ದಿ ನಾಡ್ ಮ್ಯಾಗ್ಜಿನ್ಗಾಗಿ ಸಮಂತಾ ರುತ್ ಪ್ರಭು ಮಾಡಿಸಿಕೊಂಡಿರುವ ಫೋಟೋ ಶೂಟ್ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಲೋಹ ಹೊತ್ತ ನಿಲುವಂಗಿ. ಸ್ಫಟಿಕದಂತಹ ಮಣಿಯುಳ್ಳ ಬಟ್ಟೆ ತೊಟ್ಟು ಮಾದಕ ನೋಟದಲ್ಲಿ ನೋಡುತ್ತಿರುವ ಫೋಟೋಗಳು ಅಭಿಮಾನಿಗಳ ನಿದ್ದೆಗೆಡಿಸಿದೆ.
ಲೋಹದಂತಹ ಗೌನ್ ತೊಟ್ಟು ಸ್ಟನ್ನಿಂಗ್ ಲುಕ್
ಲೋಹದಿಂದ ಕೂಡಿದ ಗೌನ್ ತೊಟ್ಟು ಯೂರೋಪಿಯನ್ ರಾಣಿಯಂತೆ ಕಂಡಿದ್ದಾರೆ. ಅವರು ಒಂದೆಡೆ ನಿಂತಿದ್ದು ಅವರ ಸುತ್ತಲೂ ಇರುವ ಮಂಜುಗಡ್ಡೆ ಮನಮೋಹಕವಾಗಿ ಕಂಡುಬಂದಿದೆ.
ಪ್ರಧಾನ ಪಾತ್ರವಿದ್ರೆ ಮಾತ್ರ ಸಿನಿಮಾ ಒಪ್ಪಿಕೊಳ್ತೇನೆ
ನಾನು ನಾಯಕಿಗೆ ಪ್ರಧಾನ ಸ್ಥಾನವಿರುವ ಸಿನಿಮಾ ಮಾತ್ರ ಒಪ್ಪಿಕೊಳ್ಳುತ್ತೇನೆ. ಕತೆ ಚೆನ್ನಾಗಿದ್ದರೆ ಖಂಡಿತಾ ಯಾವುದೇ ಸಿನಿಮಾದಲ್ಲಾದರು ನಟಿಸುತ್ತೇನೆ ಮಹಿಳೆಯರ ಆಲೋಚನೆಗಳನ್ನು ಪ್ರತಿಬಿಂಬಿಸುವ ಪಾತ್ರಗಳನ್ನು ಒಪ್ಪಿಕೊಳ್ಳುತ್ತೇನೆ ಎಂದಿದ್ದಾರೆ ಸಮಂತಾ.
ಜೂನ್ 19ಕ್ಕೆ ಮಾ ಇಂಟಿ ಬಂಗಾರಂ ರಿಲೀಸ್
ಮಾ ಇಂಟಿ ಬಂಗಾರಂ ಸಿನಿಮಾವು ಜೂನ್ 19ರಂದು ರಿಲೀಸ್ ಆಗಲಿದೆ. ಈ ಸಿನಿಮಾದಲ್ಲಿ ಓದಿಕೊಂಡ ಯುವತಿ..ಗ್ರಾಮೀಣ ಭಾಗದ ಹಳ್ಳಿಗೆ ತರಳಿದಾಗ ಅವರನ್ನೆಲ್ಲ ಹೇಗೆ ನಿಭಾಯಿಸುತ್ತಾಳೆ. ಸಾಮಾಜಿಕ ಪಿಡುಗಿನ ಬಗ್ಗೆ ಅವರಲ್ಲಿ ಹೇಗೆ ಅರಿವು ಮೂಡಿಸುತ್ತಾಳೆ ಎನ್ನುವುದು ಕಥಾ ಹಂದರ.
ಇತ್ತೀಚೆಗೆ ಸಮಂತಾ ಮತ್ತು ನಾಗ ಚೈತನ್ಯ ಒಟ್ಟಾಗಿ ತಮ್ಮ ಹೊಸ ಸಂಗಾತಿಗಳೊಂದಿಗೆ ಕಾಣಸಿಕೊಂಡಿದ್ದರು. ಈ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಸಮಂತಾ ಮತ್ತು ನಾಗಚೈತನ್ಯರಿಗೆ ಡಿವೋರ್ಸ್ ಆಗಿ ವರ್ಷ ಕಳೆದರು ಅಭಿಮಾನಿಗಳಿಗೆ ಮಾತ್ರ ಅವರಿಬ್ಬರು ಜೊತೆಯಾಗಿರಬೇಕು ಎನ್ನುವುದೇ ಆಸೆಯಾಗಿದೆ.
ಸಮಂತಾ ಸಿನಿ ಪಯಣ
ನಟಿ ಸಮಂತಾ ಅವರು ಮಾ ಇಂಟಿ ಬಂಗಾರಂ, ದಿ ಫ್ಯಾಮಿಲಿ ಮ್ಯಾನ್, ರಂಗಸ್ಥಳಂ, ಓ ಬೇಬಿ, ಈಗ, ಖುಷಿ, ತೆರಿ, ಮಜಿಲಿ, ಶಾಂಕುಂತಲ, ಜಾನು ಸೇರಿದಂತೆ ಹಲವು ಸಿನಿಮಾದಲ್ಲಿ ನಟಿಸಿದ್ದಾರೆ.