ವೋಗ್ ಇಂಡಿಯಾ (Vogue India) ಮ್ಯಾಗಜೀನ್‌ಗಾಗಿ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಮಾಡಿಸಿರುವ ಹೊಸ ಫೋಟೋಶೂಟ್ ಸದ್ಯ ಎಲ್ಲರ ಗಮನ ಸೆಳೆದಿದೆ..ಸಾಂಪ್ರದಾಯಿಕ ಪೇಸ್ಟಲ್ ಹಸಿರು ಬಣ್ಣದ ಬನಾರಸಿ ಸೀರೆಗೆ ಮಾಡರ್ನ್ ಟ್ವಿಸ್ಟ್ ನೀಡಿ ಸಾರಾ ಹೊಸ ಫ್ಯಾಷನ್ ಗೋಲ್ಸ್ ನೀಡಿದ್ದಾರೆ..ಸಾಮಾನ್ಯ ಬ್ಲೌಸ್ ಬದಲಿಗೆ ಸ್ಟ್ರಕ್ಚರ್ಡ್ ಐವರಿ ಕಾರ್ಸೆಟ್ (Corset) ಧರಿಸಿ ಸೀರೆಗೆ ಬೋಲ್ಡ್ ಹಾಗೂ ಮಾಡರ್ನ್ ಲುಕ್ ಕೊಟ್ಟಿದ್ದಾರೆ..ಮಸ್ಟರ್ಡ್-ಯೆಲ್ಲೋ ಕ್ಯಾಪ್ಡ್ ಗೌನ್ ಹಾಗೂ ಶಿಮ್ಮರಿಂಗ್ ಮಿರರ್-ವರ್ಕ್ ಬಾಲ್ ಗೌನ್ ಮುಂತಾದ ವಿಭಿನ್ನ ಲುಕ್‌ಗಳಲ್ಲಿ ಸಾರಾ ಕಾಣಿಸಿಕೊಂಡಿದ್ದಾರೆ..ಫೋಟೋಶೂಟ್ ವೇಳೆ ಕೇಕ್ ತಿನ್ನುವ ಮೂಲಕ ಸಾರಾ ತುಂಬಾ ಮುಗ್ಧ ಹಾಗೂ ಮುಕ್ತವಾದ ಕ್ಯಾಂಡಿಡ್ ಪೋಸ್ ನೀಡಿದ್ದಾರೆ..ಗ್ಲೋಬಲ್ ಇ-ಕ್ರಿಕೆಟ್ ಪ್ರೀಮಿಯರ್ ಲೀಗ್ ಸೀಸನ್ 3ರಲ್ಲಿ ಸಾರಾ ಒಡೆತನದ 'ಮುಂಬೈ ಗ್ರೀಝ್ಲೀಸ್' ತಂಡವು 2ನೇ ಸ್ಥಾನಕ್ಕೇರಿದೆ..ಡಿಫೆಂಡಿಂಗ್ ಚಾಂಪಿಯನ್ ಚೆನ್ನೈ ಫಾಲ್ಕನ್ಸ್ ವಿರುದ್ಧ ಭರ್ಜರಿ ಜಯಗಳಿಸುವ ಮೂಲಕ ಮುಂಬೈ ತಂಡವು ಪ್ಲೇಆಫ್ ರೇಸ್‌ನಲ್ಲಿ ಗಟ್ಟಿಯಾಗಿ ನೆಲೆಸಿದೆ.