ಬಿಗ್​​ ಮನೆಯಿಂದ ಹೊರಬರುತ್ತಲೇ ರಿಷಾ ಹಾಟ್​ಲುಕ್​​

ಭೂಮಿಕಾ ವಿ. ನಾಥ್​​​

ಬಿಗ್​​ ಮನೆಯಿಂದ ಹೊರಬರುತ್ತಲೇ ರಿಷಾ ಹಾಟ್​ಲುಕ್​​

ರಿಷಾ ಗೌಡ ‘ ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ’ ಕಾರ್ಯಕ್ರಮಕ್ಕೆ ವೈಲ್ಡ್‌ ಕಾರ್ಡ್‌ ಎಂಟ್ರಿ ಕೊಟ್ಟಿದ್ದರು. 5ನೇ ವಾರ ಹೊರಬಂದ ರಿಷಾ ಬ್ಲ್ಯಾಕ್​​ ಬಾಡಿಕಾನ್​ ಡ್ರೆಸ್​​​ ತೊಟ್ಟು ಬೋಲ್ಡ್​​ ಲುಕ್​ನಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಮತ್ತೆ ಲ್ಯಾವೆಂಡರ್​​ ಡ್ರೆಸ್​ ತೊಟ್ಟು ಮಿಂಚಿದ್ದಾರೆ.

ಹಾಟ್ ಫೋಟೋಶೂಟ್

ರಿಷಾ ಗೌಡ ಮೂಲತಃ ಅಥ್ಲೀಟ್. ಶಾಲಾ ದಿನಗಳಲ್ಲೇ ಸಾಕಷ್ಟು ಪ್ರಶಸ್ತಿ ಪಡೆದಿದ್ದಾರೆ. ಸದ್ಯ ಇನ್ಸ್​ಟಾಗ್ರಾಂ ನಲ್ಲಿ ರಿಷಾ ಬ್ಯಾಕ್​ ಟು ಬ್ಯಾಕ್​​ ಫೋಟೋಗಳನ್ನ ಹಂಚಿಕೊಳ್ಳುತ್ತಿದ್ದಾರೆ.

ಮಾಡ್ಲಿಂಗ್​ ಕ್ಷೇತ್ರದಲ್ಲೂ ಹೆಸರು

ಮಾಡೆಲಿಂಗ್ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟು, ಮಿಸ್ ಕರ್ನಾಟಕ 2020 ರನ್ನರ್ ಅಪ್ ಆಗಿದ್ದಾರೆ.

ಅಬ್ಬರಿಸಿ, ಸ್ಟ್ರಾಂಗ್‌ ಎಂದು ತೋರಿಸಿಕೊಂಡಿದ್ದರು

ವೈಲ್ಡ್ ಕಾರ್ಡ್ ಮೂಲಕ ಬಿಗ್‌ಬಾಸ್ 12ರ ಮನೆಗೆ ಎಂಟ್ರಿ ಕೊಟ್ಟವರು ರಿಷಾ. ಬರುತ್ತಿದ್ದಂತೆಯೇ ಎಲ್ಲರ ಮುಂದೆ ಅಬ್ಬರಿಸಿ, ಸ್ಟ್ರಾಂಗ್‌ ಎಂದು ತೋರಿಸಿಕೊಂಡಿದ್ದರು.

ಮಾತಿನ ಮೂಲಕವೇ ಚಾಟಿ ಏಟು

ಪ್ರಾರಂಭದಲ್ಲಿ ಎಲ್ಲರೊಂದಿಗೆ ತಮಾಷೆ ಮಾಡಿಕೊಂಡು ಚೆನ್ನಾಗಿಯೇ ಇದ್ದರು. ಆದರೆ ಮತ್ತೆ ಮತ್ತೆ ಜಗಳ, ಕಿರುಚಾಡುತ್ತಲೇ ಕಾಲಕಳೆದರು.

ಗಿಲ್ಲಿ ಬಕೆಟ್ ವಿಷಯಕ್ಕೆ ಗಲಾಟೆ

ಇನ್ನೂ ಇತ್ತೀಚಿಗೆ ಬಾತ್‌ರೂಮ್ ಬಳಿ ರಿಷಾ ಹಾಗೂ ಗಿಲ್ಲಿ ಬಕೆಟ್ ವಿಷಯಕ್ಕೆ ಗಲಾಟೆ ಮಾಡಿಕೊಂಡಿದ್ದರು. ಆದರೆ ಬಕೆಟ್ ಕೊಡದಿದ್ದಕ್ಕೆ ರಿಷಾ ಬಟ್ಟೆಯನ್ನು ಗಿಲ್ಲಿ ಬಾತ್‌ರೂಮ್ ಬಳಿ ತಂದು ಹಾಕಿದ್ದರು.