ಲಾಸ್​ ಏಂಜಲೀಸ್​ ಬೀದಿಯಲ್ಲಿ ರೋಜಾ ಪುತ್ರಿ!

ರಮೇಶ್​ ಕುಮಾರ್​​ ಬಿ ಎಡಮೋಳೆ

ಲಾಸ್​ ಏಂಜಲೀಸ್​ ಬೀದಿಯಲ್ಲಿ ರೋಜಾ ಪುತ್ರಿ!

ಮಾಜಿ ಸಚಿವೆ ಹಾಗೂ ಜನಪ್ರಿಯ ಚಲನಚಿತ್ರ ನಟಿ ರೋಜಾ ಅವರ ಪುತ್ರಿ ಅನ್ಶು ಸೆಲ್ವಮಣಿ ಸದ್ಯ ಅಮೆರಿಕದ ಲಾಸ್ ಏಂಜಲೀಸ್ ನಗರದಲ್ಲಿ ರಜಾ ದಿನಗಳನ್ನು ಕಳೆಯುತ್ತಿದ್ದು, ಫೋಟೋಗಳು ವೈರಲ್​ ಆಗಿವೆ.

ಕನಸುಗಳ ಬೆನ್ನೇರಿ

ತಮ್ಮ ಲಾಸ್ ಏಂಜಲೀಸ್ ಪ್ರವಾಸದ ವೇಳೆ ತಮ್ಮ ದೀರ್ಘಕಾಲದ ಕನಸುಗಳು ಹಾಗೂ ಆಸೆಗಳನ್ನು ಒಂದೊಂದಾಗಿ ಈಡೇರಿಸಿಕೊಳ್ಳುತ್ತಿರುವುದಾಗಿ ಅನ್ಶು ಸೆಲ್ವಮಣಿ ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ.

ಬಟರ್‌ಬೀಯರ್ ಸವಿದ ಅನ್ಶು

ಪ್ರಸಿದ್ಧ ಹ್ಯಾರಿ ಪಾಟರ್ ಪುಸ್ತಕಗಳು ಮತ್ತು ಚಲನಚಿತ್ರಗಳಲ್ಲಿ ಬರುವ ವಿಶೇಷ 'ಬಟರ್‌ಬೀಯರ್' ಸವಿದು ಆ ಅನುಭವವನ್ನು ಆನಂದಿಸಿರುವುದಾಗಿ ಅನ್ಶು ಸೆಲ್ವಮಣಿ ಅವರು ತಿಳಿಸಿದ್ದಾರೆ.

ಸ್ಟುಡಿಯೋ ಟೂರ್‌

ಲಾಸ್ ಏಂಜಲೀಸ್‌ನಲ್ಲಿರುವ ಪ್ರಸಿದ್ಧ ಸ್ಟುಡಿಯೋ ಟೂರ್‌ನಲ್ಲಿ ಭಾಗವಹಿಸಿ, ಅಲ್ಲಿನ ಮನರಂಜನಾ ಸೌಲಭ್ಯಗಳನ್ನು ಹಾಗೂ ರೋಲರ್ ಕೋಸ್ಟರ್ ಸವಾರಿಯನ್ನು ಸವಿದು ರೋಮಾಂಚನಗೊಂಡಿದ್ದಾರೆ.

ಫೋಟೋಗಳು ವೈರಲ್​

ತಮ್ಮ ಪ್ರವಾಸದ ಸುಂದರ ಕ್ಷಣಗಳ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಪೋಸ್ಟ್ ಮಾಡಿದ್ದು, ಅವುಗಳು ಸದ್ಯ ಅಭಿಮಾನಿಗಳ ಗಮನ ಸೆಳೆದು ವೈರಲ್ ಆಗುತ್ತಿವೆ.

ಸಿನಿಮಾದಿಂದ ದೂರ

ಸಿನಿಮಾ ಕ್ಷೇತ್ರದಿಂದ ತುಸು ದೂರವಿದ್ದರೂ, ರೋಜಾ ಅವರ ಕುಟುಂಬದ ಈ ವಿಶೇಷ ಸುದ್ದಿಗಳು ಮತ್ತು ಮಕ್ಕಳ ಅಪ್‌ಡೇಟ್‌ಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ್ಗೆ ಚರ್ಚೆಗೆ ಗ್ರಾಸವಾಗುತ್ತಿರುತ್ತವೆ.