ಕಾಂತಾರ ಚಾಪ್ಟರ್​-1 ಯಶಸ್ಸಿನ ಬೆನ್ನಲ್ಲೇ ಗೋವಾ ಸಿಎಂ ಭೇಟಿಯಾದ ರಿಷಬ್- ಪ್ರಗತಿ​

ಬಾಬುಪ್ರಸಾದ್​ ಮೋಡಿಸ್​

ಕಾಂತಾರ ಚಾಪ್ಟರ್​-1 ಯಶಸ್ಸಿನ ಬೆನ್ನಲ್ಲೇ ಗೋವಾ ಸಿಎಂ ಭೇಟಿಯಾದ ರಿಷಬ್- ಪ್ರಗತಿ​

ಕಾಂತಾರ ಚಾಪ್ಟರ್​-1 ಯಶಸ್ಸಿನ ಬೆನ್ನಲ್ಲೇ ಗೋವಾ ಮುಖ್ಯಮಂತ್ರಿ ಪ್ರಮೋದ್​ ಸಾವಂತ್​ ಅವರನ್ನು ರಿಷಬ್​ಶೆಟ್ಟಿ ಮತ್ತು ಪತ್ನಿ ಪ್ರಗತಿ ಶೆಟ್ಟಿ ಭೇಟಿಯಾದರು.

ದಂಪತಿಗೆ ಸನ್ಮಾನ

ಮುಖ್ಯಮಂತ್ರಿ ಪ್ರಮೋದ್​ ಸಾವಂತ್​ ಅವರು ದಂಪತಿ ರಿಷಬ್​ಶೆಟ್ಟಿ ಮತ್ತು ಪತ್ನಿ ಪ್ರಗತಿ ಶೆಟ್ಟಿ ಅವರಿಗೆ ಸನ್ಮಾನಿಸಿದರು.

ಸಿಎಂ ಜೊತೆ ಅದ್ಭುತ ಸಮಯ

ಸಿಎಂ ಪ್ರಮೋದ್​ ಸಾವಂತ್​ ಅವರೊಂದಿಗೆ ಪಣಜಿಯ ಅಲ್ಟಿನ್ಹೋದಲ್ಲಿರುವ ಮಹಾಲಕ್ಷ್ಮಿಯಲ್ಲಿ ಅದ್ಭುತ ಸಮಯ ಕಳೆದೆವು ಎಂದ ರಿಷಬ್​.

ಸಿಎಂ ಜೊತೆ ಚರ್ಚೆ

ಗೋವಾ, ಸಿನಿಮಾ, ಅಭಿವೃದ್ಧಿ ಮತ್ತು ರಾಜ್ಯದ ಶ್ರೀಮಂತ ಸಾಂಸ್ಕೃತಿಕ ಮನೋಭಾವದ ಕುರಿತು ಚರ್ಚೆ ನಡೆಯಿತು.

ಫೋಟೋಗಳು ವೈರಲ್​

ಸಿಎಂ ಪ್ರಮೋದ್​ ಸಾವಂತ್​ ಅವರನ್ನು ಭೇಟಿ ಮಾಡಿದ ಫೋಟೋಗಳನ್ನು ರಿಷಬ್​ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.