ಅದೃಷ್ಟ ಮತ್ತು ಸಮೃದ್ಧಿಗಾಗಿ ಈ ವಸ್ತುಗಳಿಗೆ ಇಂದೇ ಹೇಳಿ ಗುಡ್‌ಬೈ!

ಭಾನುಪ್ರಿಯ ಡಿ.ಕೆ

ಅದೃಷ್ಟ ಮತ್ತು ಸಮೃದ್ಧಿಗಾಗಿ ಈ ವಸ್ತುಗಳಿಗೆ ಇಂದೇ ಹೇಳಿ ಗುಡ್‌ಬೈ!

ಇನ್ನೇನು ಕೆಲವೇ ದಿನಗಳಲ್ಲಿ ಹೋಳಿ ಹಬ್ಬ ಬರಲಿದೆ. ಈಗಿನಿಂದಲೇ ಹಲವಾರು ಜನರು ಸಿದ್ಧತೆ ಮಾಡಿಕೊಳ್ಳುತ್ತಿರುವುದನ್ನು ನಾವು ನೋಡಬಹುದಾಗಿದೆ.ವಾಸ್ತು ಪ್ರಕಾರ, ಹೋಳಿ ಬರೀ ಬಣ್ಣಗಳಿಂದ ಆಡುವ ಆಟವಲ್ಲ. ಬದಲಿಗೆ ನಿಮ್ಮ ಮನೆಯಿಂದ ನಕರಾತ್ಮಕ ಶಕ್ತಿಯನ್ನು ತೆಗೆದು ಹಾಕುವ ಪ್ರಕ್ರಿಯೆಯಾಗಿದೆ

ಕಸದ ರಾಶಿ

ಹಳೆಯ ಕಸ, ವೃತ್ತಪತ್ರಿಕೆ ತುಣುಕುಗಳು ಮತ್ತು ಹಳೆಯ ಕಬ್ಬಿಣದ ವಸ್ತುಗಳನ್ನು ನೀವೇನಾದರೂ ಮನೆಯಲ್ಲಿ ಇಟ್ಟುಕೊಂಡಿದ್ದರೆ, ಲಕ್ಷ್ಮೀ ದೇವಿಯು ಕೋಪಗೊಳ್ಳಬಹುದು. ಇದರಿಂದ ನಿಮ್ಮ ಕುಟುಂಬಕ್ಕೆ ತೊಂದರೆ ಉಂಟಾಗಬಹುದು. ಜೊತೆಗೆ ಅಂದುಕೊಂಡ ಕೆಲಸಕ್ಕೆ ಅಡ್ಡಿಯಾಗುತ್ತದೆ.

ನಿಂತುಹೋದ ಗಡಿಯಾರಗಳು

ವಾಸ್ತು ಪ್ರಕಾರ, ಗೋಡೆಯ ಮೇಲೆ ನೇತಾಡುವ ಗಡಿಯಾರವು ನಿಂತು ಹೋದರೆ ಮನೆಗೆ ಅಶುಭವೆಂದು ಹೇಳಲಾಗುತ್ತದೆ. ಇದು ನಿಮ್ಮ ಮನೆಯ ಪ್ರಗತಿಗೆ ಮತ್ತು ಯಶಸ್ಸಿಗೆ ಅಡ್ಡಿಯಾಗಬಹುದು. ವಾಸ್ತು ಪ್ರಕಾರ, ನಿಲ್ಲಿಸಿದ ಗಡಿಯಾರವು ಮನೆಯಲ್ಲಿರುವ ಜನರನ್ನು ಸೋಮಾರಿಗಳನ್ನಾಗಿ ಮಾಡುತ್ತದೆ.

ಛಾವಣಿ ಮತ್ತು ಬಾಲ್ಕನಿ ಶುಚಿಗೊಳಿಸುವಿಕೆ

ಕೊಳಕು ಛಾವಣಿಯು ಕುಟುಂಬದ ವೃತ್ತಿಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. ಹಾಗಾಗಿ ಹೋಳಿ ಹಬ್ಬ ಬರುವ ಮುನ್ನವೇ ಮನೆಯನ್ನು ಸ್ವಚ್ಛಗೊಳಿಸುವುದರಿಂದ ಲಕ್ಷ್ಮೀ ದೇವಿಯು ನಿಮ್ಮ ಮನೆಗೆ ಬಂದು ನೆಲೆಸುತ್ತಾಳೆ.

ಸೋರುತ್ತಿರುವ ಪೈಪ್

ನಿಮ್ಮ ಅಡುಗೆಮನೆ ಅಥವಾ ಸ್ನಾನಗೃಹದಲ್ಲಿ ನಿರಂತರವಾಗಿ ನೀರು ಹರಿಯುತ್ತಿದ್ದರೆ, ನಿಮ್ಮ ಹಣ ಸೋರಿಕೆಯಾಗುತ್ತಿದೆ ಎಂದರ್ಥ. ವಾಸ್ತು ಪ್ರಕಾರ, ಈ ರೀತಿಯ ಸಮಸ್ಯೆಯು ನಿಮ್ಮ ಮನೆಯ ಅನಗತ್ಯ ಖರ್ಚನ್ನು ಹೆಚ್ಚಿಸುತ್ತದೆ. ಲಕ್ಷ್ಮೀ ದೇವಿ ಕೋಪಗೊಳ್ಳುತ್ತಾಳೆ.

ಹರಿದ ಬಟ್ಟೆಗಳು

ನಿಮ್ಮ ಮನೆಯಲ್ಲಿ ಹರಿದ ಬಟ್ಟೆಗಳು ಅಥವಾ ತುಂಬಾ ವರ್ಷದಿಂದ ಬಟ್ಟೆಗಳನ್ನು ಸಂಗ್ರಹಿಸಿಟ್ಟಿದ್ದರೆ, ಇಂದೇ ಅವುಗಳನ್ನು ಹೊರಗೆ ಹಾಕಿ. ಈ ಬಟ್ಟೆಗಳು ನಕರಾತ್ಮಕ ಆಲೋಚನೆಗಳನ್ನು ಉಂಟು ಮಾಡುತ್ತವೆ ಮತ್ತು ಕಹಿ ನೆನಪುಗಳನ್ನು ಹಿಡಿದಿಟ್ಟುಕೊಳ್ಳುತ್ತವೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ