ಹೆಚ್ಚಿತು ರುಕ್ಮಿಣಿ ಜನಪ್ರಿಯತೆ

ಭೂಮಿಕಾ ವಿ. ನಾಥ್​​​

ಹೆಚ್ಚಿತು ರುಕ್ಮಿಣಿ ಜನಪ್ರಿಯತೆ

'ಕಾಂತಾರ: ಚಾಪ್ಟರ್ 1' ಸಿನಿಮಾದಿಂದಾಗಿ ಪ್ಯಾನ್ ಇಂಡಿಯಾ ಮಟ್ಟದ ಕ್ರೇಜ್ ಪಡೆದುಕೊಂಡಿದ್ದಾರೆ. ಇದೀಗ ಅವರಿಗೆ ಪರಭಾಷೆಯಿಂದಲೂ ಸಾಕಷ್ಟು ಅವಕಾಶಗಳು ಸಿಗುತ್ತಿವೆ.

ಐಎಂಡಿಬಿ ಲಿಸ್ಟ್​​ನಲ್ಲಿ 2ನೇ ಸ್ಥಾನ

ಐಎಂಡಿಬಿ (ಇಂಟರ್ನೆಟ್ ಮೂವೀ ಡೇಟಾಬೇಸ್ ಸಂಸ್ಥೆಯು) ಪ್ರತಿವಾರ ಭಾರತದಲ್ಲಿರುವ ಜನಪ್ರಿಯ ಸೆಲೆಬ್ರಿಟಿಗಳು ಯಾರು ಎಂಬ ಲಿಸ್ಟ್‌ ಬಿಡುಗಡೆ ಮಾಡುತ್ತದೆ. ರಿಷಬ್ ಶೆಟ್ಟಿ ಭಾರತದ ನಂ.1 ಜನಪ್ರಿಯ ಸೆಲೆಬ್ರಿಟಿ ಎನಿಸಿಕೊಂಡರೆ ರುಕ್ಮಿಣಿ ವಸಂತ್ 2ನೇ ಸ್ಥಾನದಲ್ಲಿದ್ದಾರೆ.

5ನೇ ಸ್ಥಾನದಲ್ಲಿದ್ದ ರುಕ್ಕು 2ನೇ ಸ್ಥಾನಕ್ಕೆ

ಕಳೆದ ವಾರ 5 ನೇ ಸ್ಥಾನದಲ್ಲಿದ್ದವರು ಇದೀಗ ಜನಪ್ರಿಯತೆ ಹೆಚ್ಚಿ 2ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಕನಕವತಿಯಾಗಿ ಮಿಂಚಿದ ರುಕ್ಕು ಈಗ ಭಾರತದ ಸೆಲೆಬ್ರಿಟಿ ಕ್ರಶ್​

NTR ಸಿನಿಮಾದಲ್ಲೂ ಮಿಂಚಲು ಕನಕವತಿ ರೆಡಿ

ಕಾಂತಾರ ಮೂಲಕ ದೊಡ್ಡ ಮಟ್ಟಿನ ಸಕ್ಸಸ್​​​ ಕಂಡಿರುವ ನಟಿ ಇದೀಗ ಎನ್​ಟಿಆರ್​ ಮತ್ತು ಪ್ರಶಾಂತ್​ ನೀಲ್​ ಕಾಂಬಿನೇಷನ್​ನ ಹೊಸ ಸಿನಿಮಾದಲ್ಲೂ ನಾಯಕಿಯಾಗಿ ನಟಿಸುತ್ತಿದ್ದಾರೆ.

ನ್ಯಾಷನಲ್​ ಕ್ರಶ್​​​ ಎಂದ ನೆಟ್ಟಿಗರು

ರಶ್ಮಿಕಾ ಮಂದಣ್ಣ ನ್ಯಾಷನಲ್​​ ಕ್ರಶ್​ ಎಂದೇ ನೆಟ್ಟಿಗರು ಫೇಮಸ್​ ಮಾಡಿದ್ದರು. ಇದೀಗ ರುಕ್ಮಿಣಿಗೆ ಆ ಬಿರುದನ್ನ ನೀಡಿದ್ದಾರೆ.