ಕನ್ನಡ ಚಿತ್ರರಂಗದ ಉದಯೋನ್ಮುಖ ಮತ್ತು ಪ್ರತಿಭಾವಂತ ನಟಿಯರಲ್ಲಿ ಒಬ್ಬರಾದ ಚೈತ್ರಾ ಜೆ. ಆಚಾರ್ ಅವರ ಹೊಸ ಹಾಟ್ ಅವತಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪಡ್ಡೆ ಹುಡುಗರ ಹೃದಯಕ್ಕೆ ಕಿಚ್ಚು ಹಚ್ಚಿದೆ.
ಹುಟ್ಟೂರು ಮತ್ತು ಹಿನ್ನೆಲೆ
ಚೈತ್ರಾ ಆಚಾರ್ ಅವರು ಹುಟ್ಟಿ ಬೆಳೆದಿದ್ದೆಲ್ಲಾ ಬೆಂಗಳೂರಿನಲ್ಲಿ. ಇವರು ಎಂ.ಎಸ್. ರಾಮಯ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವೀಧರರಾಗಿದ್ದಾರೆ.
ಸಂಗೀತದ ಹಿನ್ನೆಲೆ
ನಟನೆಯಷ್ಟೇ ಅಲ್ಲದೆ ಚೈತ್ರಾ ಅವರು ಅತ್ಯುತ್ತಮ ಗಾಯಕಿ ಕೂಡ ಹೌದು. ಬಾಲ್ಯದಿಂದಲೇ ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಿತಿರುವ ಇವರು, ಕೆಲವು ಕನ್ನಡ ಸಿನಿಮಾಗಳಲ್ಲಿ ಹಿನ್ನೆಲೆ ಗಾಯಕಿಯಾಗಿಯೂ ಕೆಲಸ ಮಾಡಿದ್ದಾರೆ.
ಚಿತ್ರರಂಗಕ್ಕೆ ಎಂಟ್ರಿ
ಚೈತ್ರಾ ಅವರು 2019 ರಲ್ಲಿ ತೆರೆಕಂಡ 'ಮಹಿಷಾಸುರ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದರು. ಅದಕ್ಕೂ ಮುನ್ನ 'ಬೆಂಗಳೂರು ಕ್ವೀನ್ಸ್' ಎಂಬ ವೆಬ್ ಸೀರೀಸ್‌ನಲ್ಲಿ ನಟಿಸಿದ್ದರು.
ಬ್ರೇಕ್ ನೀಡಿದ ಚಿತ್ರಗಳು
ರಕ್ಷಿತ್ ಶೆಟ್ಟಿ ನಟನೆಯ ಸಪ್ತ ಸಾಗರದಾಚೆ ಎಲ್ಲೋ (ಸೈಡ್-ಬಿ) ಚಿತ್ರದ 'ಮನುಜ' ಪಾತ್ರ ಮತ್ತು ರಾಜ್ ಬಿ. ಶೆಟ್ಟಿ ಜೊತೆ ನಟಿಸಿದ 'ಟೋಬಿ' ಚಿತ್ರದ 'ಜೆನ್ನಿ' ಪಾತ್ರಗಳು ಚಿತ್ರರಂಗದಲ್ಲಿ ದೊಡ್ಡ ಬ್ರೇಕ್ ಹಾಗೂ ವಿಮರ್ಶಕರ ಶ್ಲಾಘನೆ ತಂದುಕೊಟ್ಟವು.
ವಿಭಿನ್ನ ಪಾತ್ರಗಳ ಆಯ್ಕೆ
ಕೇವಲ ಗ್ಲಾಮರ್ ಪಾತ್ರಗಳಿಗೆ ಸೀಮಿತವಾಗದೆ, ನಟನೆಗೆ ಹೆಚ್ಚು ಅವಕಾಶವಿರುವ ಹಾಗೂ ಪ್ರಾಯೋಗಿಕ ಮತ್ತು ಸವಾಲಿನ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಚೈತ್ರಾ ಆಚಾರ್ ಹೆಸರುವಾಸಿಯಾಗಿದ್ದಾರೆ.
ಸೋಷಿಯಲ್ ಮೀಡಿಯಾ ಸೆನ್ಸೇಷನ್
ಚೈತ್ರಾ ಆಚಾರ್ ಅವರು ತಮ್ಮ ವಿಭಿನ್ನ ಹಾಗೂ ಫ್ಯಾಶನೇಬಲ್ ಫೋಟೋಶೂಟ್‌ಗಳ ಮೂಲಕ ಇನ್‌ಸ್ಟಾಗ್ರಾಮ್‌ನಲ್ಲಿ ಸಖತ್ ಆಕ್ಟಿವ್ ಆಗಿರುತ್ತಾರೆ ಮತ್ತು ಯುವ ಜನತೆಯಲ್ಲಿ ದೊಡ್ಡ ಫಾಲೋಯಿಂಗ್ ಹೊಂದಿದ್ದಾರೆ.
ಹಾಟ್ ಫೋಟೋಗಳ ರಾಶಿ
ತಮ್ಮ ಬೋಲ್ಡ್ ಲುಕ್ಗೆ ಹೆಸರುವಾಸಿಯಾಗಿರುವ ಚೈತ್ರಾ, ಆಗಾಗ ಹಾಟ್ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹರಿಬಿಡುತ್ತಲೇ ಇರುತ್ತಾರೆ. ಅವರ ಇನ್ಸ್ಟಾವನ್ನು ಒಂದು ಸುತ್ತು ಹಾಕಿ ಬಂದರೆ, ಪಡ್ಡೆ ಹುಡುಗರ ಮೈ ಬಿಸಿಯೇರಿಸೋ ಫೋಟೋಗಳೇ ತುಂಬಿವೆ.
ನೇರ ನುಡಿ ಸ್ವಭಾವ
ಚೈತ್ರಾ ಅವರದ್ದು ನೇರ ನುಡಿ ಸ್ವಭಾವ. ತಮ್ಮ ಫೋಟೋಗಳಿಗೆ ಎದುರಾಗುವ ಅಶ್ಲೀಲ ಕಾಮೆಂಟ್ಗಳಿಗೆ ಯಾವುದೇ ಮುಜುಗರವಿಲ್ಲದೇ ನೇರವಾಗಿಯೇ ಉತ್ತರ ನೀಡುವ ಮೂಲಕ ಚೈತ್ರಾ ಆಗಾಗ ಸುದ್ದಿಯಾಗುತ್ತಿರುತ್ತಾರೆ.
ಹೊಸ ಹಾಟ್ ಅವತಾರದಲ್ಲಿ ಚೈತ್ರಾ
ಚೈತ್ರಾ ಇದೀಗ ಹಂಚಿಕೊಂಡಿರುವ ಫೋಟೋಗಳಲ್ಲಿ ನೀಲಿ-ಗುಲಾಬಿ ಬಣ್ಣದ ಅಂದವಾದ ಲೆಹೆಂಗಾ ಚೋಲಿ ಉಡುಪು, ಆಭರಣಗಳು ಮತ್ತು ತಲೆಯ ಮೇಲೆ ಹಾರುವ ನೀಲಿ ದುಪಟ್ಟದೊಂದಿಗೆ ಅತ್ಯಂತ ಮಾದಕವಾದ, ಸೊಗಸಾದ ನೋಟವನ್ನು ನೀಡುತ್ತಿದ್ದಾರೆ.
ಫ್ಯಾನ್ಸ್ ಫಿದಾ
ಎದೆಸೀಳು ಕಾಣುವಂತೆ ಚೈತ್ರಾ ಆಚಾರ ನೀಡಿರುವ ಮಾದಕ ಭಂಗಿಗಳನ್ನು ನೋಡಿ ಅಭಿಮಾನಿಗಳು ಫಿದಾ ಆಗಿದ್ದು, ಆಕೆಯ ಮೈಮಾಟವನ್ನು ಹೊಗಳಿ ಕಾಮೆಂಟ್ಗಳ ಸುರಿಮಳೆಗೈಯುತ್ತಿದ್ದಾರೆ.