ಕುಟುಂಬದ ಜತೆ ಗೋವಾ ವೆಕೇಶನ್​​​ನಲ್ಲಿ ರಿಷಬ್​​ ಶೆಟ್ಟಿ

ಭೂಮಿಕಾ ವಿ. ನಾಥ್​​​

ಕುಟುಂಬದ ಜತೆ ಗೋವಾ ವೆಕೇಶನ್​​​ನಲ್ಲಿ ರಿಷಬ್​​ ಶೆಟ್ಟಿ

ಬ್ಯಾಕ್​​​ ಟು ಬ್ಯಾಕ್​ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದ ನಟ ರಿಷಬ್​ ಶೆಟ್ಟಿ ಫ್ಯಾಮಿಲಿ​ಗೆ ಟೈಮ್​ ಕೊಡೋಕೆ ಆಗುತ್ತಿಲ್ಲ ಎಂದಿದ್ದರು. ಈಗಷ್ಟೇ ಕುಟುಂಬದ ಜತೆ ಟೆಂಪಲ್​ ರನ್​ ಮುಗಿಸಿ ಸದ್ಯ ಗೋವಾ ವೆಕೇಶನ್​​​ ಎಂಜಾಯ್​ ಮಾಡುತ್ತಿದ್ದಾರೆ.

ಪೋಟೋಸ್​ ಶೇರ್​ ಮಾಡಿದ ಪ್ರಗತಿ

ತಮ್ಮ ಇನ್’ಸ್ಟಾಗ್ರಾಂ ಖಾತೆಯಲ್ಲಿ ಗೋವಾ ವೆಕೇಶನ್ ಫೋಟೋಗಳನ್ನು ಪ್ರಗತಿ ಶೆಟ್ಟಿ ಹಂಚಿಕೊಂಡಿದ್ದಾರೆ.

Throwback to the Goa trip ಎಂದು ಕ್ಯಾಪ್ಶನ್​​

ಗೋವಾ ವೆಕೇಶನ್ ಫೋಟೋಗಳನ್ನು ಶೇರ್ ಮಾಡಿದ್ದು, Throwback to the Goa trip ಎಂದು ಬರೆದುಕೊಂಡು, ಫ್ಯಾಮಿಲಿ ಫೋಟೋಸ್​ ಇನ್ಸ್​ಟಾಗ್ರಾಂನಲ್ಲಿ ಶೇರ್​​ ಮಾಡಿದ್ದಾರೆ.

ಬೋಟ್​ನಲ್ಲಿ ಫ್ಯಾಮಿಲಿ ಜತೆ ಪೋಸ್​​

ರಿಷಬ್ ತಮ್ಮ ಪತ್ನಿ ಹಾಗೂ ಮಕ್ಕಳ ಜೊತೆ ಸಮುದ್ರದ ಮೇಲೆ ಬೋಟ್ ರೈಡ್ ಮಾಡುತ್ತಾ ಎಂಜಾಯ್ ಮಾಡಿದ್ದಾರೆ.

‘ಜೈ ಹನುಮಾನ್’ ಸಿನಿಮಾದಲ್ಲಿ ಹನುಮಂತನಾಗಿ ರಿಷಬ್ ಶೆಟ್ಟಿ

ಬಹು ನಿರೀಕ್ಷಿತ ‘ಜೈ ಹನುಮಾನ್’ ಸಿನಿಮಾದಲ್ಲಿ ಹನುಮಂತನಾಗಿ ರಿಷಬ್ ಶೆಟ್ಟಿ ನಟಿಸುತ್ತಿದ್ದಾರೆ. ರಿಷಬ್ ಶೆಟ್ಟಿ ಕಾಂತಾರ ಬಳಿಕ ಹಲವಾರು ಸಿನಿಮಾಗಳಿಗೆ ಸಹಿ ಹಾಕಿದ್ದಾರೆ. ಆದರೆ ಇದರಲ್ಲಿ ಕನ್ನಡದ ಯಾವ ಸಿನಿಮಾ ಕೂಡ ಇಲ್ಲ. ಬಹು ನಿರೀಕ್ಷಿತ ‘ಜೈ ಹನುಮಾನ್’ ಸಿನಿಮಾದಲ್ಲಿ ಹನುಮಂತನಾಗಿ ರಿಷಬ್ ಶೆಟ್ಟಿ ನಟಿಸುತ್ತಿದ್ದಾರೆ.