ಮಾದಕ ಲುಕ್​ನಲ್ಲಿ ಕನ್ನಡದ ರುಕ್ಕು

ಮೋಹನ್​ ಶೆಟ್ಟಿ

ಮಾದಕ ಲುಕ್​ನಲ್ಲಿ ಕನ್ನಡದ ರುಕ್ಕು

ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿದ 'ಕಾಂತಾರ' ಪ್ರೀಕ್ವೆಲ್​ ಚಿತ್ರದಲ್ಲಿ ಕನಕಾವತಿ ಪಾತ್ರದಲ್ಲಿ ಮಿಂಚಿದ ಸೌತ್ ಬ್ಯೂಟಿ ರುಕ್ಮಿಣಿ ವಸಂತ್​ಗೆ ಈಗ ಅಭಿಮಾನದ ಅಲೆ ಜೋರಾಗಿದೆ

ಬೀರ್​ಬಲ್​ ಮೊದಲ ಸಿನಿಮಾ

ಕನ್ನಡದ 'ಬೀರ್​ಬಲ್​' ಮೂಲಕ ಸ್ಯಾಂಡಲ್​ವುಡ್​ಗೆ ಕಾಲಿಟ್ಟ ರುಕ್ಕು, ಈಗ ಟಾಲಿವುಡ್, ಕಾಲಿವುಡ್​ ಸಿನಿಮಾಗಳಲ್ಲಿ ಅಭಿನಯಿಸಿ ಪ್ಯಾನ್ ಇಂಡಿಯಾ ನಟಿಯಾಗಿ ಬೆಳೆದಿದ್ದಾರೆ

'ಸಪ್ತ ಸಾಗರದಾಚೆ' ದಾಟಿ

ಈ ಚಿತ್ರದ ಮೂಲಕ ಭಾರೀ ಜನಪ್ರಿಯತೆ ಗಳಿಸಿದ ರುಕ್ಮಿಣಿ, ಬಳಿಕ ತಮಿಳು ಚಿತ್ರಗಳಲ್ಲಿ ನಟಿಸಿ, ಸಿನಿಪ್ರಿಯರಿಂದ ಸೈಎನಿಸಿಕೊಂಡಿದ್ದಾರೆ. ಇತ್ತೀಚೆಗಿನ 'ಕಾಂತಾರ ಚಾಪ್ಟರ್ 1' ನಟಿಗೆ ಹೊಸ ಆಯಾಮ, ಖ್ಯಾತಿಯನ್ನೇ ತಂದುಕೊಟ್ಟಿದೆ

ಟ್ರೆಂಡಿಂಗ್​ ಪಟ್ಟಿಯಲ್ಲಿ ಕನ್ನಡದ ಬೆಡಗಿ

ಟ್ರೆಂಡಿಂಗ್​ ಪಟ್ಟಿಯಲ್ಲಿರುವ ರುಕ್ಮಿಣಿ ವಸಂತ್ ಅವರ ಸಂಭಾವನೆ ವಿಚಾರ ಸದ್ಯ ಟಾಲಿವುಡ್​ ಅಂಗಳದಲ್ಲಿ ಸದ್ದು ಮಾಡುತ್ತಿದೆ. ವರದಿಗಳ ಪ್ರಕಾರ, ಪ್ರಸ್ತುತ ನಟಿಯ ಕೈಯಲ್ಲಿ ಮೂರರಿಂದ ನಾಲ್ಕು ಸಿನಿಮಾಗಳಿವೆ

'ಟಾಕ್ಸಿಕ್'​ನಲ್ಲಿ ಮೆಲಿಸಾ

ಗೀತು ಮೋಹನ್​ದಾಸ್​ ನಿರ್ದೇಶನದ, ಯಶ್​ ಅಭಿನಯದ 'ಟಾಕ್ಸಿಕ್' ಚಿತ್ರದಲ್ಲಿ ಐವರು ನಾಯಕಿಯರಿದ್ದಾರೆ. ಈ ಪೈಕಿ ರುಕ್ಮಿಣಿ ವಸಂತ್ ಕೂಡ ಒಬ್ಬರು. ಮೆಲಿಸಾ ಪಾತ್ರದಲ್ಲಿನ ಅವರ ಫಸ್ಟ್​ ಲುಕ್​, ನೋಡುಗರಲ್ಲಿ ಕುತೂಹಲ ಕೆರಳಿಸಿದೆ