ಅಧಿಕ ಲೈಕ್ಸ್​ ಪಡೆದಿದ್ದು, ಶಾಲಿನಿ ಮೈಮಾಟಕ್ಕೆ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ.

ಇತರ ಆಸಕ್ತಿಗಳು

ಅಂದಹಾಗೆ, ಶಾಲಿನಿ ಅವರು ಪ್ರಾಣಿ ಪ್ರೇಮಿ ಆಗಿದ್ದು, PETA ಜೊತೆಗೆ ಸಹಕರಿಸಿ ದತ್ತು ತೆಗೆದುಕೊಳ್ಳುವ ಅಭಿಯಾನಗಳಲ್ಲಿ ಭಾಗಿಯಾಗಿದ್ದಾರೆ. ಅವರ ದೇಸಿ ನಾಯಿ 'ಬಿರ್' ಅನ್ನು ದತ್ತು ತೆಗೆದುಕೊಂಡಿದ್ದಾರೆ.