'ಬಾಪು ಬೊಮ್ಮ' ಸಮಂತಾ

ಮಮತಾ

'ಬಾಪು ಬೊಮ್ಮ' ಸಮಂತಾ

ಟಾಲಿವುಡ್​ ನಟಿ ಸಮಂತಾ ಅವರು ಬಾಪು ಬೊಮ್ಮ, ಮಾ ಇಂಟಿ ಬಂಗಾರಂ ಎಂಬ ಹೆಸರಿನಡಿ ಅವರು ಇತ್ತೀಚೆಗೆ ಮಾಡಿಸಿಕೊಂಡ ಫೋಟೋ ಶೂಟ್​ನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಕನಕಾಂಬರ ಬಣ್ಣದ ಸೀರೆ ಧರಿಸಿರುವ ಅವರು ಅದಕ್ಕೆ ಗಿಳಿ ಬಣ್ಣದ ಬ್ಲೌಸ್​ ತೊಟ್ಟಿದ್ದಾರೆ, ಅದಕ್ಕೆ ಹೋಲುವಂತೆ ಬಿಳಿ ಮುತ್ತುಗಳುಳ್ಳ ಸರವನ್ನು ಮ್ಯಾಷ್​ ಮಾಡಿಕೊಂಡಿದ್ದಾರೆ. ಅವರ ಈ ಲುಕ್​​, ಫ್ಯಾಷನ್​ ಆಕರ್ಷೀಣಿಯವಾಗಿದೆ.

ರಾಜ್​ ನಿಡಿಮೋರು ಜೊತೆ ದಾಂಪತ್ಯ ಜೀವನ

ನಾಗ ಚೈತನ್ಯ ಅವರೊಂದಿಗಿನ ಸಂಬಂಧ ಮುರಿದು ಬಿದ್ದ ಬಳಿಕ ಸ್ಯಾಮ್​ ನಿರ್ದೇಶಕ ರಾಜ್ ನಿಡಿಮೋರು ಅವರನ್ನು ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಸೀರೆ ಹಿಂದಿನ ಕತೆ ಇದು..!

ನಟಿ ಸಮಂತಾ ಧರಿಸಿರುವ ಈ ಸಿಂಪಲ್​​ ಸೀರೆ ಹಿಂದೆ ಹಳೆಯ ಕತೆ ಇದೆ. ಕನಕಾಂಬರ ಬಣ್ಣದ ಸೀರೆಯನ್ನು ಆಂಧ್ರಪ್ರದೇಶದ ಪ್ರಸಿದ್ಧ ವೆಂಕಟಗಿರಿ ನೇಕಾರರಿಂದ ನೇಯಲ್ಪಟ್ಟಿದೆ. ಇವರು ದಶಕಗಳಿಂದ ಈ ಕುಶಲತೆಯನ್ನು ಮುಂದುವರೆಸಿದ್ದಾರೆ ಎಂದು ಸಮಂತಾ ಬರೆದುಕೊಂಡಿದ್ದಾರೆ.

ಸಮಂತಾ ನೋಟಕ್ಕೆ ಫ್ಯಾನ್ಸ್​ ಬೋಲ್ಡ್​

ಈ ಸೀರೆಯು ಕೇವಲ ಉಡುಗೆಯಲ್ಲ, ನೇಕಾರರ ಶ್ರಮ ಮತ್ತು ಭಾರತೀಯ ಪರಂಪರೆಯ ಸಂಕೇತ. ಅವರ ಕಲೆಗೆ ಮನ್ನಣೆ ನೀಡುವುದು ಈ ಫೋಟೋಶೂಟ್‌ನ ಮುಖ್ಯ ಉದ್ದೇಶ. ವೆಂಕಟಗಿರಿ ಸೀರೆಯಲ್ಲಿ ಸಮಂತಾ ಪಕ್ಕಾ ಸಾಂಪ್ರದಾಯಿಕವಾಗಿ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಅವರನ್ನು 'ಬಾಪು ಬೊಮ್ಮೆ' (ಕಲಾವಿದ ಬಾಪು ಅವರ ಚಿತ್ರದಂತೆ ಸುಂದರ ನಾರಿ) ಎಂದು ಹೊಗಳುತ್ತಿದ್ದಾರೆ.

ಓ ಮೈ ಬೇಬಿ ಸ್ಯಾಮ್​..!

ಸಮಂತಾ ಅವರು ಖುಷಿ ಸಿನಿಮಾದ ನಂತರ ಬಿಗ್​ ಬಜೆಟ್​ ಸಿನಿಮಾದಲ್ಲಿ ನಟಿಸಿಲ್ಲ. ಶುಭಂ ಸಿನಿಮಾದಲ್ಲಿ ಗೆಸ್ಟ್​ ಆಕ್ಟರ್​ ಆಗಿ ಎಂಟ್ರಿಯಾಗಿದ್ದರು. ಓ ಮೈ ಬೇಬಿ, ರಂಗಸ್ಥಳಂ, ತೆರಿ, ಸನ್​ ಆಫ್​ ಸತ್ಯಮೂರ್ತಿ ಅವರ ಹಿಟ್​ ಸಿನಿಮಾಗಳು.

ಮಾ ಇಂಟಿ ಬಂಗಾರಂ ಸ್ಯಾಮ್​

ಸದ್ಯ ಅವರು ಮಾ ಇಂಟಿ ಬಂಗಾರಂ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾವು 2026 ಮೇ 15ರಂದು ರಿಲೀಸ್​ ಆಗುವ ಸಾಧ್ಯತೆ ಇದೆ. ಇದರಲ್ಲಿ ಕನ್ನಡದ ನಟ ದಿಗಂತ್​ ಅವರು ಸ್ಯಾಮ್​ಗೆ ಪತಿಯಾಗಿ ನಟಿಸಿದ್ದಾರೆ. ಓ ಬೇಬಿ ಸಿನಿಮಾದ ನಿರ್ದೇಶಕಿ ನಂದಿನಿ ರೆಡ್ಡಿ ಜೊತೆಗೆ ಮತ್ತೆ ಒಂದಾಗಿದ್ದಾರೆ. ಗುಲ್ಶನ್​ ದೇವಯ್ಯ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ