ರುಕ್ಕು ಸೀರೆ ಲುಕ್!​

ರಮೇಶ್​ ಕುಮಾರ್​​ ಬಿ ಎಡಮೋಳೆ

ರುಕ್ಕು ಸೀರೆ ಲುಕ್!​

ನಟಿ ರುಕ್ಮಿಣಿ ವಸಂತ್ ಅವರ ಬಗ್ಗೆ ಕನ್ನಡಿಗರಿಗೆ ವಿಶೇಷವಾಗಿ ಹೇಳುವ ಅಗತ್ಯವಿಲ್ಲ. ಕನ್ನಡದಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿರುವ ರುಕ್ಮಿಣಿ, ಇತ್ತೀಚೆಗೆ ಕಾಂತಾರ: ಅಧ್ಯಾಯ 1 ಚಿತ್ರದ ಮೂಲಕ ದೇಶದ ಗಮನ ಸೆಳೆದಿದ್ದಾರೆ.

ರುಕ್ಮಿಣಿ ತಂದೆ ಕರ್ನಲ್

ರುಕ್ಮಿಣಿ ಅವರು 1996, ಡಿಸೆಂಬರ್ 10ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಕರ್ನಲ್ ವಸಂತ್ ವೇಣುಗೋಪಾಲ್ ಕರ್ನಾಟಕದ ಮೊದಲ ಅಶೋಕ ಚಕ್ರ ಪುರಸ್ಕಾರ ವಿಜೇತ. ತಾಯಿ ಸುಭಾಷಿಣಿ ವಸಂತ್ ಭರತನಾಟ್ಯ ನೃತ್ಯಗಾರ್ತಿ.

ಲಂಡನ್‌ನಲ್ಲಿ ಅಭಿನಯ ತರಬೇತಿ

ಬಾಲ್ಯದಲ್ಲಿ ಆರ್ಮಿ ಸ್ಕೂಲ್, ಏರ್ ಫೋರ್ಸ್ ಸ್ಕೂಲ್ ಮತ್ತು ಸೆಂಟರ್ ಫಾರ್ ಲರ್ನಿಂಗ್‌ನಲ್ಲಿ ಶಿಕ್ಷಣ ಪಡೆದ ರುಕ್ಮಿಣಿ, ಲಂಡನ್‌ನ ರಾಯಲ್ ಅಕಾಡೆಮಿ ಆಫ್ ಡ್ರಾಮ್ಯಾಟಿಕ್ ಆರ್ಟ್ಸ್‌ನಲ್ಲಿ ಅಭಿನಯದಲ್ಲಿ ಪದವಿ ಪಡೆದರು.

ಬೀರ್‌ಬಲ್ ಮೊದಲ ಸಿನಿಮಾ

ರುಕ್ಮಿಣಿ ವಸಂತ್‌ರ ಮೊದಲ ಚಿತ್ರ ಬೀರ್‌ಬಲ್ ಟ್ರಯಾಲಜಿ. ಇದು 2019ರಲ್ಲಿ ಬಿಡುಗಡೆಯಾದ ಕನ್ನಡ ಚಿತ್ರ. ಈ ಸಿನಿಮಾವನ್ನು ಎಂ.ಜಿ. ಶ್ರೀನಿವಾಸ್ ನಿರ್ದೇಶಿಸಿ, ನಟಿಸಿದ್ದಾರೆ.

ಸಪ್ತ ಸಾಗರದಾಚೆ ಎಲ್ಲೋ ಗೆಲುವಿನ ಸಿಹಿ

ರುಕ್ಮಿಣಿ ಅವರಿಗೆ ನಿಜವಾದ ಯಶಸ್ಸು ಸಿಕ್ಕಿದ್ದು 2023ರಲ್ಲಿ ತೆರೆಕಂಡ 'ಸಪ್ತ ಸಾಗರದಾಚೆ ಎಲ್ಲೋ – ಸೈಡ್ ಎ' ಮತ್ತು 'ಸೈಡ್ ಬಿ' ಚಿತ್ರಗಳ ಮೂಲಕ. ಈ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಜತೆ ನಟಿಸಿದರು.

ಸಾಲು ಸಾಲು ಸಿನಿಮಾಗಳು

'ಬಾನ ದಾರಿಯಲ್ಲಿ' ಸಿನಿಮಾದಲ್ಲಿ ಗಣೇಶ್‌ ಜತೆ ನಟಿಸಿ ಗಮನ ಸೆಳೆದರು. 2024ರಲ್ಲಿ 'ಬಗೀರ' ಮತ್ತು 'ಭೈರತಿ ರಾಣಗಲ್' ಚಿತ್ರಗಳು ವಾಣಿಜ್ಯಾತ್ಮಕ ಯಶಸ್ಸು ತಂದುಕೊಟ್ಟವು.

ಪರಭಾಷೆಯಲ್ಲೂ ಮಿಂಚು

ತೆಲುಗಿನಲ್ಲಿ 'ಅಪ್ಪುಡೊ ಇಪ್ಪುಡೊ ಎಪ್ಪುಡೊ' ಸಿನಿಮಾದಲ್ಲಿ ನಿಖಿಲ್ ಸಿದ್ಧಾರ್ಥನೊಂದಿಗೆ ಡೆಬ್ಯೂ ಮಾಡಿದರು. 2025ರಲ್ಲಿ ತಮಿಳಿನ 'ಏಸ್' (ವಿಜಯ್ ಸೇತುಪತಿ) ಮತ್ತು 'ಮದರಾಸಿ' (ಶಿವಕಾರ್ತಿಕೇಯನ್) ಚಿತ್ರಗಳಲ್ಲಿ ನಟಿಸಿದ್ದಾರೆ.

ಕಾಂತಾರದಿಂದ ಭರ್ಜರಿ ಯಶಸ್ಸು

ಕಾಂತಾರ: ಚಾಪ್ಟರ್ 1' ಚಿತ್ರದಲ್ಲಿ ಕನಕವತಿ ಪಾತ್ರದಲ್ಲಿ ರುಕ್ಕು ಅಭಿನಯ ಎಲ್ಲರ ಮನಗೆದ್ದಿತು. ಇದೀಗ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಚಿತ್ರದಲ್ಲಿ ನಟ ಯಶ್ ಜೊತೆ ನಟಿಸುತ್ತಿದ್ದಾರೆ.

ಕಿತ್ತಳೆ ಬಣ್ಣದ ಸೀರೆಯಲ್ಲಿ ಮಿಂಚಿದ ರುಕ್ಕು

ಸಿನಿಮಾ ಹೊರತುಪಡಿಸಿ ಜಾಲತಾಣದಲ್ಲೂ ಸಕ್ರಿಯರಾಗಿರುವ ರುಕ್ಕು​, ಆಗಾಗ ಕಣ್ಮನ ಸೆಳೆಯುವ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ಹಂಚಿಕೊಂಡಿರುವ ಕಿತ್ತಳೆ ಬಣ್ಣದ ಸೀರೆ ಧರಿಸಿದ ಫೋಟೋಗಳು ವೈರಲ್​ ಆಗಿವೆ.