ಮಾಂಗಲ್ಯ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸುಹಾನ

ರಮೇಶ್​ ಕುಮಾರ್​​ ಬಿ ಎಡಮೋಳೆ

ಮಾಂಗಲ್ಯ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸುಹಾನ

ಮಾಂಗಲ್ಯ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸರಿಗಮಪ ಖ್ಯಾತಿಯ ಸುಹಾನ ಸೈಯದ್

ನಿತಿನ್ ಕೈ ಹಿಡಿದ ಸುಹಾನ

ರಂಗಭೂಮಿ ಕಲಾವಿದ ನಿತಿನ್ ಎಂಬುವರನ್ನು ಸುಹಾನ ಅವರು ವರಿಸಿದ್ದಾರೆ. ನಿತಿನ್​ ಮತ್ತು ಸುಹಾನ ಸುಮಾರು 16 ವರ್ಷಗಳಿಂದ ಪ್ರೀತಿಸುತ್ತಿದ್ದರು.

ಅಂತರ್​ಧರ್ಮೀಯ ವಿವಾಹ

ಇದು ಅಂತರ್​ಧರ್ಮೀಯ ವಿವಾಹವಾಗಿದ್ದು, ಎರಡು ಮನೆಯವರನ್ನು ಒಪ್ಪಿಸಿ, ನಿತಿನ್​ ಮತ್ತು ಸುಹಾನ ದಾಂಪತ್ಯ ಶುರು ಮಾಡಿದ್ದಾರೆ.

ನಿನಾಸಂನಲ್ಲಿ ತರಬೇತಿ

ನಿತಿನ್ ಅವರು ಬೆಂಗಳೂರಿನವರಾಗಿದ್ದು, ಪ್ರಸಿದ್ಧ ನಾಟಕ ಇನ್‌ಸ್ಟಿಟ್ಯೂಟ್ 'ನಿನಾಸಂ'ನಲ್ಲಿ ತರಬೇತಿ ಪಡೆದಿದ್ದಾರೆ.

ಸರಿಗಮಪ ಶೋ ಮೂಲಕ ಖ್ಯಾತಿ

ಸುಹಾನ ಸೈಯದ್ ಅವರು ಜೀ ಕನ್ನಡದಲ್ಲಿ ಮೂಡಿಬರುವ ಸರಿಗಮಪ ಶೋ ಮೂಲಕ ಖ್ಯಾತಿ ಪಡೆದರು. ಆಕೆ ಯುವ ಸಂಗೀತಗಾರ್ತಿಯಾಗಿದ್ದು, ಮೂಲತಃ ಶಿವಮೊಗ್ಗ ಜಿಲ್ಲೆಯವರು.

ನೀನೇ ರಾಮ ನೀನೇ ಶಾಮ ಹಾಡು

2017ರಲ್ಲಿ ಸರಿಗಮಪ ಸೀಸನ್ 13ರಲ್ಲಿ ಭಾಗವಹಿಸಿದ್ದರು. ಉಪೇಂದ್ರ ಹಾಗೂ ಸುದೀಪ್​ ನಟನೆಯ 'ಮುಕುಂದ ಮುರಾರಿ' ಸಿನಿಮಾದ 'ನೀನೇ ರಾಮ ನೀನೇ ಶಾಮ' ಗೀತೆ ಹಾಡುವ ಮೂಲಕ ಜನಪ್ರಿಯತೆ ಗಳಿಸಿದರು.