ಗಾಳಿಪಟ 2 ಹುಡ್ಗಿ ಸಂಯುಕ್ತಾ

ಮಮತಾ

ಗಾಳಿಪಟ 2 ಹುಡ್ಗಿ ಸಂಯುಕ್ತಾ

ವಾತಿ ಸಿನಿಮಾ ಮೂಲಕ ಪಡ್ಡೆ ಹುಡುಗ್ರ ಮನಸ್ಸು ಕದ್ದಿದ್ದ ಸಂಯುಕ್ತಾ ಮೆನನ್​ ಸದ್ಯ ರಾಘವ ಲಾರೆನ್ಸ್​ ಅಭಿನಯದ ಬೆಂಜ್ ಸಿನಿಮಾದಲ್ಲಿ ಬಣ್ಣ ಹಚ್ಚಲು ಸಜ್ಜಾಗಿದ್ದಾರೆ. ಇದರಲ್ಲಿ ಮಲಯಾಳಂನ ಖ್ಯಾತ ನಟ ನಿವಿನ್​ ಪೌಲಿ ಸಹ ಅಭಿನಯಿಸಲಿದ್ದಾರೆ.

ರೆಡ್​ಗೌನ್​ನಲ್ಲಿ ಮಿಂಚಿಂಗ್​

2016ರಲ್ಲಿ ಮಲಯಾಳಂ ಸಿನಿಮಾ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಸಂಯುಕ್ತಾ ಅವರು ಟಾಲಿವುಡ್​, ಕಾಲಿವುಡ್​ ಹಾಗೂ ಸ್ಯಾಂಡಲ್​ವುಡ್​ನಲ್ಲು ಸಾಕಷ್ಟು ಹೆಸರು ಮಾಡಿದ್ದಾರೆ. ಇತ್ತೀಚೆಗೆ ಅವರು ರೆಡ್​ ಕಲರ್​ ಗೌನ್​ ತೊಟ್ಟು, ರೊಮ್ಯಾಂಟಿಕ್​ಲುಕ್​ನಲ್ಲಿ ಹಂಚಿಕೊಂಡಿರುವ ಫೋಟೋ ಶೂಟ್​ ಕಣ್ಮನ ಸೆಳೆಯುವಂತೆ ಮಾಡಿದೆ.

ಗಾಳಿಪಟ2 ದಲ್ಲಿ ನಟನೆ

ಗಾಳಿಪಟ ಸಿನಿಮಾ ಕನ್ನಡದಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಗಣೇಶ್​​, ರಾಜೇಶ್​ ಕೃಷ್ಣನ್, ದಿಗಂತ್​ ಅಭಿನಯದ ಈ ಸಿನಿಮಾದ ಮತ್ತೊಂದು ಭಾಗವಾಗಿ ಬಂದಿದ್ದೇ ಗಾಳಿಪಟ2 ಆದರೆ, ಮೊದಲಿನಷ್ಟು ಅಬ್ಬರಿಸಿಲ್ಲ. ಈ ಸಿನಿಮಾದಲ್ಲಿ ಸಂಯುಕ್ತಾ ನಟಿಸುವ ಮೂಲಕ ಸ್ಯಾಂಡಲ್​ವುಡ್​ನಲ್ಲು ಒಂದಷ್ಟು ಅಭಿಮಾನಿಗಳನ್ನು ಬಾಚಿಕೊಂಡಿದ್ದಾರೆ.

ವಾತಿ ಹಿಟ್ ಸಿನಿಮಾ

ಧನುಷ್​ ನಟನೆಯ ವಾತಿ ಸಿನಿಮಾದಲ್ಲಿ ಸಂಯುಕ್ತಾ ನಟಿಸಿದ್ದರು. ಇಂದಿಗೂ ಸಾಕಷ್ಟು ಚರ್ಚೆಗೆ ಈ ಸಿನಿಮಾ ಕಾರಣವಾಗುತ್ತದೆ. ಇದರಲ್ಲಿ ಟೀಚರ್​ ಆಗಿ, ನಾಯಕ ನಟಿಯಾಗಿ ಜೀವ ತುಂಬಿದ್ದಾರೆ. ಮಾಸ್ತಾರು, ಮಾಸ್ತಾರು ಹಾಡಂತು ಇಂದಿಗೂ ಕೇಳುಗರಿಗೆ ಗುನುಗುವಂತೆ ಮಾಡುತ್ತದೆ.

ಸಂಯುಕ್ತಾ ನಟಿಸಿದ ಸಿನಿಮಾಗಳಿವು

ನಾರಿ ನಾರಿ ನಂದನಾ ಮುರಾರಿ, ಎರಿಡಾ, ಅನ್ನುಂ ಪೆನ್ನುಂ, ಸ್ವಯಂಭು ಭೀಮ್ಲಾ ನಾಯಕ್​, ತೀವಂಡಿ, ವಿರೂಪಾಕ್ಷ, ಮಲಯಾಳಂ ಸಿನಿಮಾದ ಪಾಪ್‌ಕಾರ್ನ್, ಬಿಂಬಿಸಾರ, ಅಖಂಡ ಸಿನಿಮಾ ಸೇರಿದಂತೆ ಹಲವು ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಸದ್ಯ ಅವರು ಸೌತ್​ ಇಂಡಿಯಾದ ಸಿನಿಮಾ ಇಂಡಸ್ಟ್ರಿಯಲ್ಲಿ ಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ.

ಪುರಿ ಜಗನ್ನಾಥ್ ಸಿನಿಮಾದಲ್ಲಿ ನಟನೆ

ಪುರಿ ಜಗನ್ನಾಥ್​ ಹಾಗೂ ಚಾರ್ಮಿ ಕೌರ್​ ನಿರ್ಮಾಣದಡಿ ಬರುತ್ತಿರುವ ಸಿನಿಮಾದಲ್ಲಿ ಸಂಯುಕ್ತಾ ನಟಿಸಲಿದ್ದಾರೆ. ಈ ಸಿನಿಮಾದಲ್ಲಿ ದುನಿಯಾ ವಿಜಯ್​ ಸಹ ಇರಲಿದ್ದಾರೆ ಎನ್ನಲಾಗಿದೆ