ಬ್ಲಾಕ್ಬಸ್ಟರ್ ಆರ್ಆರ್ಆರ್ ಚಿತ್ರದಲ್ಲಿ ಮಲ್ಲಿ ಪಾತ್ರದಲ್ಲಿ ನಟಿಸಿದ ಬಾಲನಟಿ ಟ್ವಿಂಕಲ್ ಶರ್ಮಾರ ಇತ್ತೀಚಿನ ಫೋಟೋಗಳು ವೈರಲ್ ಆಗಿವೆ. ಟ್ವಿಂಕಲ್ ಅವರ ಗ್ಲಾಮರಸ್ ಅವತಾರವನ್ನು ಕಂಡು ಅಭಿಮಾನಿಗಳು ಹುಬ್ಬೇರಿಸಿದ್ದಾರೆ.
ಮರೆಯಲಾಗದ ಪಾತ್ರ
ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ್ದ 'RRR' ಚಿತ್ರದಲ್ಲಿ ಇಡೀ ಕಥೆಗೆ ದಿಕ್ಸೂಚಿಯಾಗಿದ್ದ ಮುಗ್ಧ ಬುಡಕಟ್ಟು ಬಾಲಕಿ 'ಮಲ್ಲಿ' ಪಾತ್ರವನ್ನು ಯಾರೂ ಮರೆಯಲು ಸಾಧ್ಯವಿಲ್ಲ.
ಭಾರಿ ಬದಲಾವಣೆ ಮೂಲಕ ಸುದ್ದಿ
ಮುಗ್ಧ ಬುಡಕಟ್ಟು ಬಾಲಕಿ 'ಮಲ್ಲಿ' ಪಾತ್ರ ನಿರ್ವಹಿಸಿದ್ದ ಬಾಲನಟಿ ಟ್ವಿಂಕಲ್ ಶರ್ಮಾ ಇದೀಗ ಬಿಗ್ ಟ್ರಾನ್ಸ್‌ಫಾರ್ಮೇಷನ್ ಮೂಲಕ ಸುದ್ದಿಯಲ್ಲಿದ್ದಾರೆ. ಆಕೆಯ ಹೊಸ ಅವತಾರ ಹುಬ್ಬೇರಿಸುವಂತಿದೆ.
ಕಥೆಯ ಜೀವಾಳ
ಚಿತ್ರದಲ್ಲಿ ಬ್ರಿಟಿಷರಿಂದ ಅಪಹರಣಕ್ಕೊಳಗಾಗುವ ಮಲ್ಲಿ ಪಾತ್ರದ ಅವಧಿ ಕಡಿಮೆಯಿದ್ದರೂ, ಇಡೀ ಚಿತ್ರದ ಎಮೋಷನಲ್ ಬೆನ್ನೆಲುಬಾಗಿ ಮತ್ತು ಕಥೆಗೆ ಅಸಲಿ ಕಿಕ್ ನೀಡುವ ಮುಖ್ಯ ಪ್ರೇರಕ ಶಕ್ತಿಯಾಗಿ ಈ ಪಾತ್ರ ಪ್ರೇಕ್ಷಕರ ಮನ ಗೆದ್ದಿತ್ತು.
ಹಿಮಾಚಲ ಪ್ರದೇಶದ ಪ್ರತಿಭೆ
ಹಿಮಾಚಲ ಪ್ರದೇಶದ ಸೋಲನ್ ಮೂಲದವರಾದ ಟ್ವಿಂಕಲ್ ಶರ್ಮಾ, ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಮನರಂಜನಾ ಕ್ಷೇತ್ರಕ್ಕೆ ಕಾಲಿಟ್ಟವರು. ಕೇವಲ ಎರಡು ವರ್ಷದ ಮಗುವಾಗಿದ್ದಾಗಿನಿಂದಲೇ ಇವರು ನೃತ್ಯ ತರಬೇತಿ ಪಡೆದಿದ್ದಾರೆ.
ಗ್ಲಾಮರಸ್ ಅವತಾರಕ್ಕೆ ಫ್ಯಾನ್ಸ್ ಫಿದಾ
ಮುಗ್ಧ ಮಲ್ಲಿ ಪಾತ್ರದ ಮೂಲಕ ಭಾರತದಾದ್ಯಂತ ಪರಿಚಿತರಾಗಿದ್ದ ಈ ಬಾಲನಟಿ, ಈಗ ಬೆಳೆದು ದೊಡ್ಡವಳಾಗಿದ್ದು, ತಮ್ಮ ಹೊಸ ಗ್ಲಾಮರಸ್ ಫೋಟೋಶೂಟ್ ಮೂಲಕ ನೆಟ್ಟಿಗರು ಮತ್ತು ಅಭಿಮಾನಿಗಳನ್ನು ಆಶ್ಚರ್ಯಚಕಿತರನ್ನಾಗಿಸಿದ್ದಾರೆ.
ವೈರಲ್ ಫೋಟೋಶೂಟ್
ಸುಂದರ ಬಿದಿರಿನ ಕಮಾನುಗಳಿರುವ ಬೆಳಕಿನ ಹಾದಿಯಲ್ಲಿ ಟ್ವಿಂಕಲ್ ಮಾಡಿಸಿರುವ ಫೋಟೋಶೂಟ್ ಸಖತ್ ವೈರಲ್ ಆಗಿದೆ. ಫ್ಲೋರಲ್ ಸ್ಲೀವ್‌ಲೆಸ್ ಟಾಪ್ ಮತ್ತು ಫ್ಯಾಶನೇಬಲ್ ಡೆನಿಮ್ ಮಿನಿ ಸ್ಕರ್ಟ್ ಧರಿಸಿ ಸ್ಟೈಲಿಶ್ ಆಗಿ ಪೋಸ್ ನೀಡಿದ್ದಾರೆ.
ಆತ್ಮವಿಶ್ವಾಸದ ನಡಿಗೆ
ಅತ್ಯಂತ ಸುಂದರವಾದ ವಾರ್ಮ್ ಲೈಟಿಂಗ್‌ನಲ್ಲಿ, ಆಕರ್ಷಕ ಪೋಸ್‌ಗಳೊಂದಿಗೆ ಕ್ಯಾಮೆರಾ ಕಣ್ಣಿಗೆ ಬಿದ್ದಿರುವ ಟ್ವಿಂಕಲ್ ಅವರ ಆತ್ಮವಿಶ್ವಾಸ ಮತ್ತು ನಯಭರಿತ ನಡಿಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಪ್ರಶಂಸೆ ಗಳಿಸುತ್ತಿದೆ.
'ದೃಶ್ಯಂ' ನಟಿಗೆ ಹೋಲಿಕೆ
'ದೃಶ್ಯಂ' ಚಿತ್ರ ಖ್ಯಾತಿಯ ಬಾಲನಟಿ ಎಸ್ತರ್ ಅನಿಲ್ ಬೆಳೆದು ದೊಡ್ಡವರಾಗಿ ಗ್ಲಾಮರಸ್ ಫೋಟೋಶೂಟ್ ಮೂಲಕ ಹೇಗೆ ಗಮನ ಸೆಳೆದಿದ್ದರೋ, ಅದೇ ರೀತಿ ಈಗ ಟ್ವಿಂಕಲ್ ಕೂಡ ಮಾಡರ್ನ್ ಲುಕ್ ಮೂಲಕ ಎಲ್ಲರ ಹುಬ್ಬೇರಿಸುತ್ತಿದ್ದಾರೆ.