'ದೈಜಿ' ವರ್ಲ್ಡ್​ನಲ್ಲಿ ರಂಗಿತರಂಗ ರಾಧಿಕಾ

ಮಮತಾ

'ದೈಜಿ' ವರ್ಲ್ಡ್​ನಲ್ಲಿ ರಂಗಿತರಂಗ ರಾಧಿಕಾ

ರಂಗಿತರಂಗ ಹಾಗೂ ಮುಂದಿನ ನಿಲ್ದಾಣ ಸಿನಿಮಾದ ಇನ್ನು ಬೇಕಾಗಿದೆ ಹಾಡಿನ ಮೂಲಕ ತಮ್ಮದೇ ಆದ ಫ್ಯಾನ್​ ಬೇಸ್​ ಅನ್ನು ಹೊಂದಿದ್ದ ರಾಧಿಕಾ ನಾರಾಯಣ್ ಅವರು ಇನ್​ಸ್ಟಾಗ್ರಾಮ್​ನಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಮಾಡ್ರನ್​ನಲ್ಲೂ ಟ್ರೆಡಿಷನಲ್​ ಗುಂಗು

ರಾಧಿಕಾ ನಾರಾಯಣ್​ ಅವರು ಗಣೇಶ ಚತುರ್ಥಿ ಸಲುವಾಗಿ ಬೂದು ಬಣ್ಣದ ಸೀರೆಯುಟ್ಟಿದ್ದು, ಅದಕ್ಕೆ ಸ್ಲೀವ್​ ಲೆಸ್​ ಬ್ಲೌಸ್ ಧರಿಸಿದ್ದಾರೆ. ಸೀರೆಗೆ ಮ್ಯಾಚಿಂಗ್​ ಆಗುವ ಕಿವಿಯೋಲೆ ಅವರ ಅಂದವನ್ನು ಹೆಚ್ಚಿಸಿದೆ. ಗುಳಿಕೆನ್ನೆ, ಸಿಂಪಲ್​ ಮೇಕಪ್​ ಪಡ್ಡೆಹುಡುಗರ ನಿದ್ದೆ ಗೆಡಿಸಿದೆ

ದೈಜಿ ಸಿನಿಮಾದಲ್ಲಿ ನಟನೆ

ನಟ ರಮೇಶ್​, ದಿಂಗಂತ್​​​ ನಟನೆಯ ದೈಜಿ ಸಿನಿಮಾದಲ್ಲಿ ರಾಧಿಕಾ ನಾರಾಯಣ್​ ಅವರು ನಟಿಸಲಿದ್ದಾರೆ. ದೈಜಿ ಎಂದರೆ ಏನು ಎಂದು ಕಾಡುವ ಪ್ರಶ್ನೆಗೆ ನಿರ್ದೇಶಕ ಶ್ರೀವತ್ಸ ಉತ್ತರ ಕೊಟ್ಟಿದ್ದು ಇದು ಪ್ರೇತಾತ್ಮಗಳ ದೈವ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

ಹಿಟ್ ಕೊಟ್ಟ ಸಿನಿಮಾಗಳಿವು

ರಂಗಿತರಂಗ, ಯೂಟರ್ನ್​​​​​, ಮುಂದಿನ ನಿಲ್ದಾಣ, ಕಾಫಿ ತೋಟ ಸಿನಿಮಾಗಳು ಇವರಿಗೆ ಸಾಕಷ್ಟು ಹಿಟ್​ ತಂದುಕೊಟ್ಟ ಸಿನಿಮಾಗಳಾಗಿವೆ. ಕೇಳೆ ಚೆಲುವೆ ಹಾಗೂ ಇನ್ನೂ ಬೇಕಾಗಿದೆ ನನಗೆ ಇನ್ನೂ ಬೇಕಾಗಿದೆ. ಇಂದು ನಿನ್ನ ಎದುರಲ್ಲಿ ಹಾಡುಗಳು ಇಂದಿಗೂ ಗುನುಗುವಂತೆ ಮಾಡುತ್ತದೆ.

ರಾಧಿಕಾ ನಟನೆಯ ಸಿನಿಮಾಗಳಿವು

ರಾಧಿಕಾ ನಾರಾಯಣ್​ ಅವರು ಹೆಚ್ಚು ಸಿನಿಮಾದಲ್ಲಿ ನಟಿಸಿಲ್ಲ ಚೇಸ್, ಶಿವಾಜಿ ಸುರತ್ಕಲ್​, ಬಿಬಿ5, ಅಸತೋಮ ಸದ್ಗಮಯ ಇವ್ರ ಸಿನಿಮಾಗಳಾಗಿವೆ.

ಊರಿನಲ್ಲಿ ಹೊಸ ನರ್ಸ್ ಅವರನ್ನು ಭೇಟಿಯಾದ್ರಾ?

ವಿಜಯ್​ ರಾಘವೇಂದ್ರ ನಟನೆಯ, ಆಕಾಶ್​ ಪಿಕ್ಷರ್ಸ್​​ ನಿರ್ಮಾಣದ ಪಿಸಿ ಶೇಖರ್ ಆಕ್ಷನ್ ಕಟ್ ಹೇಳುತ್ತಿರುವ ಸಿನಿಮಾ ಮಹಾನ್​ದಲ್ಲಿ ರಾಧಿಕಾ ನಟಿಸಲಿದ್ದಾರೆ. ಊರಿನಲ್ಲಿ ಹೊಸ ನರ್ಸ್ ಅವರನ್ನು ಭೇಟಿಯಾದ್ರಾ? ಎಂದು ಕೇಳುವ ಮೂಲಕ ಸಿನಿಮಾದಲ್ಲಿ ನಟಿಸುವ ಬಗ್ಗೆ ರಾಧಿಕಾ ಮಾಹಿತಿ ಹಂಚಿಕೊಂಡಿದ್ದರು.

ಕಥಕ್​ ನೃತ್ಯಗಾರ್ತಿ ರಾಧಿಕಾ

ರಾಧಿಕಾ ನಾರಾಯಣ್​ ಅವರು ಎಂಜಿನಿಯರ್ ಹಾಗೂ ಕಥಕ್​ ನೃತ್ಯಗಾರ್ತಿ ರಂಗಿತರಂಗ ಸಿನಿಮಾ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟರು. ಯುಟರ್ನ್​ ಸಿನಿಮಾ ಸಹ ಇವ್ರಿಗೆ ಹಿಟ್​ ಕೊಟ್ಟಿತ್ತು. ಮೂಲತಃ ಮೈಸೂರಿನವರು.

ಹಿಂದಿ ವೆಬ್​ಸೀರೀಸ್​ನಲ್ಲಿ ರಾಧಿಕಾ

ನಟಿ ರಾಧಿಕಾ ಅವರು ಆಯ್ನಾ ಎನ್ನುವ ಹಿಂದಿ ವೆಬ್​ಸೀರಿಸ್​ನಲ್ಲಿ ನಟಿಸಿದ್ದಾರೆ. ಈ ಬಗ್ಗೆ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟರ್​ ಹಂಚಿಕೊಂಡಿದ್ದರು. ಈ ಸೀರೀಸ್​ ಅನ್ನು ಮಂಜು ನಂದನ್​ ಎಂಬುವವರು ನಿರ್ದೇಶಿಸಿದ್ದರು.