ಗೋಲ್ಡನ್​ ಗೌನ್​ನಲ್ಲಿ ಸ್ಟನ್ನಿಂಗ್ ಲುಕ್​ ಕೊಟ್ಟ ಮಾಡ್ರನ್ 'ಕನಕವತಿ'

ಮಮತಾ

ಗೋಲ್ಡನ್​ ಗೌನ್​ನಲ್ಲಿ ಸ್ಟನ್ನಿಂಗ್ ಲುಕ್​ ಕೊಟ್ಟ ಮಾಡ್ರನ್ 'ಕನಕವತಿ'

ಭಾರತೀಯ ರಾಷ್ಟ್ರೀಯ ಸಿನಿ ಅಕಾಡೆಮಿ ಪ್ರಶಸ್ತಿ ಕಾರ್ಯಕ್ರಮದಲ್ಲಿ ನಗುಮುಖದ ಚೆಲುವೆ ರುಕ್ಮಿಣಿ ವಸಂತ್​ ಭಾಗಿಯಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಗೆದ್ದುಕೊಂಡರು. ಪ್ರೋಗ್ರಾಂಗೆ ಧರಿಸಿದ್ದ ಗೋಲ್ಡನ್​ ಡ್ರೆಸ್​​ನಲ್ಲಿ 'ಬಘೀರ'ನ 'ಪುಟ್ಟಿ' ಹೇಗ್​ ಕಾಣ್ತಾರೆ ನೋಡಿ...

'ಕನಕವತಿ'ಗೆ ದಕ್ಕಿದ ಅತ್ಯುತ್ತಮ ನಟಿ ಪ್ರಶಸ್ತಿ

ಏಪ್ರಿಲ್​ 17ರಂದು ಮುಂಬೈನಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಸಿನಿ ಅಕಾಡೆಮಿ ಪ್ರಶಸ್ತಿ ಕಾರ್ಯಕ್ರಮದಲ್ಲಿ ರುಕ್ಮಿಣಿ ವಸಂತ್​ ಸಹ ಭಾಗಿಯಾಗಿದ್ದರು. ಕಾಂತಾರ: ಅಧ್ಯಾಯ 1 ಗಾಗಿ ಅತ್ಯುತ್ತಮ ನಟಿ ಪ್ರಶಸ್ತಿ ದಕ್ಕಿಸಿಕೊಂಡರು. ಚಿಟ್ಟೆಯಂತೆ ಕಾಣುವ ಗೋಲ್ಡನ್​ ಕಲರ್​ ಗೌನ್​ ಧರಿಸಿ, ಸಿಂಪಲ್​ ಆಗಿ ಮಿಂಚುತ್ತಿದ್ದರು.

ರುಕ್ಮಿಣಿ ವಸಂತ್​ ಸಿನಿ ಪಯಣ ಹೇಗಿದೆ ಗೊತ್ತಾ..?

ಬೀರಬಲ್ ಟ್ರೈಲಜಿ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಹೆಜ್ಜೆ ಇಟ್ಟ ರುಕ್ಮಿಣಿ ವಸಂತ್ ಸಪ್ತ ದಾಗರದಾಚೆಯೆಲ್ಲೋ ಸಿನಿಮಾದಿಂದ ಹಿಟ್​ ಕಂಡರು. ನಂತರ​ ಬ್ಯಾಕ್​ ಟು ಬ್ಯಾಕ್​ ಸಿನಿಮಾ ಮಾಡಿದರು. ಭೈರತಿ ರಣಗಲ್, ಬಘೀರ, ಅಪ್ಪುಡು ಇಪ್ಪುಡು ಎಪ್ಪುಡು, ವಿಜಯ್​ ಸೇತುಪತಿ ಜೊತೆ ಏಸಿಇ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು.

ಮೆಲ್ಲಿಸಾ 'ಟಾಕ್ಸಿಕ್​' ನಗುವಿಗೆ ಫ್ಯಾನ್ಸ್​ ಫಿದಾ..!

ಬಹುನಿರೀಕ್ಷಿತ ಚಿತ್ರ ಟಾಕ್ಸಿಕ್​ನಲ್ಲಿ ಐದನೇ ನಾಯಕಿಯಾಗಿ ರುಕ್ಮಿಣಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಅವರ ಪಾತ್ರದ ಹೆಸರು ಮೆಲ್ಲಿಸಾ.

ಕಾಂತಾರ: ಚಾಪ್ಟರ್​​1ಕ್ಕೆ 4 ಪ್ರಶಸ್ತಿ

ಭಾರತದ 12 ಚಿತ್ರರಂಗವನ್ನು ಪ್ರತಿನಿಧಿಸುವ ಭಾರತೀಯ ರಾಷ್ಟ್ರೀಯ ಸಿನಿ ಅಕಾಡೆಮಿ ಪ್ರಶಸ್ತಿ ಘೋಷಣೆಯಾಗಿತ್ತು. ಕನ್ನಡದಲ್ಲಿ ಎಲ್ಲ ಪ್ರಶಸ್ತಿಗಳನ್ನು ಕಾಂತಾರ: ಚಾಪ್ಟರ್​​1 ಸಿನಿಮಾಕ್ಕೆ ನೀಡಲಾಯಿತು. ಅತ್ಯುತ್ತಮ ನಟ, ಅತ್ಯುತ್ತಮ ನಿರ್ದೇಶಕನ ಪ್ರಶಸ್ತಿಯನ್ನು ರಿಷಬ್​ ಶೆಟ್ಟಿ ಪಡೆದುಕೊಂಡರು.

ಅವಾರ್ಡ್​ ಫಂಕ್ಷನ್​ನಲ್ಲಿ ಬಂಗಾರದ ಗೊಂಬೆಯಂತೆ ಮಿಂಚಿಂಗ್​

ಕಾಂತಾರ: ಚಾಪ್ಟರ್​​1 ಒಂದು ಸ್ಪೆಷಲ್​ ಸಿನಿಮಾ, ನನಗೆ ಅತ್ಯಂತ ವಿಶೇಷವಾದ ಸಿನಿಮಾ. ಈ ಸಿನಿಮಾಕ್ಕೆ ನಾನು ಅವಾರ್ಡ್​ ಪಡೆಯುತ್ತಿರುವುದು ಹೆಮ್ಮೆಯ ವಿಚಾರವಾಗಿದೆ ಎಂದು ಹೇಳಿಕೊಂಡಿದ್ದರು.