ನಟಿ ಸಮಂತಾ ರುತ್ ಪ್ರಭು ಹಾಗೂ ರಾಜ್ ನಿಡಿಮೂರು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ವಿಯೆಟ್ನಾಂ ಪ್ರವಾಸದಲ್ಲಿದ್ದು, ಬೇಬಿಮೂನ್ ಫೋಟೋಸ್ಗಳನ್ನು ಹಂಚಿಕೊಂಡಿದ್ದಾರೆ.
ಪತಿ ಜೊತೆ ಎಂಜಾಯ್
ವಿಯೆಟ್ನಾಂನಲ್ಲಿ ಊಟ ಮಾಡುತ್ತಿರುವ ಫೋಟೋ, ಸುತ್ತಾಟ, ಮೋಜು ಮಸ್ತಿ ಮಾಡುತ್ತಿರುವ ಫೋಟೋಗಳನ್ನು ಸಮಂತಾ ಹಂಚಿಕೊಂಡಿದ್ದಾರೆ. ನೆಟ್ಟಿಗರು ದಂಪತಿಗೆ ಹಾರೈಸಿ ಕಾಮೆಂಟ್ ಮಾಡಿದ್ದಾರೆ.
ದಂಪತಿಯ ಮೋಜು ಮಸ್ತಿ ಫೋಟೋ ವೈರಲ್
ಒಂದೆಡೆ ನಿರ್ದೇಶಕ ರಾಜ್ ನಿಡಿಮೋರು ಅವರು ಲ್ಯಾಪ್ಟಾಪ್ ಹಿಡಿದು ಕೆಲಸ ಮಾಡುತ್ತಿದ್ದರೆ, ಮತ್ತೊಂದು ಕಡೆ ಸಮಂತಾ ಅವರು ಬೃಹತ್ ಬೋಜನದ ಫೋಟೋ ಕ್ಲಿಕ್ಕಿಸುತ್ತಿರುವ ಫೋಟೋಗಳಿವೆ.
ಮಾ ಇಂಟಿ ಬಂಗಾರಂ ಸಕ್ಸಸ್
ಸಮಂತಾ ಅವರು ನಟಿಸಿ, ನಿರ್ಮಾಣದ ಹೊಣೆ ಹೊತ್ತ ಮಾ ಇಂಟಿ ಬಂಗಾರಂ ಸಿನಿಮಾ ಸಾಕಷ್ಟು ಹಿಟ್ ಕಂಡಿತ್ತು. ಒಟಿಟಿಯಲ್ಲಿಯೂ ಹೆಚ್ಚಾಗಿಯೇ ಅಭಿಮಾನಿಗಳನ್ನು ಗಿಟ್ಟಿಸಿಕೊಂಡಿದೆ.
ಸಿನಿಮಾಗೆ ಕೊಂಚ ಬ್ರೇಕ್
ನಟ ನಾಗಚೈತನ್ಯ ಅವರೊಂದಿಗೆ ಡಿವೋರ್ಸ್, ಆರೋಗ್ಯದ ವಿಚಾರವಾಗಿ ಸಿನಿಮಾದಿಂದ ದೂರವಿದ್ದ ಸಮಂತಾ ಶುಭಂ ಸಿನಿಮಾ ಮೂಲಕ ಮತ್ತೆ ಸಿನಿಮಾಗೆ ಎಂಟ್ರಿಯಾದರು. ಮಾ ಇಂಟಿ ಬಂಗಾರಂ ಸಿನಿಮಾ ಮೂಲಕ ಮತ್ತೆ ಹಿಟ್ ನಟಿ ಎನಿಸಿಕೊಂಡಿದ್ದಾರೆ.
ಸ್ಯಾಮ್-ರಾಜ್ ಮದುವೆ
ಸಮಂತಾ ಅವರು ಕಳೆದ ವರ್ಷ ಹಿಟ್ ವೆಬ್ಸೀರಿಸ್ ಫ್ಯಾಮಿಲಿ ಮ್ಯಾನ್ ನಿರ್ದೇಶಕ ರಾಜ್ ನಿಡಿಮೋರು ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈಶ ಫೌಂಡೇಶನ್ನಲ್ಲಿ ಸರಳವಾಗಿ ಮದುವೆಯಾಗಿದ್ದರು.