ಟಾಲಿವುಡ್ ಬ್ಯೂಟಿ ಸಾನ್ವೆ ಮೇಘನಾ ಅವರು ಮೆರೂನ್ ಬಣ್ಣದ ಉಡುಪಿನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದು, ಇದಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.
ಮುತ್ತಿನ ನಗರಿ ಸುಂದರಿ
ಸಾನ್ವೆ ಅವರು 1997, ಸೆಪ್ಟೆಂಬರ್ 12ರಂದು ಹೈದರಾಬಾದ್‌ನಲ್ಲಿ ಜನಿಸಿದರು. ಇವರು ತೆಲುಗು ಕುಟುಂಬಕ್ಕೆ ಸೇರಿದವರಾಗಿದ್ದು, ಹೈದರಾಬಾದ್ನಲ್ಲೇ ಬೆಳೆದು ವಿದ್ಯಾಭ್ಯಾಸ ಮುಗಿಸಿದ್ದಾರೆ.
ವೃತ್ತಿಜೀವನದ ಆರಂಭ
2019ರಲ್ಲಿ ಮೆಗಾಸ್ಟಾರ್ ಚಿರಂಜೀವಿ ಅವರ 'ಸೈರಾ ನರಸಿಂಹ ರೆಡ್ಡಿ' ಚಿತ್ರದಲ್ಲಿ ಒಂದು ಸಣ್ಣ ಪಾತ್ರದ ಮೂಲಕ ಇವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.
ಜನಪ್ರಿಯತೆ ತಂದುಕೊಟ್ಟ ಸಿನಿಮಾ
2021ರಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾದ 'ಪಿಟ್ಟ ಕಥಲು' ಎಂಬ ಆಂಥಾಲಜಿ ಸಿನಿಮಾದಲ್ಲಿನ 'ರಾಮುಲ' ಪಾತ್ರ ಇವರಿಗೆ ದೊಡ್ಡ ಮಟ್ಟದ ಗುರುತನ್ನು ತಂದುಕೊಟ್ಟಿತು.
ಗಮನಾರ್ಹ ಚಿತ್ರಗಳು
ಆನಂದ್ ದೇವರಕೊಂಡ ಅಭಿನಯದ 'ಪುಷ್ಪಕ ವಿಮಾನಂ', 'ಮೋಸ್ಟ್ ಎಲಿಜಿಬಲ್ ಬ್ಯಾಚುಲರ್' (ಅತಿಥಿ ಪಾತ್ರ) ಮತ್ತು 'ಪ್ರೇಮ ವಿಮಾನಂ' ಚಿತ್ರಗಳಲ್ಲಿ ಇವರು ನಟಿಸಿದ್ದಾರೆ.
ಬಹುಭಾಷಾ ನಟಿ
ಇವರು ಕೇವಲ ತೆಲುಗಿಗೆ ಸೀಮಿತವಾಗದೆ, 2025ರಲ್ಲಿ ಬಿಡುಗಡೆಯಾದ 'ಕುಟುಂಬಸ್ಥನ್' ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೂ ಪದಾರ್ಪಣೆ ಮಾಡಿದ್ದಾರೆ. ಅಲ್ಲದೆ ಕನ್ನಡ ಚಿತ್ರಗಳಲ್ಲೂ ನಟಿಸುವ ಆಸಕ್ತಿ ಹೊಂದಿದ್ದಾರೆ.
ಕಲೆ ಮತ್ತು ಆಸಕ್ತಿಗಳು
ನಟನೆಯ ಜೊತೆಗೆ ಸಾನ್ವೇ ಅವರು ಉತ್ತಮ ನೃತ್ಯಗಾರ್ತಿ ಕೂಡ ಹೌದು. ಇವರಿಗೆ ಕ್ಯಾಲಿಗ್ರಫಿ ಕಲೆಯಲ್ಲೂ ಆಸಕ್ತಿಯಿದ್ದು, ಸುಮಾರು 16ಕ್ಕೂ ಹೆಚ್ಚು ಶೈಲಿಗಳಲ್ಲಿ ಬರೆಯುವುದನ್ನು ಕಲಿತಿದ್ದಾರೆ.
ಬೋಲ್ಡ್ ಫೋಟೋ
ಜಾಲತಾಣದಲ್ಲಿ ಆ್ಯಕ್ಟೀವ್ ಆಗಿರುವ ಮೇಘನಾ ಆಗಾಗ ಹಾಟ್ ಫೋಟೋಗಳನ್ನು ಹರಿಬಿಡುತ್ತಿರುತ್ತಾರೆ. ಇದೀಗ ಅವರು ಹಂಚಿಕೊಂಡಿರುವ ಮೆರೂನ್ ಬಣ್ಣದ ಉಡುಪಿನ ಫೋಟೋ ಅಭಿಮಾನಿಗಳ ಕಣ್ಮನ ಸೆಳೆದಿದೆ.