ಪ್ರತಿದಿನ ಒಂದಲ್ಲ, ಒಂದು ಫೋಟೋ ಹರಿಬಿಡುವ ನಟಿ ಜ್ಯೋತಿ ರೈ ಅಲಿಯಾಸ್ ಜ್ಯೋತಿ ಪೂರ್ವಜ್, ಈಗ ಶ್ವೇತ ವರ್ಣದ ತುಂಡುಡುಗೆಯನ್ನು ಧರಿಸಿ ಮಾದಕ ಭಂಗಿಯಲ್ಲಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ.
ಕನ್ನಡತಿ ಜ್ಯೋತಿ
ಜ್ಯೋತಿ ಪೂರ್ವಜ್ ಓರ್ವ ಕನ್ನಡತಿ. ಧಾರಾವಾಹಿಗಳ ಮೂಲಕವೇ ಮನೆ ಮಾತಾಗಿದ್ದಾರೆ. ಇದೇ ಜನಪ್ರಿಯತೆ ಇಂದು ಆಕೆಯನ್ನು ಸಿನಿಮಾ ರಂಗಕ್ಕೆ ಕರೆತಂದಿದೆ.
ಕೊಡಗಿನ ಕುವರಿ
1985ರ ಫೆಬ್ರವರಿ 23ರಂದು ಮಡಿಕೇರಿಯಲ್ಲಿ ಜನಿಸಿ, ಪುತ್ತೂರಿನಲ್ಲಿ ಬೆಳೆದರು. ಡಿಗ್ರಿ ಮುಗಿಯುತ್ತಿದ್ದಂತೆ 20 ವರ್ಷ ವಯಸ್ಸಿನಲ್ಲೇ ಮೊದಲ ಮದುವೆಯಾಗಿತ್ತು. ಆದರೆ, ಭಿನ್ನಾಭಿಪ್ರಾಯಗಳಿಂದಾಗಿ ಡಿವೋರ್ಸ್ ಪಡೆದುಕೊಂಡರು.
ಕನ್ನಡ ಕಿರುತೆರೆಯಲ್ಲಿ ಪ್ರಸಿದ್ಧಿ
ಕನ್ನಡ ಧಾರಾವಾಹಿಗಳಾದ 'ಜೋಗುಳ', 'ಬಂದೇ ಬರುತಾವ ಕಾಲ', 'ಕಿನ್ನರಿ ಸಿರಿ' ಮುಂತಾದವುಗಳಲ್ಲಿ ನಟಿಸಿ ಗುರುತಿಸಿಕೊಂಡರು. ಕನ್ನಡದಲ್ಲಿ 'ಮನೆಮಗಳು' ಎಂದೇ ಖ್ಯಾತಿ ಪಡೆದರು.
ತೆಲುಗಿನಲ್ಲಿ ಬಿಜಿ
ತೆಲುಗಿನ ಗುಪ್ಪೆದಂಥಾ ಮನಸ್ಸು ಧಾರಾವಾಹಿಯಲ್ಲಿ ಮಿಂಚಿದ ಬಳಿಕ ತೆಲುಗು ಚಿತ್ರರಂಗದಲ್ಲಿ ಬಿಜಿಯಾದರು. ನಿರ್ದೇಶಕ ಸುಕು ಪೂರ್ವಜ್ ಅವರೊಂದಿಗೆ 2ನೇ ಮದುವೆಯಾದ ನಂತರ ಜ್ಯೋತಿ ಪೂರ್ವಜ್ ಎಂದು ಹೆಸರು ಬದಲಿಸಿಕೊಂಡರು.
ಬೋಲ್ಡ್ ಅವತಾರ
ತೆಲುಗಿನಲ್ಲಿ ನಾಯಕಿಯಾಗಿ 'ಕಿಲ್ಲರ್' ಚಿತ್ರದ ಮೂಲಕ ಗಮನ ಸೆಳೆದರು. ಇದು ಸೈ-ಫೈ ಥ್ರಿಲ್ಲರ್ ಚಿತ್ರವಾಗಿದ್ದು, ಗ್ಲಾಮರಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ತೆಲುಗು ಸಿನಿಮಾ ಮತ್ತು ವೆಬ್ ಸೀರೀಸ್‌ಗಳಲ್ಲಿ ಸಕ್ರಿಯರಾಗಿದ್ದಾರೆ.
ಫ್ಯಾನ್ ಫಾಲೋಯಿಂಗ್
ಇನ್‌ಸ್ಟಾಗ್ರಾಮ್‌ನಲ್ಲಿ ಸುಮಾರು 7 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ. ಫಿಟ್‌ನೆಸ್, ಗ್ಲಾಮರಸ್ ಫೋಟೋಶೂಟ್‌ಗಳು ಮತ್ತು ಬೋಲ್ಡ್ ಲುಕ್‌ಗಳಿಂದಾಗಿ ಯುವಕರಲ್ಲಿ ಭಾರಿ ಫ್ಯಾನ್ ಫಾಲೋಯಿಂಗ್ ಹೊಂದಿದ್ದಾರೆ.
ಮಾದಕ ಜ್ಯೋತಿ
ಇದೀಗ ಎದೆ ಸೀಳು ಕಾಣುವಂತೆ ಬಿಳಿ ಬಣ್ಣದ ತುಂಡುಡುಗೆ ಧರಿಸಿ ವಿವಿಧ ಭಂಗಿಯಲ್ಲಿ ಕ್ಯಾಮೆರಾಗೆ ಪೋಸ್ ನೀಡಿರುವ ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಸಖತ್ ವೈರಲ್ ಆಗುತ್ತಿವೆ.
ಕಾಮೆಂಟ್ಗಳ ಸುರಿಮಳೆ
ಜ್ಯೋತಿ ಹಂಚಿಕೊಂಡಿರುವ ಹಾಟ್ ಫೋಟೋಗೆ ಕಾಮೆಂಟ್ಗಳ ಸುರಿಮಳೆಯಾಗುತ್ತಿವೆ. ಜ್ಯೋತಿಯ ಮೈಮಾಟವನ್ನು ನೋಡಿ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ.