ಮಲಬದ್ಧತೆಗೆ ಇವೆ ಕಾರಣಗಳು ನೋಡಿ...

Vijayavan

ಮಲಬದ್ಧತೆಗೆ ಇವೆ ಕಾರಣಗಳು ನೋಡಿ...

ಮಲಬದ್ಧತೆ (Constipation) ಉಂಟಾಗಲು ಅನೇಕ ಕಾರಣಗಳಿರಬಹುದು. ಅವುಗಳಲ್ಲಿ ಪ್ರಮುಖವಾದ 4 ಕಾರಣಗಳು ಇಲ್ಲಿವೆ..

ಆಹಾರದಲ್ಲಿ ನಾರಿನಂಶದ ಕೊರತೆ

ನಮ್ಮ ಜೀರ್ಣಕ್ರಿಯೆ ಸರಿಯಾಗಿ ನಡೆಯಲು ನಾರಿನಂಶ (Fiber) ಬಹಳ ಮುಖ್ಯ. ಹಣ್ಣುಗಳು, ತರಕಾರಿಗಳು ಮತ್ತು ಧಾನ್ಯಗಳನ್ನು ಕಡಿಮೆ ಸೇವಿಸಿ, ಕೇವಲ ಸಂಸ್ಕರಿಸಿದ ಆಹಾರ (ಜಂಕ್ ಫುಡ್) ಸೇವಿಸುವುದರಿಂದ ಮಲಬದ್ಧತೆ ಉಂಟಾಗುತ್ತದೆ.

ಕಡಿಮೆ ನೀರು ಕುಡಿಯುವುದು

ದೇಹದಲ್ಲಿ ನೀರಿನಂಶ ಕಡಿಮೆಯಾದಾಗ, ಕರುಳು ಮಲದಿಂದ ನೀರನ್ನು ಹೀರಿಕೊಳ್ಳುತ್ತದೆ. ಇದರಿಂದ ಮಲವು ಗಟ್ಟಿಯಾಗಿ ಹೊರಬರಲು ಕಷ್ಟವಾಗುತ್ತದೆ. ದಿನಕ್ಕೆ ಕನಿಷ್ಠ 3-4 ಲೀಟರ್ ನೀರು ಕುಡಿಯುವುದು ಅವಶ್ಯಕ.

ದೈಹಿಕ ಚಟುವಟಿಕೆಯ ಕೊರತೆ

ಯಾರು ಹೆಚ್ಚು ವ್ಯಾಯಾಮ ಮಾಡದೆ ಅಥವಾ ನಡೆಯದೆ ಒಂದೇ ಕಡೆ ಕುಳಿತಿರುತ್ತಾರೋ, ಅವರಲ್ಲಿ ಜೀರ್ಣಾಂಗವ್ಯೂಹದ ಚಲನೆ ನಿಧಾನವಾಗುತ್ತದೆ. ಇದರಿಂದ ಮಲಬದ್ಧತೆ ಸಮಸ್ಯೆ ಕಾಣಿಸಿಕೊಳ್ಳಬಹುದು.

ಮಲ ವಿಸರ್ಜನೆಯನ್ನು ತಡೆಯುವುದು

ಕೆಲವೊಮ್ಮೆ ಕೆಲಸದ ಒತ್ತಡ ಅಥವಾ ಹೊರಗಿನ ಶೌಚಾಲಯ ಬಳಸಲು ಹಿಂಜರಿದು ಮಲ ವಿಸರ್ಜನೆಯನ್ನು ತಡೆಹಿಡಿಯುವುದರಿಂದ, ಕಾಲಕ್ರಮೇಣ ಅದು ಮಲಬದ್ಧತೆಗೆ ದಾರಿಯಾಗುತ್ತದೆ.