ಲಿಸ್ಬನ್​ನಲ್ಲಿ ಸಮಂತಾ-ರಾಜ್​ ಹನಿಮೂನ್​; ಫೋಟೋದಲ್ಲಿ ಸಮಂತಾ ಸಕತ್ ಕ್ಯೂಟ್

ನಿರುಪಾದಿ ಬ್ಯಾಡಗಿ

ಲಿಸ್ಬನ್​ನಲ್ಲಿ ಸಮಂತಾ-ರಾಜ್​ ಹನಿಮೂನ್​; ಫೋಟೋದಲ್ಲಿ ಸಮಂತಾ ಸಕತ್ ಕ್ಯೂಟ್

ಟಾಲಿವುಡ್ ಸ್ಟಾರ್ ನಟಿ ಸಮಂತಾ ರುತ್​​ಪ್ರಭು ನಿರ್ದೇಶಕ ರಾಜ್​ ನಿದಿಮೋರ್ ಜೊತೆ ಎರಡನೇ ಮದುವೆಯಾದ ಬಳಿಕ ಪ್ರಸ್ತುತ ಪೋರ್ಚಗಲ್ ರಾಜಧಾನಿ ಲಿಸ್ಬನ್​ನಲ್ಲಿ ಹನಿಮೂನ್​ನಲ್ಲಿದ್ದಾರೆ.

ರಾಜ್​ ನಿದಿಮೋರ್ ಜೊತೆ ಎರಡನೇ ವಿವಾಹ

ಡಿ. 01ರಂದು, ಸಮಂತಾ-ರಾಜ್ ನಿದಿಮೋರ್ ಕೊಯಮತ್ತೂರಿನ ಇಶಾ ಫೌಂಡೇಶನ್‌ನಲ್ಲಿ ತಮ್ಮ ಆತ್ಮೀಯ ಸ್ನೇಹಿತರ ಸಮ್ಮುಖದಲ್ಲಿ ಎರಡನೇ ವಿವಾಹವಾಗಿದ್ದರು.

ಇನ್​ಸ್ಟಾಗ್ರಾಂನಲ್ಲಿ ಫೋಟೋ ಶೇರ್

ಸಮಂತಾ-ರಾಜ್ ಮದುವೆ ಬಳಿಕ ಕೆಲ ದಿನಗಳ ಹಿಂದೆ ಪೋರ್ಚ್​ಗಲ್​ಗೆ ಹನಿಮೂನ್​ಗೆ ತೆರಳಿದ್ದಾರೆ. ಈ ಪ್ರವಾಸದ ಸುಂದರ ಫೋಟೋಗಳನ್ನು ಸಮಂತಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಪೋರ್ಚ್​ಗಲ್​ನ ಐತಿಹಾಸಿಕ ಸ್ಥಳಗಳಿಗೆ ಭೇಟಿ

ಲಿಸ್ಬ್​ನಲ್ಲಿರುವ ಐತಿಹಾಸಿಕ ಮತ್ತು ಅದ್ಭುತ ಸ್ಥಳಗಳಾದ ಫಾತಿಮಾದಲ್ಲಿರುವ 'ಬೆಸಿಲಿಕಾ ಆಫ್ ಅವರ್ ಲೇಡಿ ಆಫ್ ದಿ ರೋಸರಿ', ಪ್ರಸಿದ್ಧ 'ಸ್ಮಾರಕ ಟು ದಿ ಡಿಸ್ಕವರೀಸ್' ಮತ್ತು 'ಆರ್ಕೊ ಡ ರುವಾ ಆಗಸ್ಟಾ' ನಂತಹ ಪ್ರಸಿದ್ಧ ಸ್ಥಳಗಳಿಗೆ ಒಟ್ಟಿಗೆ ಭೇಟಿ ನೀಡಿದ್ದಾರೆ.

ಬೀನಿ ಕ್ಯಾಪ್‌ನಲ್ಲಿ ಸಮಂತಾ ಮಿಂಚಿಂಗ್

ಕೆಲವು ಫೋಟೋದಲ್ಲಿ ಸಮಂತಾ ಲಿಸ್ಬನ್‌ನ ಸೌಂದರ್ಯವನ್ನು ಆನಂದಿಸುತ್ತಿರುವುದು ಕಂಡುಬಂದಿದೆ. ಗುಲಾಬಿ ಬಣ್ಣದ ಬೀನಿ ಕ್ಯಾಪ್‌ನಲ್ಲಿ ಸಮಂತಾ ಲುಕ್ ಎಲ್ಲರನ್ನೂ ಆಕರ್ಷಿಸಿದೆ.

ಡಿಸೆಂಬರ್ ಹೀಗೆ ಕಳೆಯುತ್ತಿದೆ

ಹನಿಮೂನ್​ನಲ್ಲಿರುವ ಸಮಂತಾ, ತಮ್ಮ ಇನ್​ಸ್ಟಾಗ್ರಾಂನಲ್ಲಿ ಡಿಸೆಂಬರ್ ಹೀಗೆ ಕಳೆಯುತ್ತಿದೆ ಎಂದು ಸಂತೋಷದ ಕ್ಷಣಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಅಭಿಮಾನಿಗಳಿಂದ ಹಾರೈಕೆ

ಸಮಂತಾರ ಪೋಸ್ಟ್​ಗೆ ಅನೇಕ ಅಭಿಮಾನಿಗಳು ಶುಭ ಹಾರೈಸುತ್ತಿದ್ದು, ಸಮಂತಾ ಮುಖದಲ್ಲಿನ ಸಂತೋಷವನ್ನು ನೋಡಿ ಪುಳಕಿತಗೊಂಡಿದ್ದಾರೆ. ಕೊನೆಗೂ, ಅವರು ಬಯಸಿದ ಶಾಂತಿಯುತ ಜೀವನವನ್ನು ಕಂಡುಕೊಂಡಿದ್ದಾರೆ ಎನ್ನುತ್ತಿದ್ದಾರೆ.

ರಾಜ್​ ಜೊತೆ ಸಮಂತಾ ಸಿನಿಮಾ

ಸಮಂತಾ-ರಾಜ್ ಹಿಂದೆ ದಿ ಫ್ಯಾಮಿಲಿ ಮ್ಯಾನ್-2, ಸಿಟಾಡೆಲ್; ಹನಿ ಬನ್ನಿ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಈಗ ಪ್ರತಿಷ್ಠಿತ OTT ಸರಣಿ 'ರಕ್ತ ಬ್ರಹ್ಮಂದ್: ದಿ ಬ್ಲಡಿ ಕಿಂಗ್‌ಡಮ್' ನಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ.