ಪತ್ನಿ ಜೊತೆ ಓಣಂ ಆಚರಿಸಿದ ಸಂಜು ಸ್ಯಾಮ್ಸನ್

ರಮೇಶ್​ ಕುಮಾರ್​​ ಬಿ ಎಡಮೋಳೆ

ಪತ್ನಿ ಜೊತೆ ಓಣಂ ಆಚರಿಸಿದ ಸಂಜು ಸ್ಯಾಮ್ಸನ್

ಕೇರಳದ ದೊಡ್ಡ ಹಬ್ಬವಾದ ಓಣಂ ಅನ್ನು ಟೀಮ್ ಇಂಡಿಯಾ ಕ್ರಿಕೆಟರ್ ಸಂಜು ಸ್ಯಾಮ್ಸನ್ ತಮ್ಮ ಪತ್ನಿ ಚಾರ್ಲತಾ ರಮೇಶ್ ಜೊತೆಗೂಡಿ ಬಹಳ ಸಡಗರದಿಂದ ಆಚರಿಸಿದ್ದಾರೆ.

ವಿಶೇಷ ಫೋಟೋಗಳು ವೈರಲ್

ಓಣಂ ಹಬ್ಬದ ಸಂದರ್ಭದಲ್ಲಿ ಪತ್ನಿ ಜೊತೆ ತೆಗೆಸಿಕೊಂಡಿರುವ ಸುಂದರ ಹಾಗೂ ಆಕರ್ಷಕ ಫೋಟೋಗಳನ್ನು ಸಂಜು ಸ್ಯಾಮ್ಸನ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿವೆ.

ಸಾಂಪ್ರದಾಯಿಕ ಉಡುಗೆ

ಈ ಫೋಟೋಗಳಲ್ಲಿ ಸಂಜು ಸ್ಯಾಮ್ಸನ್ ಶರ್ಟ್​ ಮತ್ತು ಸಾಂಪ್ರದಾಯಿಕ ಲುಂಗಿ ಧರಿಸಿದ್ದರೆ, ಅವರ ಪತ್ನಿ ಸುಂದರವಾದ ಸೀರೆಯಲ್ಲಿ ಕಂಗೊಳಿಸಿದ್ದಾರೆ.

ತಡವಾದ ಶುಭಾಶಯ

"ಸದ್ಯಕ್ಕೆ ಸಾಧ್ಯಾ (Sadhya - ಓಣಂ ಊಟ) ಸ್ವಲ್ಪ ತಡವಾಯಿತು" ಎಂಬ ಅರ್ಥಬರುವ ಕ್ಯಾಪ್ಶನ್‌ನೊಂದಿಗೆ ತಮ್ಮ ಅಭಿಮಾನಿಗಳಿಗೆ ಸಂಜು ಸ್ಯಾಮ್ಸನ್ ತಡವಾಗಿ ಓಣಂ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.

ಅಭಿಮಾನಿಗಳ ಮೆಚ್ಚುಗೆ

ಈ ಮುದ್ದಾದ ದಂಪತಿಯ ಫೋಟೋಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಲಕ್ಷಾಂತರ ಲೈಕ್ಸ್ ಬಂದಿದ್ದು, ಕ್ರಿಕೆಟ್ ಅಭಿಮಾನಿಗಳು ಹಾಗೂ ನೆಟಿಗರು ದಂಪತಿಗೆ ಹಬ್ಬದ ಶುಭ ಹಾರೈಕೆಗಳನ್ನು ತಿಳಿಸಿದ್ದಾರೆ.